ಶಿಕ್ಷಣ ಕ್ಷೇತ್ರದಲ್ಲಿ ವಸತಿ ಶಾಲೆಗಳಿಂದ ದೊಡ್ಡ ಕ್ರಾಂತಿ: ಸಿ.ಟಿ. ರವಿ

| Published : Nov 22 2025, 01:30 AM IST

ಶಿಕ್ಷಣ ಕ್ಷೇತ್ರದಲ್ಲಿ ವಸತಿ ಶಾಲೆಗಳಿಂದ ದೊಡ್ಡ ಕ್ರಾಂತಿ: ಸಿ.ಟಿ. ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುವಸತಿ ಶಾಲೆಗಳು ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಜೊತೆಗೆ ದೊಡ್ಡ ಕ್ರಾಂತಿ ಮಾಡುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

- ಡಾ. ಬಿ.ಆರ್‌. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಪ್ರತಿಭಾ ಕಾರಂಜಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಸತಿ ಶಾಲೆಗಳು ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಜೊತೆಗೆ ದೊಡ್ಡ ಕ್ರಾಂತಿ ಮಾಡುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.ಎಐಟಿ ಸರ್ಕಲ್ ಬಳಿ ಇರುವ ಒಕ್ಕಲಿಗರ ಸಂಘದ ಸಮುದಾಯ ಭವನದಲ್ಲಿ ಜಿಪಂ, ತಾಪಂ, ಗ್ರಾಮ ಪಂಚಾಯಿತಿ ಅಂಬಳೆ, ಮಳಲೂರು ಮತ್ತು ಮುಗುಳವಳ್ಳಿ, ಶಾಲಾ ಶಿಕ್ಷಣ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಯೋಗ್ಯರಾಗಿ ಬದುಕಿದಾಗ ಮಾತ್ರ ಸಮಾಜದ ಋಣ ತೀರಿಸುವ ಕೆಲಸ ಮಾಡಿ ದಂತಾಗುತ್ತದೆ ಎಂದು ತಮ್ಮ ಬಾಲ್ಯದ ಶಿಕ್ಷಣ ವ್ಯವಸ್ಥೆ ಸಂದರ್ಭ ಸ್ಮರಿಸಿಕೊಂಡರು. ಜನರ ತೆರಿಗೆ ಹಣದಲ್ಲಿ ಸರ್ಕಾರ ಊಟ, ವಸತಿ, ಸಮವಸ್ತ್ರ ಸೇರಿದಂತೆ ಎಲ್ಲಾ ರೀತಿ ಮೂಲ ಸೌಲಭ್ಯಗಳನ್ನು ವಸತಿ ಶಾಲೆಗಳಲ್ಲಿ ಕಲ್ಪಿಸಿದೆ. ಶಿಕ್ಷಣದಲ್ಲಿ ರ್‍ಯಾಂಕ್ ಪಡೆದರೂ ಪಠ್ಯದಲ್ಲಿ ಇಲ್ಲದ ಸಾಮಾನ್ಯಜ್ಞಾನ ಇಲ್ಲದಿದ್ದರೆ ಸಮಾಜದಲ್ಲಿ ಅಪಹಾಸ್ಯಕ್ಕೊಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅರಿವು ಮೂಡಿಸಿ ಜ್ಞಾನದ ಬೆಳಕು ನೀಡುವುದು ಶಿಕ್ಷಣ. ನೈತಿಕ ಶಿಕ್ಷಣ ಇಲ್ಲದಿದ್ದರೆ ವಿದ್ಯಾವಂತ, ಬುದ್ದಿವಂತರಾಗಿದ್ದರೂ ಅನರ್ಥವಾಗುತ್ತದೆ ಎಂದು ಹೇಳಿದರು.ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ವೇದಿಕೆ ಸಹಕಾರಿ. ಪ್ರೋತ್ಸಾಹ ನೀಡಿ ಆತ್ಮವಿಶ್ವಾಸ ಮೂಡಿಸುವುದು ಸಮಗ್ರ ಶಿಕ್ಷಣ. ಪ್ರತಿಭೆ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆ ಅಲ್ಲದೆ ಸಾಮಾನ್ಯ ಜ್ಞಾನ ಸಹ ಸಮಗ್ರ ಶಿಕ್ಷಣದ ಒಂದು ಭಾಗವಾಗಿದೆ ಎಂದರು.ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ತಿಮ್ಮರಾಜು ಮಾತನಾಡಿ, ಶಿಸ್ತು ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಬರುವ ನಿಟ್ಟಿನಲ್ಲಿ ವಸತಿ ಶಾಲೆಗಳು ಕರ್ತವ್ಯ ನಿರ್ವಹಿಸುತ್ತಿವೆ. ದೂರದರ್ಶನ, ಮೊಬೈಲ್ ಮಾದಕ ವ್ಯಸಕ ಮುಂತಾದ ದುಶ್ಚಟ ಗಳಿಂದ ವಿದ್ಯಾರ್ಥಿಗಳನ್ನು ದೂರವಿರಿಸಿ ಶಿಕ್ಷಣವಂತರನ್ನಾಗಿಸುವಲ್ಲಿ ಶಿಕ್ಷಕರ ಶ್ರಮ ಪ್ರಶಂಸನೀಯ ಎಂದರು.ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಳೆ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಕೆಂಚೇಗೌಡ ವಹಿಸಿದ್ದರು. ಪ್ರಾಸ್ತಾವಿಕವಾಗಿ ಶಿಕ್ಷಣ ಸಂಯೋಜಕ ಲಕ್ಷ್ಮಣ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ರವಿನಾಯ್ಕ್, ಸಹಾಯಕ ನಿರ್ದೇಶಕರು ನೀಲಕಂಠಪ್ಪ, ಶಿಕ್ಷಣ ಸಂಯೋಜಕರಾದ ಲಕ್ಷ್ಮಣ್, ನಾಗರಾಜ್, ಸರ್ಕಾರಿ ನೌಕರರ ಸಂಘದ ಸದಸ್ಯ ದಿನೇಶ್, ಪ್ರಾಥಮಿಕ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕಿರಣ್‌ಕುಮಾರ್, ಕಾರ್ಯದರ್ಶಿ ಸುಮಿತ್ರ, ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಉಪಸ್ಥಿತರಿದ್ದರು. ಡಾ. ಬಿ.ಆರ್‌ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲ ನಾಗೇಶ್‌ ಸ್ವಾಗತಿಸಿ, ಭುವನೇಶ್ವರಿ ವಂದಿಸಿದರು.

21 ಕೆಸಿಕೆಎಂ 3ಚಿಕ್ಕಮಗಳೂರಿನ ಒಕ್ಕಲಿಗರ ಸಂಘದ ಸಮುದಾಯ ಭವನದಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಉದ್ಘಾಟಿಸಿದರು.