ಸಾರಾಂಶ
ಟೇಕಲ್ ಬೆಟ್ಟಗುಡ್ಡಗಳಿಂದ ಆವೃತವಾದ ಪ್ರದೇಶವಾಗದ್ದು ಇಲ್ಲಿ ಚಿರತೆ, ಜಿಂಕೆ, ಮೊಲ, ಕಾಡು ಹಂದಿ, ಕರಡಿ ಸರ್ವೇ ಸಾಮನ್ಯವಾಗಿ ಕಂಡು ಬರುತ್ತದೆ. ಇತ್ತೀಚೆಗೆ ಕರಡಿಗಳ ಸಂಖ್ಯೆ ಹೆಚ್ಚಾಗಿದ್ದು ಈ ಭಾಗದ ಬೆಟ್ಟ ತಪ್ಪಲಿನ ಪ್ರದೇಶದಲ್ಲಿ ಯಥೇಚ್ಚವಾಗಿ ಕಾಣಸಿಗುತ್ತದೆ
ಕನ್ನಡಪ್ರಭ ವಾರ್ತೆ ಟೇಕಲ್ಟೇಕಲ್‌ನ ಮಿಟ್ಟಿಗಾನಹಳ್ಳಿ ಬಳಿ ನೀಲಗಿರಿ ತೋಪಿನಲ್ಲಿ ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಸಿಲುಕಿದ ಕರಡಿಯು ರಾತ್ರಿಯೀಡಿ ನರಳಾಡಿ ನಂತರ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಅದನ್ನು ರಕ್ಷಿಸಲು ಅರವಳಿಕೆ ನೀಡಿದ ಘಟನೆ ನಡೆದಿದೆ. ಟೇಕಲ್ ಬೆಟ್ಟಗುಡ್ಡಗಳಿಂದ ಆವೃತವಾದ ಪ್ರದೇಶವಾಗದ್ದು ಇಲ್ಲಿ ಚಿರತೆ, ಜಿಂಕೆ, ಮೊಲ, ಕಾಡು ಹಂದಿ, ಕರಡಿ ಸರ್ವೇ ಸಾಮನ್ಯವಾಗಿ ಕಂಡು ಬರುತ್ತದೆ. ಇತ್ತೀಚೆಗೆ ಕರಡಿಗಳ ಸಂಖ್ಯೆ ಹೆಚ್ಚಾಗಿದ್ದು ಈ ಭಾಗದ ಬೆಟ್ಟ ತಪ್ಪಲಿನ ಪ್ರದೇಶದಲ್ಲಿ ಯಥೇಚ್ಚವಾಗಿ ಕಾಣಸಿಗುತ್ತದೆ. ಈ ನಿಟ್ಟಿನಲ್ಲಿ ಮಿಟ್ಟಿಗಾನಹಳ್ಳಿ ಹಾಗೂ ಬಂಡೂರು ಆಗ್ರಹಾರದ ಮಧ್ಯೆ ಬರುವ ನೀಲಗಿರಿ ತೋಪಿನಲ್ಲಿ ಯಾರೋ ಕಾಡು ಹಂದಿ ಹಿಡಿಯಲು ಉರುಳು ಹಾಕಿದ್ದು, ಗುರುವಾರ ರಾತ್ರಿ ಆಹಾರಕ್ಕಾಗಿ ಬಂದಿದ್ದ ಕರಡಿ ಆ ಉರುಳಿಗೆ ಬಿದ್ದು ರಾತ್ರಿಯಿಡಿ ಚೀರಾಡಿದೆ. ಅರಣ್ಯ ಇಲಾಖೆಗೆ ಮಾಹಿತಿ
ಶುಕ್ರವಾರ ಬೆಳಗ್ಗೆ ಗ್ರಾಮಸ್ಥರು ಹೋಗಿ ನೋಡಿದಾಗ ಪರಿಸ್ಥಿತಿ ಅರ್ಥವಾಗಿ ಕರಡಿ ಜನರನ್ನು ನೋಡಿ ಹತ್ತಿರ ಬಾರದಂತೆ ಬಾರಿ ಕೂಗಾಟ ಮಾಡಿದೆ. ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಲಾಯಿತು. ಕೋಲಾರ ಜಿಲ್ಲೆ, ಅರಣ್ಯ ಇಲಾಖೆ ಡಿಎಫ್‌ಓ ಏಡುಕೊಂಡಲು ನೇತೃತ್ವದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದರು. ಕರಡಿ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಮಾಡಿ ಅದರ ಚೀರಾಟಕ್ಕೆ ಬಲೆ ಹಾಕಲು ಸಾಧ್ಯವಾಗದ ಕಾರಣ ಅರಣ್ಯ ಇಲಾಖಾಧಿಕಾರಿಗಳು ಬನ್ನೇರುಘಟ್ಟ ಅರಣ್ಯಧಾಮದ ಪಶುವೈದ್ಯ ಕಿರಣ್ ತಂಡವನ್ನು ಕರೆಯಿಸಿ, ಕರಡಿಗೆ ಅರವಳಿಕೆ ಜೌಷಧ ನೀಡಿ ಕರಡಿಯನ್ನು ಹಿಡಿಯಲಾಯಿತು.ಕಾರ್ಯಚರಣೆಯಲ್ಲಿ ಎಸಿಎಫ್ ಸಹನಕುಮಾರ್, ಆರ್ ಎಫ್ ಧನಲಕ್ಷ್ಮೀ, ಡಿಆರ್‌ಎಫ್ ಹರೀಶ್ ಇದ್ದರು.