ಸ್ನಾತಕೋತ್ತರ ಕೇಂದ್ರ ಪ್ರಾರಂಭಿಸಲು ಶಾಸಕರಿಗೆ ಮನವಿ

| Published : Feb 27 2024, 01:31 AM IST

ಸಾರಾಂಶ

ಚಿಂಚೋಳಿಯಲ್ಲಿ ಸ್ನಾತಕೋತ್ತರ ಕೇಂದ್ರ ಪ್ರಾರಂಭಿಸುವಂತೆ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಶಾಸಕ ಡಾ.ಅವಿನಾಶ ಜಾಧವ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಚಿಂಚೋಳಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಕೇಂದ್ರ ಮಂಜೂರಿಗೊಳಿಸಿ ಗ್ರಾಮೀಣ ಪ್ರದೇಶದ ಬಡವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಹಳೆಯ ವಿದ್ಯಾರ್ಥಿಗಳು ಶಾಸಕ ಡಾ. ಅವಿನಾಶ ಜಾಧವ್‌ಗೆ ಮನವಿ ಪತ್ರ ಸಲ್ಲಿಸಿದರು.ಚಿಂಚೋಳಿ ತಾಲೂಕಿನಲ್ಲಿ ಎರಡು ಸರ್ಕಾರಿ ಪದವಿ ಮಹಾವಿದ್ಯಾಲಯಗಳು ಮತ್ತು ಖಾಸಗಿ ಪದವಿ ಮಹಾವಿದ್ಯಾಲಯವಿದೆ. ಪದವಿಯಲ್ಲಿ ಒಟ್ಟು ೧೫೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಪಟ್ಟಣದಲ್ಲಿ ಸ್ನಾತಕೋತ್ತರ ಕೇಂದ್ರ ಮಂಜೂರಿಗೊಳಿಸಿ ಪ್ರಾರಂಭಿಸಿದರೆ ಬಹಳ ಅನುಕೂಲವಾಗಿದೆ ಎಂದು ವಿದ್ಯಾರ್ಥಿಗಳು ಶಾಸಕರಿಗೆ ಅಗ್ರಹಿಸಿದರು.

ಕಲಬುರಗಿ ಮತ್ತು ಬೀದರ ಜಿಲ್ಲೆಗಳು ಚಿಂಚೋಳಿಯಿಂದ ಬಹಳಷ್ಟು ದೂರದಲ್ಲಿವೆ. ಗ್ರಾಮೀಣ ಪ್ರದೇಶ ಬಡ ವಿದ್ಯಾರ್ಥಿಗಳು ನಗರದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುವುದಕ್ಕೆ ಅಗುತ್ತಿಲ್ಲ.ಅನೇಕರು ಮಧ್ಯೆದಲ್ಲಿಯೇ ಕಾಲೇಜು ವಿದ್ಯಾಬ್ಯಾಸ ಸ್ದಗಿತಗೊಳಿಸುತ್ತಿದ್ದಾರೆ ಸರಕಾರದ ಗಮನಕ್ಕೆ ತಂದು ಪ್ರಸಕ್ತ ಸಾಲಿನಲ್ಲಿ ಸ್ನಾತಕೋತ್ತರ ಕೇಂದ್ರ ಪ್ರಾರಂಭಿಸಬೆಕೆಂದು ಮನವಿ ಪತ್ರವನ್ನು ಸಲ್ಲಿಸಿದರು.

ಶಾಸಕ ಡಾ.ಅವಿನಾಶ ಜಾಧವ್ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಪಟ್ಟಣದಲ್ಲಿ ಸ್ನಾತಕೋತ್ತರ ಕೇಂದ್ರ ಪ್ರಾರಂಭಿಸುವಂತೆ ಸರ್ಕಾರದ ಗಮನಕ್ಕೆ ತರಲಾಗಿದೆ. ಈಗಾಗಲೇ ಗುಲಬರ್ಗಾ ವಿಶ್ವವಿದ್ಯಾಲಯ ಅಧ್ಯಯನ ತಂಡ ಸಮೀಕ್ಷೆ ನಡೆಸಿದೆ ಸ್ನಾತಕೋತ್ತರ ಕೇಂದ್ರ ಪ್ರಾರಂಭ ಅಗಲಿದೆ ಎಂದು ವಿಶ್ವಾಸ ನೀಡಿದರು. ಅಶೋಕಬಾಬು, ಶ್ರೀನಿವಾಸರೆಡ್ಡಿ, ಹುಲಿಗೆಪ್ಪ ಕಮಲಾಕರ ಇನ್ನಿತರಿದ್ದರು.