ದಾವಣಗೆರೆ ಜಿಲ್ಲಾ ಪಂಚಾಯಿತಿ 29 ಕ್ಷೇತ್ರಗಳಿಗೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993(1993ರ ಕರ್ನಾಟಕ ಅಧಿನಿಯಮ ಸಂಖ್ಯೆ(14)ರ ಪ್ರಕರಣ 162ರಲ್ಲಿ ಪ್ರದತ್ತ ಅಧಿಕಾರ ಚಲಾಯಿಸಿ, ಮೀಸಲಾತಿ ನಿಗದಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗಳನ್ನು ರದ್ದುಪಡಿಸಿದೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಜಿಲ್ಲಾ ಪಂಚಾಯಿತಿ 29 ಕ್ಷೇತ್ರಗಳಿಗೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993(1993ರ ಕರ್ನಾಟಕ ಅಧಿನಿಯಮ ಸಂಖ್ಯೆ(14)ರ ಪ್ರಕರಣ 162ರಲ್ಲಿ ಪ್ರದತ್ತ ಅಧಿಕಾರ ಚಲಾಯಿಸಿ, ಮೀಸಲಾತಿ ನಿಗದಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗಳನ್ನು ರದ್ದುಪಡಿಸಿದೆ.ನೂತನವಾಗಿ ದಾವಣಗೆರೆ ಜಿಲ್ಲಾ ಪಂಚಾಯಿತಿ 29 ಕ್ಷೇತ್ರಗಳಲ್ಲಿ 15 ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಈ ಪೈಕಿ ಅನುಸೂಚಿತ ಜಾತಿಗೆ 7(4 ಮಹಿಳೆ), ಅನುಸೂಚಿತ ಪಂಗಡಕ್ಕೆ 4(2), ಹಿಂದುಳಿದ ವರ್ಗ ಅ ಕ್ಕೆ 2(1), ಹಿಂದುಳಿದ ವರ್ಗ ಬ ಕ್ಕೆ 1(1), ಸಾಮಾನ್ಯ ವರ್ಗಕ್ಕೆ 15(7) ಕ್ಷೇತ್ರಗಳು ಮೀಸಲಿಟ್ಟು ಸರ್ಕಾರ ಆದೇಶ ಹೊರಡಿಸಿದೆ.
ಜಿಪಂ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆಯೇ ರಾಜಕೀಯ ಅವಕಾಶ ಇಲ್ಲದೇ ಕಳೆಗುಂದಿದ್ದ ಸ್ಥಳೀಯ ಸಂಸ್ಥೆಗಳು, ವಿಶೇಷವಾಗಿ ತಾಪಂ, ಜಿಪಂ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳಲ್ಲಿ ಆಸೆಗಳು ಚಿಗುರೊಡೆದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದಂತಾಗಿದೆ. ತಮಗೂ ಒಂದು ಅವಕಾಶ ಸಿಗಲಿ ಎಂಬ ನಿರೀಕ್ಷೆಯಲ್ಲಿದ್ದ ಹಿರಿಯರು, ಮಹಿಳೆಯರು, ವಿವಿಧ ಸಮುದಾಯಗಳು ಆಕಾಂಕ್ಷಿಗಳು, ನವ ಪೀಳಿಗೆಯ ಆಕಾಂಕ್ಷಿಗಳು ಈಗ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ತಮ್ಮ ತಮ್ಮ ನಾಯಕರ ಕಡೆ ನಿರೀಕ್ಷೆಯ ಕಣ್ಣುಗಳಿಂದ ನೋಡುವಂತಾಗಿದೆ................
ಜಿಪಂ ಕ್ಷೇತ್ರಗಳು, ಮೀಸಲು ವಿವರ1. ಕಕ್ಕರಗೊಳ್ಳ-ಹಿಂದುಳಿದ ವರ್ಗ(ಅ),
2. ಆಲೂರು-ಅನುಸೂಚಿತ ಪಂಗಡ(ಮಹಿಳೆ)3. ಆನಗೋಡು-ಅನುಸೂಚಿತ ಜಾತಿ(ಮಹಿಳೆ)
4. ಹದಡಿ-ಸಾಮಾನ್ಯ(ಮಹಿಳೆ)5. ಲೋಕಿಕೆರೆ-ಸಾಮಾನ್ಯ
6. ಬಾಡ-ಸಾಮಾನ್ಯ7. ಮಾಯಕೊಂಡ-ಸಾಮಾನ್ಯ
8. ಕೊಂಡಜ್ಜಿ-ಸಾಮಾನ್ಯ(ಮಹಿಳೆ)9.ಬೆಳ್ಳೂಡಿ-ಅನುಸೂಚಿತ ಜಾತಿ
10. ಭಾನುವಳ್ಳಿ-ಹಿಂದುಳಿದ ವರ್ಗ-ಬ(ಮಹಿಳೆ)11.ಸಿರಿಗೆರೆ-ಅನುಸೂಚಿತ ಪಂಗಡ
12.ಸೊಕ್ಕೆ-ಸಾಮಾನ್ಯ13. ಅಣಬೂರು-ಅನುಸೂಚಿತ ಪಂಗಡ(ಮಹಿಳೆ)
14. ಬಿಳಿಚೋಡು-ಅನುಸೂಚಿತ ಜಾತಿ(ಮಹಿಳೆ)15. ದೊಣ್ಣೆಹಳ್ಳಿ-ಸಾಮಾನ್ಯ
16. ತ್ಯಾವಣಿಗೆ-ಸಾಮಾನ್ಯ(ಮಹಿಳೆ)17. ಹೊಸಕೆರೆ(ಬಸವಾಪಟ್ಟಣ)-ಅನುಸೂಚಿತ ಪಂಗಡ
18. ಕೋಗಲೂರು-ಸಾಮಾನ್ಯ(ಮಹಿಳೆ)19. ಸಂತೇಬೆನ್ನೂರು-ಹಿಂದುಳಿದ ವರ್ಗ ಅ(ಮಹಿಳೆ)
20. ನಲ್ಲೂರು-ಅನುಸೂಚಿತ ಜಾತಿ(ಮಹಿಳೆ)21. ಹೊದಿಗೆರೆ-ಸಾಮಾನ್ಯ(ಮಹಿಳೆ)
22. ಹೊನ್ನೇಬಾಗಿ-ಸಾಮಾನ್ಯ23. ತಾವಕೆರೆ-ಅನುಸೂಚಿತ ಜಾತಿ
24. ಬೇಲಿಮಲ್ಲೂರು-ಅನುಸೂಚಿತ ಜಾತಿ(ಮಹಿಳೆ)25. ಕುಂದೂರು-ಸಾಮಾನ್ಯ.
26. ಸಾಸ್ವೇಹಳ್ಳಿ-ಸಾಮಾನ್ಯ(ಮಹಿಳೆ)27. ಸೊರಟೂರು-ಸಾಮಾನ್ಯ
28. ಬೆಳಗುತ್ತಿ-ಅನುಸೂಚಿತ ಜಾತಿ29. ಚೀಲೂರು-ಸಾಮಾನ್ಯ(ಮಹಿಳೆ).
