ಸಂವಿಧಾನ ಗೌರವಿಸಿ: ಟಿ.ಎನ್‌. ಭೀಮುನಾಯಕ

| Published : Jan 28 2024, 01:20 AM IST

ಸಾರಾಂಶ

ಈ ಸಂವಿಧಾನ ತಂದು ಕೊಟ್ಟಂತಹ ಬಾಬಾ ಸಾಹೇಬರನ್ನು ಹಾಗೂ ಭಾರತ ಸಂವಿಧಾನ ದೇಶದ ಕಟ್ಟಕಡೆ ಪ್ರಜೆನೂ ಗೌರವಿಸಲೇಬೇಕು

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ, ಸಂವಿಧಾನ ಜಾರಿಗೆ ಬಂದ ದಿನ ಅಂಬೇಡ್ಕರ್ ಹಾಗೂ ಗಾಂದೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಲಾಯಿತು.

ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಮಾತನಾಡಿ, ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು, ಇದರ ಪ್ರಯುಕ್ತ ಈ ದಿನ ಗಣರಾಜೋತ್ಸವವಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ. ಈ ಸಂವಿಧಾನ ತಂದು ಕೊಟ್ಟಂತಹ ಬಾಬಾ ಸಾಹೇಬರನ್ನು ಹಾಗೂ ಭಾರತ ಸಂವಿಧಾನ ದೇಶದ ಕಟ್ಟಕಡೆ ಪ್ರಜೆನೂ ಗೌರವಿಸಲೇಬೇಕು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ದೇಶಪ್ರೇಮವನ್ನು ಹೆಚ್ಚಿಸಿಕೊಳ್ಳಲು ಯುವಕರಿಗೆ ಕರೆನೀಡಿದರು.

ಕರವೇ ತಾಲೂಕಾಧ್ಯಕ್ಷ ಮಲ್ಲು ಮಾಳಿಕೇರಿ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ದೇಶಾಭಿಮಾನ, ಧೈರ್ಯ, ಸಾಹಸ ಪ್ರತಿಯೊಬ್ಬ ಯುವಕರು ರಾಯಣ್ಣನ ಆದರ್ಶ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 193ನೇ ಹುತಾತ್ಮ ದಿನದಂದು ರಾಯಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಕರವೇ ಹಿತೈಷಿಗಳಾದ ಬಿಜೆಪಿ ಮುಖಂಡರಾದ ದೇವಿಂದ್ರನಾಥ್ ಕೆ.ನಾದ್, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಬಸವರಾಜ್ ವಿಭೂತಿಹಳ್ಳಿ, ವೆಂಕಟರೆಡ್ಡಿ ಅಬ್ಬೆತುಮಕೂರ ಇದ್ದರು. ಯುವ ಘಟಕದ ಜಿಲ್ಲಾಧ್ಯಕ್ಷ ವಿಶ್ವರಾಧ್ಯ ದಿಮ್ಮೆ, ಅಂಬ್ರೇಶ ಹತ್ತಿಮನಿ, ಸಂತೋಷ ನಿರ್ಮಲಕರ್, ಸಿದ್ದರಾಮರೆಡ್ಡಿ ಚಿನ್ನಾಕಾರ್, ಹಣಮಂತ ಖಾನಳ್ಳಿ, ಹಣಮಂತ ಅಚ್ಚೋಲ, ಶರಣು ಸಾಹುಕಾರ, ಚಂದ್ರಶೇಖರ ಗೋಪಾಳಪೂರ, ಭೀಮರಾಯ ರಾಮಸಮುದ್ರ, ಸಲೀಂ ಪಾಶಾ ಯರಗೋಳ, ಸಿದ್ದಪ್ಪ ಕ್ಯಾಸಪನಳ್ಳಿ, ವಿಶ್ವರಾಜ ಹೊನಗೇರಾ, ಅಬ್ದುಲ್ ಅಜೀಜ್, ಕಾಶಿನಾಥ ನಾನೇಕ, ಅಬ್ದುಲ್ ಚಿಗನೂರ, ಶರಣು ಯಲ್ಹೇರಿ, ಸುರೇಶ ಬೆಳಗುಂದಿ, ಸಿದ್ದು ಠಾಣಗುಂದಿ, ಸುಭಾಶ ಯರಗೋಳ, ಮಹೇಶ ಠಾಣಗುಂದಿ ಇತರರಿದ್ದರು.