ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಆರ್ಥಿಕ ಸಂಪನ್ಮೂಲ ಹೆಚ್ಚಿಸಿಕೊಂಡು ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಿರುವ ಶಿವಾರಪಟ್ಟಣ ಗ್ರಾಪಂ ತಾಲೂಕಿನ ೨೯ ಪಂಚಾಯ್ತಿಗಳಲ್ಲೇ ಮಾದರಿಯಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ತಾಲೂಕಿನ ಶಿವಾರಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿನಾಯಕನಹಳ್ಳಿ ಗ್ರಾಮದಲ್ಲಿ ಗ್ರಾಪಂ ಅನುದಾನ ೫೫ ಲಕ್ಷ ರೂಗಳ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ದಾನಿಗಳ ಸಹಕಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸಿಎಸ್ ಆರ್ ಅನುದಾನತಮ್ಮ ಪಂಚಾಯ್ತಿ ವ್ಯಾಪ್ತಿಯ ಹೆಸರಾಂತ ಕಾರ್ಖಾನೆಗಳಿಂದ ಸಿಎಸ್ ಆರ್ ಅನುದಾನದ ಸಹಕಾರ ಪಡೆದು ಸರ್ಕಾರದ ಅನುದಾನಗಳಿಗೆ ಕಾಯದೆ ಪಂಚಾಯ್ತಿ ಸದಸ್ಯರ ಸಹಕಾರದಲ್ಲಿ ಗ್ರಾಮಗಳಲ್ಲಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಸಿಸಿ ರಸ್ತೆ ಅಭಿವೃದ್ಧಿಗೆ ₹55 ಲಕ್ಷ೫೫ ಲಕ್ಷ ರೂಗಳ ವೆಚ್ಚದ ಸಿಸಿ ರಸ್ತೆ ಅಭಿವೃದ್ಧಿ ಒಂದು ಗ್ರಾಮದ ಅಭಿವೃದ್ಧಿಗೆ ನಂತರ ಮತ್ತೊಂದು ಗ್ರಾಮದ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆಯುತ್ತಾರೆ. ಈ ರೀತಿ ಕಾರ್ಯನಿರ್ವಹಿಸುವುದರಿಂದ ಪ್ರತಿಯೊಂದು ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಸಿಸಿ ರಸ್ತೆ ಅಭಿವೃದ್ಧಿಯ ಜೊತೆಗೆ ಹೋಂಡಾ ಕಂಪನಿಯವರು ಈ ಗ್ರಾಮದಲ್ಲಿ ಸಂಪೂರ್ಣವಾಗಿ ಚರಂಡಿಗಳನ್ನು ಮಾಡಿಕೊಡಲು ಮುಂದೆ ಬಂದಿದ್ದಾರೆ ಇದೊಂದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ತಾಪಂ ಇ.ಒ ವಿ.ಕೃಷ್ಣಪ್ಪ, ಶಿವಾರಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನೇಗೌಡ, ಉಪಾಧ್ಯಕ್ಷ ತಿಮ್ಮಯ್ಯ, ಸದಸ್ಯರಾದ ಜಗನ್ನಾಥಾಚಾರಿ, ಅನಂತ್ ನಾಯಕ್, ಮುನಿರಾಜು, ನಂದಿನಿ, ಲೋಕೇಶ್, ರಾಧ ನಾರಾಯಣಸ್ವಾಮಿ, ಆಶಾ ನಾರಾಯಣಸ್ವಾಮಿ, ಪ್ರಮೀಳಮ್ಮ, ಪಿಡಿಒ ರಮೇಶ್ ನಾಯಕ್, ಕಾರ್ಯದರ್ಶಿ ವಿ ಮುನೇಗೌಡ, ಇನ್ನಿತರರು ಹಾಜರಿದ್ದರು.