ಇತಿಹಾಸದಲ್ಲೇ ಮೊದಲಿಗೆ ಗುಂಡ್ಲುಪೇಟೆ ಪುರಸಭೆಯಲ್ಲಿ ಬಿಸಿಎಂಗೆ ಮೀಸಲು!

| Published : Aug 23 2024, 01:18 AM IST

ಇತಿಹಾಸದಲ್ಲೇ ಮೊದಲಿಗೆ ಗುಂಡ್ಲುಪೇಟೆ ಪುರಸಭೆಯಲ್ಲಿ ಬಿಸಿಎಂಗೆ ಮೀಸಲು!
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ಪುರಸಭೆ ಇತಿಹಾಸದಲ್ಲಿ ಬಿಸಿಎಂ (ಬಿ)ಗೆ ಇಲ್ಲಿನ ತನಕ ಯಾರು ಅಧ್ಯಕ್ಷರಾಗಿರಲಿಲ್ಲ. ಈಗ ಬಿಸಿಎಂ(ಬಿ) ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಸಿಕ್ಕಿದೆ. ೧೯೯೮ರಲ್ಲಿ ಮೀಸಲಾತಿ ಬಂದ ಬಳಿಕ ಪುರಸಭೆಗೆ ಇದೇ ಮೊದಲ ಬಾರಿಗೆ ಬಿಸಿಎಂ(ಬಿ)ಗೆ ಅಧ್ಯಕ್ಷ ಸ್ಥಾನ ಬಂದೊದಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿನ ಪುರಸಭೆ ಇತಿಹಾಸದಲ್ಲಿ ಬಿಸಿಎಂ (ಬಿ)ಗೆ ಇಲ್ಲಿನ ತನಕ ಯಾರು ಅಧ್ಯಕ್ಷರಾಗಿರಲಿಲ್ಲ. ಈಗ ಬಿಸಿಎಂ(ಬಿ) ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಸಿಕ್ಕಿದೆ. ೧೯೯೮ರಲ್ಲಿ ಮೀಸಲಾತಿ ಬಂದ ಬಳಿಕ ಪುರಸಭೆಗೆ ಇದೇ ಮೊದಲ ಬಾರಿಗೆ ಬಿಸಿಎಂ(ಬಿ)ಗೆ ಅಧ್ಯಕ್ಷ ಸ್ಥಾನ ಬಂದೊದಗಿದೆ.

೧೯೯೮ ರಲ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಬಂದರೂ ೨೬ ವರ್ಷದಲ್ಲಿ ಈ ಅವಧಿಯಲ್ಲಿ ಬಿಸಿಎಂ (ಬಿ)ನಲ್ಲಿ ಗೆದ್ದರೂ ಅಧ್ಯಕ್ಷರಾಗುವ ಅವಕಾಶ ಸಿಕ್ಕಿರಲಿಲ್ಲ. ಆದರೀಗ ಅಂತಹ ಅವಕಾಶ ಅಲ್ಲಿನ ಪುರಸಭೆಯ ನಾಲ್ವರಿಗೆ ಒದಗಿದೆ. ೧೦ನೇ ಅವಧಿಗೆ ಮೀಸಲಾತಿಯಲ್ಲಿ ಬಿಸಿಎಂ(ಬಿ)ಗೆ ಅಧ್ಯಕ್ಷ ಸ್ಥಾನ ಬಂದಿದೆ. ಈ ಮೀಸಲು ಬಂದ ಸಮಯದಲ್ಲಿ ಬಿಸಿಎಂ(ಬಿ) ವರ್ಗದ ಪುರಸಭೆ ಬಿಜೆಪಿ ಸದಸ್ಯರಾದ ಕಿರಣ್‌ ಗೌಡ, ನಾಗೇಶ್‌ (ಒಕ್ಕಲಿಗ), ಪುರಸಭೆ ಕಾಂಗ್ರೆಸ್‌ ಸದಸ್ಯ ಗೌಡ್ರ ಮಧು (ಒಕ್ಕಲಿಗ), ಪಕ್ಷೇತರ ಸದಸ್ಯ ಪಿ.ಶಶಿಧರ್‌ ಆಲಿಯಾಸ್‌ ದೀಪು (ದಾಸ ಬಣಜಿಗ) ಅಧ್ಯಕ್ಷರಾಗಬಹುದು.

೧೯೯೮ ರಲ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಘೋಷಣೆ ಬಳಿಕ ಗುಂಡ್ಲುಪೇಟೆ ಪುರಸಭೆಗೆ ಮೀಸಲಿನಡಿ ಎಂ.ಪುಟ್ಟತಾಯಮ್ಮ ಅಧ್ಯಕ್ಷರಾದ ಮೊದಲಿಗರಾಗಿದ್ದಾರೆ. ಪುರಸಭೆ ಅಧಿಕಾರ ತಮ್ಮದಾಗಿಸಿಕೊಳ್ಳಲು ಕಾಂಗ್ರೆಸ್‌ ಹಾಗೂ ಬಿಜೆಪಿ ವರಿಷ್ಠರೂ ಮುಂದಾಗಿದ್ದಾರೆ. ಆದರೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವಿಲ್ಲ. ಬಿಜೆಪಿಗೆ ಬಹುಮತವಿದ್ದರೂ ಇಬ್ಬರು ಸದಸ್ಯರು ಅಂತರ ಕಾಯ್ದುಕೊಂಡಿದ್ದಾರೆ. ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ) ಬಂದಿದೆ, ರಾಜಕೀಯ ಪಕ್ಷಗಳ ತಂತ್ರಗಳನ್ನು ನಡೆಸುತ್ತಿವೆ, ಮ್ಯಾಜಿಕ್‌ ನಂಬರ್‌ಗೆ ಕಾಂಗ್ರೆಸ್‌, ಬಿಜೆಪಿ ಸರ್ಕಸ್‌ ನಡೆಸುತ್ತಿದೆ.

ಪುರಸಭೆಗೆ ಬಿಸಿಎಂ (ಬಿ) ಅಧ್ಯಕ್ಷರಾಗಲು ನಾಲ್ವರು ಅರ್ಹ!

ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ)ಗೆ ಮೀಸಲಾದ ಕಾರಣ ಕಾಂಗ್ರೆಸ್‌, ಬಿಜೆಪಿ, ಪಕ್ಷೇತರ ಸದಸ್ಯರಲ್ಲಿ ಈ ನಾಲ್ವರು ಅಧ್ಯಕ್ಷರಾಗಲು ಅರ್ಹರಾಗಿದ್ದಾರೆ. ಪುರಸಭೆಗೆ ೨ ನೇ ಸಲ ಗೆದ್ದ ಪಕ್ಷೇತರ ಸದಸ್ಯ ಪಿ.ಶಶಿಧರ್‌ ಆಲಿಯಾಸ್‌ ದೀಪು, ಮೊದಲ ಸಲ ಗೆದ್ದ ಕಾಂಗ್ರೆಸ್‌ ಸದಸ್ಯ ಗೌಡ ಮಧು, ಬಿಜೆಪಿ ಸದಸ್ಯರಾದ ಕಿರಣ್‌ ಗೌಡ, ನಾಗೇಶ್‌, ಅಧ್ಯಕ್ಷರಾಗಲು ಕಸರತ್ತು ನಡೆಸಿದ್ದಾರೆ.