ಶಿಕ್ಷಕರನ್ನು ಗೌರವಿಸಿ, ಶಾಲೆ ಅಭಿವೃದ್ಧಿಗೆ ಕೈ ಜೋಡಿಸಿ: ಕುಲ ಸಚಿವ ಟಿ.ಜವರೇಗೌಡ

| Published : Feb 20 2024, 01:46 AM IST

ಶಿಕ್ಷಕರನ್ನು ಗೌರವಿಸಿ, ಶಾಲೆ ಅಭಿವೃದ್ಧಿಗೆ ಕೈ ಜೋಡಿಸಿ: ಕುಲ ಸಚಿವ ಟಿ.ಜವರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರಾದರೆ ಮಾತ್ರ ಸಾಲದು. ಮಕ್ಕಳಿಗೆ ವಿದ್ಯೆಕಲಿಸುವ ಕೌಶಲ್ಯತೆ ಹೊಂದಬೇಕು. ಆಗ ಶಿಕ್ಷಕರ ಹುದ್ದೆಗೆ ಒಂದು ಅರ್ಥ ಸಿಗುತ್ತದೆ. ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಶಿಕ್ಷಕರನ್ನು ಅಭಿನಂದಿಸುವ ಪರಿಪಾಠ ಬೆಳೆಸಿಕೊಂಡಾಗ ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರೇರೆಪಣೆಯಾಗುತ್ತದೆ. ಇದರಿಂದ ಗುರು ಶಿಷ್ಯರ ಬಾಂಧವ್ಯ ಉತ್ತಮಗೊಳ್ಳುತ್ತದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಪ್ರತಿಯೊಬ್ಬ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವ ಜೊತೆಗೆ ಶಾಲೆ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಟಿ.ಜವರೇಗೌಡ ತಿಳಿಸಿದರು.

ಕ್ಯಾತಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಶಿಕ್ಷಕರಾದರೆ ಮಾತ್ರ ಸಾಲದು. ಮಕ್ಕಳಿಗೆ ವಿದ್ಯೆಕಲಿಸುವ ಕೌಶಲ್ಯತೆ ಹೊಂದಬೇಕು. ಆಗ ಶಿಕ್ಷಕರ ಹುದ್ದೆಗೆ ಒಂದು ಅರ್ಥ ಸಿಗುತ್ತದೆ ಎಂದರು.

ವಿದ್ಯಾರ್ಥಿಗಳು ತಾವು ಕಲಿತ ಶಾಲೆ ಶಿಕ್ಷಕರನ್ನು ಅಭಿನಂದಿಸುವ ಪರಿಪಾಠ ಬೆಳೆಸಿಕೊಂಡಾಗ ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರೇರೆಪಣೆಯಾಗುತ್ತದೆ. ಇದರಿಂದ ಗುರು ಶಿಷ್ಯರ ಬಾಂಧವ್ಯ ಉತ್ತಮಗೊಳ್ಳುತ್ತದೆ ಎಂದರು.

ಕಾರ್ಯಕ್ರಮದ ಉಸ್ತುವಾರಿಯನ್ನು ಹಿರಿಯ ವಿದ್ಯಾರ್ಥಿಗಳಾದ ಬೋರೇಗೌಡ, ದೇವೇಗೌಡ, ಪವಿತ್ರ, ಲೋಕೇಶ, ಸಿದ್ದೇಗೌಡ, ಶೀಲ, ಆಶಾ, ನವೀನಾ ಸೇರಿದಂತೆ ಹಲವರು ವಹಿಸಿಕೊಂಡಿದ್ದರು.

ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಗುರುಗಳಾದ ಕುಲಸಚಿವ ಟಿ.ಜವರೇಗೌಡ, ಬೀದರ್ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಅಖಿಲಾಂಡೇಶ್ವರಿ, ಪುಟ್ಟರಾಮರಾಜೇ ಅರಸು, ತೊರೆಬೊಮ್ಮನಹಳ್ಳಿ ನಿವೃತ್ತ ಶಿಕ್ಷಕ ಬಿ.ಎಲ್.ರಾಜೇಅರಸ್, ಯಡಗನಹಳ್ಳಿ ನಿವೃತ್ತ ಶಿಕ್ಷಕ ಈರೇಗೌಡ, ಮೈಸೂರು ನಿವೃತ್ತ ಶಿಕ್ಷಕ ಎಚ್.ಡಿ.ಸುಭಾಷ್‌ಚಂದ್ರ, ಮಂಡ್ಯ ನಿವೃತ್ತ ಶಿಕ್ಷಕ ಸಿ.ಕೆ.ರಾಜಣ್ಣ, ಕ್ಯಾತಘಟ್ಟ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎಂ.ಮಲ್ಲಯ್ಯ, ಮಂಡ್ಯ ಬೇಬಿಗ್ರಾಮದ ಹಿಂದಿಭಾಷಾ ಶಿಕ್ಷಕಿ ವೀಣಾ, ಬೊಪ್ಪಸಮುದ್ರ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕ ಎಚ್.ಎಂ.ಮಲ್ಲಿಕಾರ್ಜುನ, ಶಿಕ್ಷಕ ಎಂ.ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ವೇದಿಕೆಯಲ್ಲಿ ಶಾಲೆ ಮುಖ್ಯಶಿಕ್ಷಕ ಎಚ್.ಎಂ.ರಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಸಿದ್ದರಾಜು ಸೇರಿದಂತೆ ಹಲವರು ಇದ್ದರು.