ಸಾರಾಂಶ
ಕನ್ನಡಪ್ರಭ ವಾರ್ತೆ ಕುದೂರುಭಾರತೀಯ ಪರಂಪರೆಯನ್ನು ಇಡೀ ಜಗತ್ತು ಮೆಚ್ಚಿ ಗೌರವಿಸುತ್ತಿದೆ. ಇಂತಹ ಪರಂಪರೆಯನ್ನು ಧರ್ಮಾತೀತವಾಗಿ ಗೌರವಿಸಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.ಮಾಗಡಿ ತಾಲೂಕು ಮಾದಿಗೊಂಡನಹಳ್ಳಿಯ ಗುಡ್ಡದ ರಂಗನಾಥಸ್ವಾಮಿ ದೇವಾಲಯದ ನೂತನ ಸ್ವಸ್ಥಿ ಶ್ರೀ ಸಾಂಸ್ಕೃತಿಕ ಸಭಾಭವನ, ಕ್ಷೇತ್ರದ ಹೆಬ್ಬಾಗಿಲು, ಮುಡಿಸೇವಾಭವನ ಮತ್ತು ಕೆಂಪಣ್ಣ-ಕರಿಯಣ್ಣ ಪೂಜಾ ಮಂದಿರದ ಉದ್ಘಾಟನಾ ಸಮಾರಭದ ಸಾನಿಧ್ಯ ವಹಿಸಿ ಮಾತನಾಡಿದರು.ದೇವಾಲಯ ಸಂಸ್ಕೃತಿ ಮತ್ತು ಭಕ್ತಿ ಸಂಸ್ಕೃತಿ ನಮ್ಮೆಲ್ಲಾ ತೊಂದರೆಗಳಿಗೆ ಪರಿಹಾರದ ದಾರಿ ತೋರಿಸಿದೆ. ಸನಾತನ ಧರ್ಮಕ್ಕೆ ಧಕ್ಕೆ ಬಂದಾಗಲೆಲ್ಲಾ ಭಕ್ತಿ ಪರಂಪರೆ ರಕ್ಷಣೆ ನೀಡಿದೆ. ಪ್ರೀತಿ ಮತ್ತು ಭಕ್ತಿಯಿಂದ ದೇವಾಲಯಕ್ಕೆ ಭೇಟಿ ನೀಡಬೇಕು. ಹಿಂದೂ ಧರ್ಮ ಭಯವನ್ನು ಹುಟ್ಟಿಸುವಂತಹದ್ದೇ ಹೊರತು ಭಯವನ್ನು ಮೂಡಿಸುವುದಂತಹದಲ್ಲ ಎಂದರು.ಭಕ್ತಿಯ ಜೊತೆಗೆ ಜ್ಞಾನವೂ ಇರಬೇಕಿದೆ. ಪ್ರಜ್ಞೆ ಇಲ್ಲದೆ ಹೋದರೆ ಪರಿಸರ ನಾಶ ಮಾಡುತ್ತಾರೆ. ಅದಕ್ಕೆ ದೇವಾಲಯಗಳಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್‌ನ್ನು ನಿಶೇಧ ಮಾಡಬೇಕಿದೆ ಎಂದು ಹೇಳಿದರು.ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಸಮಾನ ಮನಸ್ಕರೆಲ್ಲರೂ ಸೇರಿ ಹೃದಯ ಶ್ರೀಮಂತಿಕೆಯಿಂದ ಕೆಲಸ ಮಾಡಿದರೆ ಅದ್ಭುತವಾದುದನ್ನು ಸಾಧಿಸಬಹುದು ಎನ್ನುವುದಕ್ಕೆ ಗುಡ್ಡದ ರಂಗನಾಥ ಸ್ವಾಮಿ ಟ್ರಸ್ಟ್ ಸಾಕ್ಷಿಯಾಗಿದೆ. ದೇವಾಲಯಕ್ಕೆ ಸೇರಿರುವ ಜಾಗವನ್ನು ಸಸ್ಯಕಾಶಿಯನ್ನಾಗಿ ಮಾಡಿ ಸುಂದರ ಪ್ರವಾಸಿ ತಾಣವನ್ನಾಗಿ ರೂಪಿಸಬಹುದು. ಈ ಮೂಲಕ ಭಾರತೀಯ ಪರಂಪರೆಯನ್ನು ರಕ್ಷಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಭಾರತೀಯನೂ ಹೊರಬೇಕಾದ ಸುಸಂದರ್ಭ ಇದಾಗಿದೆ ಎಂದರು.ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ನೂರಾರು ಜಾತಿಗಳು, ಧರ್ಮಗಳು, ಸಂಸ್ಕೃತಿಗಳು ಎಲ್ಲವೂ ವಿಭಿನ್ನವಾಗಿರುವ ಭಾರತದಲ್ಲಿ ಜನರು ನೆಮ್ಮದಿಯಿಂದ ಊಟ ನಿದ್ದೆ ಮಾಡುತ್ತಿದ್ದಾರೆ ಎಂದರೆ ಭಾರತೀಯ ನೆಲದಲ್ಲಿ ಅಧ್ಯಾತ್ನದ ಸೆಲೆ ಇದ್ದರಷ್ಟೆ ಹೀಗಾಗಲು ಸಾಧ್ಯ ಎಂದು ಹೇಳಿದರು.ದ್ವಾರ ಬಾಗಿಲಿನ ದಾನಿ ಶಿಕ್ಷಕ ರಂಗಶಾಮಯ್ಯ ದಂಪತಿಯನ್ನು ಸನ್ಮಾನಿಸಿದರು. ಗುರುಪೀಠಾಧ್ಯಕ್ಷ ಎ.ರಾಮಸ್ವಾಮಿ ಮಾತನಾಡಿದರು. ವಿದಾನ ಪರಿಷತ್ ಸದಸ್ಯ ರಾಮೋಜಿಗೌಡ, ಗುಡ್ಡದ ರಂಗನಾಥಸ್ವಾಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ್, ಶಿವಲಿಂಗಯ್ಯ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹನುಮಯ್ಯ, ರಂಗಶಾಮಯ್ಯ, ಆರ್.ಮಂಜುನಾಥ್, ಹೊನ್ನರಾಜ್. ಸಂಸ್ಕೃತ ವಿದ್ವಾನ್ ನಂಜುಂಡಯ್ಯ ಮತ್ತಿತರರು ಉಪಸ್ಥಿತರಿದ್ದರು.10ಕೆಆರ್ ಎಂಎನ್ 2,3.ಜೆಪಿಜಿ
2.ಮಾದಿಗೊಂಡನಹಳ್ಳಿ ಗುಡ್ಡದ ರಂಗನಾಥಸ್ವಾಮಿ ದೇವಾಲಯದ ಸ್ವಸ್ತಿಶ್ರೀ ಸಭಾಭವನವನ್ನು ಮಾಜಿ ಶಾಸಕ ಎ.ಮಂಜುನಾಥ್ ಉದ್ಘಾಟಿಸಿದರು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಎಂ.ರಾಮಸ್ವಾಮಿ ಹಾಜರಿದ್ದರು.3.ದಾನಿ ರಂಗಶಾಮಯ್ಯ ನಿರ್ಮಿಸಿರುವ ಗುಡ್ಡದ ರಂಗನಾಥಸ್ವಾಮಿ ದೇವಾಲಯದ ನೂತನ ಆಕರ್ಷಕ ದ್ವಾರಬಾಗಿಲು.