ಸ್ಥಳೀಯ ಆಡಳಿತವು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಶಾಶ್ವತ ಪರಿಹಾರವಾಗಿ ಚರಂಡಿ ನಿರ್ಮಾಣ ಮತ್ತು ಸೂಕ್ತ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮುಂದೆ ಹೋರಾಟ ನಡೆಸುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

ಡಂಬಳ: ಗ್ರಾಮದ ಎಪಿಎಂಸಿ ಹತ್ತಿರವಿರುವ ಬಡಾವಣೆಯಲ್ಲಿ ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಸ್ಥಳೀಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕುಡಿಯುವ ನೀರು, ಚರಂಡಿ ವ್ಯವಸ್ಥೆ ಇಲ್ಲದೇ ಮಳೆ ಬಂದಾಗ ನೀರು ರಸ್ತೆಗಳಲ್ಲಿ ನಿಂತು ದುರ್ನಾತ ಉಂಟಾಗುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆ ಹೆಚ್ಚುವ ಭೀತಿ ಎದುರಾಗಿದೆ.

ಬಡಾವಣೆಯ ಪ್ರಮುಖ ರಸ್ತೆಗಳು ಗುಂಡಿಗಳಿಂದ ತುಂಬಿಕೊಂಡಿದ್ದರಿಂದ ಸಂಚಾರ ದುಸ್ತರವಾಗಿದೆ. ಶಾಲಾ ಮಕ್ಕಳು, ವೃದ್ಧರು ಹಾಗೂ ಮಹಿಳೆಯರಿಗೆ ದಿನನಿತ್ಯ ಓಡಾಟ ಕಷ್ಟಕರವಾಗಿದೆ. ಮಳೆಗಾಲದಲ್ಲಿ ಕೆಸರು ಮತ್ತು ನೀರು ನಿಂತು ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಾ ಬಂದಿದೆ.

ಸಿಸಿ ರಸ್ತೆ, ಚರಂಡಿ ನಿರ್ಮಾಣ ಮಾಡದೆ ಇರುವ ಕಾರಣ ದೊಡ್ಡ ದೊಡ್ಡ ಗುಂಡಿಗಳಿದ್ದು, ರಾತ್ರಿ ಭಯದಲ್ಲಿಯೆ ಇರುವಂತಹ ಸ್ಥಿತಿ ಉಂಟಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಹಲವಾರು ಬಾರಿ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತೆರಿಗೆ ಪಾವತಿಸುತ್ತಿದ್ದರೂ ಮೂಲ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಬಡಾವಣೆಯ ನಿವಾಸಿಗಳಾದ ಮಂಜುನಾಥ ಬಿಸನಳ್ಳಿ, ಮಲ್ಲಯ್ಯಸ್ವಾಮಿ ಅರವಟಗಿಮಠ, ಫಕೀರಪ್ಪ ಬಿಸಾಟಿ ಸೇರಿದಂತೆ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಆಡಳಿತವು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಶಾಶ್ವತ ಪರಿಹಾರವಾಗಿ ಚರಂಡಿ ನಿರ್ಮಾಣ ಮತ್ತು ಸೂಕ್ತ ರಸ್ತೆ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮುಂದೆ ಹೋರಾಟ ನಡೆಸುವುದಾಗಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ರಸ್ತೆ ಸುಧಾರಣೆ, ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ

ನರಗುಂದ: ಉತ್ತಮ ರಸ್ತೆಗಳು ಎಲ್ಲ ವರ್ಗದ ಜನರಿಗೂ ಅನುಕೂಲ ಹಾಗೂ ವಾಹನ ಸವಕಳಿ, ಸಮಯ, ಇಂಧನ ಉಳಿತಾಯ ಆಗಲಿದೆ. ರಸ್ತೆ ನಿರ್ಮಾಣದ ಮೊದಲೇ ರೈತರು ನೀರಿನ ಪೈಪಲೈನ್ ಹಾಕಿಕೊಂಡರೆ, ರಸ್ತೆ ಸುರಕ್ಷಿತವಾಗಿ ಬಹಳ ದಿನ ಬಾಳಿಕೆ ಬರುತ್ತವೆ. ಉತ್ತಮ ರಸ್ತೆಗಳ ಬಗ್ಗೆ ರೈತರ ಕಾಳಜಿಯು ವಹಿಸಬೇಕು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

