ಸಾರಾಂಶ
ಕಾಮಗಾರಿ ಸ್ಥಳದಲ್ಲಿ ಮೂರು ದಿನಗಳ ಹಿಂದೆ 15 ಅಡಿ ಆಳದಲ್ಲಿ ಬಿದ್ದಿದ್ದ ನಾಯಿಯನ್ನು ಬುಧವಾರ ಅಗ್ನಿಶಾಮಕ ದಳ, ಹಸಿರು ಸೇನಾ ಪಡೆ, ಸಿವಿಲ್ ಡಿಫೆನ್ಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಟ್ಯಾನರಿ ರೋಡ್ ಫ್ರೇಜರ್ ಟೌನ್ ಮೆಟ್ರೋ ಭೂಗತ ನಿಲ್ದಾಣದ ಕಾಮಗಾರಿ ಸ್ಥಳದಲ್ಲಿ ಮೂರು ದಿನಗಳ ಹಿಂದೆ 15 ಅಡಿ ಆಳದಲ್ಲಿ ಬಿದ್ದಿದ್ದ ನಾಯಿಯನ್ನು ಬುಧವಾರ ಅಗ್ನಿಶಾಮಕ ದಳ, ಹಸಿರು ಸೇನಾ ಪಡೆ, ಸಿವಿಲ್ ಡಿಫೆನ್ಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.ಬೇಸ್‌ಮೆಂಟ್ ಕಾಮಗಾರಿ ನಡೆಯುತ್ತಿದ್ದ ಆಳಕ್ಕೆ ಅಚಾನಕ್ಕಾಗಿ ಬಿದ್ದಿದ್ದ ನಾಯಿ ಅಲ್ಲಿ ಅಳವಡಿಸಿಕೊಳ್ಳಲಾಗಿದ್ದ ಕಬ್ಬಿಣದ ಬೀಮ್ ಮೇಲೆ ನಿಂತಿತ್ತು. ಹೆಚ್ಚು ಚಲಿಸಲಾಗದೆ, ಮೇಲೆಯೂ ಬರಲಾಗದೆ ಮೂರು ದಿನಗಳಿಂದ ಆಗಾಗ ಗೋಳಾಡುತ್ತಿತ್ತು. ಇದನ್ನು ಗಮನಿಸಿದ್ದರೂ ಎಲ್ ಆ್ಯಂಡ್ ಟಿ ಕಂಪನಿ ಸಿಬ್ಬಂದಿಯಿಂದ ನಾಯಿ ರಕ್ಷಣೆ ತೀರಾ ಕಷ್ಟವಾಗಿತ್ತು. ಹೀಗಾಗಿ ಈ ವಿಷಯವನ್ನು ಅಗ್ನಿಶಾಮದ ದಳಕ್ಕೆ ತಿಳಿಸಿದ್ದಾರೆ. ಬುಧವಾರ ಸ್ಥಳಕ್ಕೆ ಬಂದ ಸಿಬ್ಬಂದಿ ಕೆಳಗಿಳಿದು ನಾಯಿಯನ್ನು ರಕ್ಷಿಸಿ ಮೇಲಕ್ಕೆ ತಂದಿದ್ದಾರೆ.