ಸಾರಾಂಶ
ಕುಡಿಯುವ ನೀರಿಗಾಗಿ ಇಷ್ಟು ವರ್ಷಗಳ ಕಾಲ ಹೋರಾಟ ಮಾಡುತ್ತಾ ಬಂದರೂ ಯಾವುದೇ ದಡಕ್ಕೆ ಸೇರುತ್ತಿಲ್ಲ ತಾವು ನಮ್ಮ ಭಾಗದ ಸಂಸದರು ಹಾಗೂ ಕೇಂದ್ರದ ಬಿಜೆಪಿ ಪಕ್ಷದ ಪ್ರಮುಖರಾಗಿದ್ದು ಮುತವರ್ಜಿ ವಹಸಿದರೆ ಇದೇನು ದೊಡ್ಡ ಸಮಸ್ಯೆ ಅಲ್ಲ ಕೂಡಲೇ ಕಾನೂನು ತೊಡಕುಗಳನ್ನು ಬಗೆಹರಿಸಿ ಕಳಸಾ ಬಂಡೂರಿ ನಾಲಾ ಜೋಡಣೆ ಕಾಮಗಾರಿ ಪ್ರಾರಂಭಿಸಲು ಅನಕೂಲ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.
ನವಲಗುಂದ: ಹಲವು ವರ್ಷಗಳಿಂದ ತೊಡಕಾಗಿರುವ ಮಹದಾಯಿ, ಕಳಸಾ ಬಂಡೂರಿ ಸಮಸ್ಯೆಯನ್ನು ಪರಿಹರಿಸಬೇಕು. ಇಲ್ಲದೇ ಇದ್ದರೆ ಜು. 21ರ ರೈತ ಹುತಾತ್ಮ ದಿನಾಚರಣೆಯಂದು ಉಗ್ರ ಹೋರಾಟ ಮಾಡುವುದಾಗಿ ರೈತ ಮುಖಂಡ ಸುಭಾಷಗೌಡ ಪಾಟೀಲ ಎಚ್ಚರಿಸಿದರು.
ಕುಡಿಯುವ ನೀರಿಗಾಗಿ ಇಷ್ಟು ವರ್ಷಗಳ ಕಾಲ ಹೋರಾಟ ಮಾಡುತ್ತಾ ಬಂದರೂ ಯಾವುದೇ ದಡಕ್ಕೆ ಸೇರುತ್ತಿಲ್ಲ ತಾವು ನಮ್ಮ ಭಾಗದ ಸಂಸದರು ಹಾಗೂ ಕೇಂದ್ರದ ಬಿಜೆಪಿ ಪಕ್ಷದ ಪ್ರಮುಖರಾಗಿದ್ದು ಮುತವರ್ಜಿ ವಹಸಿದರೆ ಇದೇನು ದೊಡ್ಡ ಸಮಸ್ಯೆ ಅಲ್ಲ ಕೂಡಲೇ ಕಾನೂನು ತೊಡಕುಗಳನ್ನು ಬಗೆಹರಿಸಿ ಕಳಸಾ ಬಂಡೂರಿ ನಾಲಾ ಜೋಡಣೆ ಕಾಮಗಾರಿ ಪ್ರಾರಂಭಿಸಲು ಅನಕೂಲ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.ರೈತರ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರು ಮತ್ತು ಹಣಕಾಸು ಕಾರ್ಯದರ್ಶಿಗಳು ಶೀಘ್ರದಲ್ಲಿ ಚರ್ಚಿಸಿ ಸಮಸ್ಯೆ ಹರಿಸುವ ಭರವಸೆ ನೀಡಿದರು.
ಈ ವೇಳೆ ಯಲ್ಲಪ್ಪ ದಾಡಿಬಾಯಿ, ಶಿವಣ್ಣ ಹುಬ್ಬಳ್ಳಿ, ಸಾಯಿಬಾಬಾ ಆನೆಗೊಂದಿ, ಭಗವಂತಪ್ಪ ಪುಟ್ಟಣ್ಣವರ, ಶಿವನಗೌಡ.ಎಲ್ ಇದ್ದರು.