ಶುಕ್ರವಾರ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ₹21.70 ಲಕ್ಷ ವೆಚ್ಚದಲ್ಲಿ ಪಿಎಂಶ್ರೀ ಯೋಜನೆಯಡಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಹಾಗೂ ₹90 ಲಕ್ಷ ವೆಚ್ಚದಲ್ಲಿ ಕೊಣ್ಣೂರು- ಹದಲಿವರೆಗಿನ 1.50 ಕಿಮೀ ವರೆಗಿನ ರಸ್ತೆ ಸುಧಾರಣೆಗೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ಮತಕ್ಷೇತ್ರದಾದ್ಯಂತ ಸಿಸಿ ರಸ್ತೆಗಳನ್ನು ಮಾಡಿದ್ದೆ. ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರ ಅವಧಿ ನನ್ನ ಪಾಲಿಗೆ ಸುವರ್ಣಯುಗ ಆಗಿತ್ತು. ಆದರೀಗ ನಮ್ಮ ಸರ್ಕಾರ ಇಲ್ಲ. ಈಗಿನ ಸರ್ಕಾರದ ಹತ್ತಿರ ಅಭಿವೃದ್ಧಿಗೆ ಹಣ ಇಲ್ಲ. ಯಾರಿಗೂ ಅನುದಾನ ನೀಡುತ್ತಿಲ್ಲ. ಆದ್ದರಿಂದ ಅಭಿವೃದ್ಧಿ ಬಗ್ಗೆ ಯಾರಿಗೂ ಭರವಸೆ ನೀಡಲ್ಲ ಎಂದರು.

ಗ್ರಾಪಂ ಮಾಜಿ ಸದಸ್ಯ ಕೊಟ್ರೇಶ ಕೊಟ್ರಶೆಟ್ಟಿ ಹಾಗೂ ಶಂಕರಗೌಡ ಯಲ್ಲಪ್ಪಗೌಡ್ರ ಮಾತನಾಡಿದರು. ಈ ಸಂದರ್ಭದಲ್ಲಿ ಬಸಯ್ಯ ಚಿಕ್ಕಮಠ, ಎನ್.ಕೆ. ಸೋಮಾಪೂರ, ಪ್ರಕಾಶಗೌಡ ತಿರಕನಗೌಡ್ರ, ಶೇಖರಗೌಡ್ರ ಸಾಲಿಗೌಡ್ರ, ಪರಪ್ಪ ಸಾಹುಕಾರ, ದೇವೆಂದ್ರಪ್ಪ ವಜ್ರಂಗಿ, ಬಿ.ಎಂ‌. ಕೊರಗನ್ನವರ, ಭೀಮಶಿ ಗೋವನಕೊಪ್ಪ, ಪಡಿಯಪ್ಪ ಚವನ್ನವರ, ಪರ್ವತಗೌಡ ಕೆಂಚನಗೌಡ್ರ, ರಾಜೇಸಾಬ ಬಾಳಪ್ಪನವರ, ಬಸವ್ವ ತಳವಾರ, ಭೀಮಶಿ ಯಾವಗಲ್, ಪ್ರವೀಣ ಯಲಿಗಾರ, ರುಕ್ಮೀಣಿ ಮ್ಯಾಗಲಮನಿ, ರೇಖಾ ದೊಡಮನಿ, ಬಾಳಮ್ಮ ಜಾಲಿಕಟ್ಟಿ, ಶಿವಕುಮಾರ ಕೆಲವಡಿ ಸೇರಿದಂತೆ ಮುಂತಾದವರು ಇದ್ದರು.