ಸಾರಾಂಶ
ಕಳೆದ 15 ವರ್ಷಗಳಿಂದ ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ರೈತರ, ಬಡ ಕೂಲಿ ಕಾರ್ಮಿಕರಿಗೆ ಬೆಂಬಲ ಕೊಡುತ್ತಾ ಬಂದಿದ್ದೇವೆ
ಲಕ್ಷ್ಮೇಶ್ವರ: ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವುದರಿಂದ ಬೇಸತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸುವುದಾಗಿ ಬಿಜೆಪಿ ಮುಖಂಡ ಗುರುನಾಥ ದಾನಪ್ಪನವರ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂವತ್ತು ವರ್ಷಗಳಿಂದ ಸತತ ಬಿಜೆಪಿ ಕೆಲಸ ಮಾಡುತ್ತಿರುವ ವಿಷಯ ಎಲ್ಲರಿಗೂ ಗೊತ್ತಿರುವ ಸಂಗತಿ. ಕಳೆದ 15 ವರ್ಷಗಳಿಂದ ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ರೈತರ, ಬಡ ಕೂಲಿ ಕಾರ್ಮಿಕರಿಗೆ ಬೆಂಬಲ ಕೊಡುತ್ತಾ ಬಂದಿದ್ದೇವೆ. ಶಿರಹಟ್ಟಿ ಕ್ಷೇತ್ರದ ಶಾಸಕ ಆಕ್ಷಾಂಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಈಗ ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಗದಗ ಜಿಲ್ಲಾಧ್ಯಕ್ಷರಾಗಲಿ, ಶಿರಹಟ್ಟಿ ಬಿಜೆಪಿಯ ಮುಖಂಡರಾಗಲಿ ಸಂಪರ್ಕಿಸಿಲ್ಲ. ಶಿರಹಟ್ಟಿ ಕ್ಷೇತ್ರದ ಶಾಸಕರು ಕೂಡಾ ನಮ್ಮನ್ನು ಸಂಪರ್ಕಿಸಿಲ್ಲ. ಶಾಸಕರ ನಡವಳಿಕೆ ಸರಿ ಇಲ್ಲ. ಪಕ್ಷದಲ್ಲಿ ಇಷ್ಟು ವರ್ಷಗಳಿಂದ ದುಡಿಯುತ್ತಿದ್ದರೂ ಇಲ್ಲಿವರೆಗೂ ಲೋಕಸಭಾ ಚುನಾವಣೆಯಲ್ಲಿ ನನಗೆ ಕರೆದಿಲ್ಲ, ಆದರಿಂದ ಬಿಜೆಪಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು 30 ವರ್ಷಗಳಿಂದ ಬಿಜೆಪಿಯಲ್ಲಿ ದುಡಿದ್ದೇನೆ ಎನ್ನುವ ಸಂತೋಷ ನನಗಿದೆ ಎಂದರು.ಬಸವರಾಜ ಅರಳಿ, ರವಿ ಲಿಂಗಶೆಟ್ಟಿ, ದೇವಪ್ಪ ಗಡೆದ, ಶಿವಪ್ಪ ಡಂಬಳ, ಮಲ್ಲನಗೌಡ ಪಾಟೀಲ್ , ದಾನೋಬಾ ಬೋಮಲೆ, ಡಾ. ವೈ.ಡಿ. ಪಾಟೀಲ್ ಹಾಜರಿದ್ದರು.