ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ದೇಶಕ್ಕೆ ಅನ್ನ ನೀಡುವ ರೈತ, ದೇಶದ ಗಡಿ ಕಾಯುವ ಸೈನಿಕ ಇಬ್ಬರೂ ಸಹ ದೇಶದ ಎರಡು ಕಣ್ಣುಗಳಿದ್ದಂತೆ, ಇವರು ಇಲ್ಲದೆ ಹೋದರೇ ಜನರು ನೆಮ್ಮದಿಯಿಂದ ಬದಕಲು ಸಾಧ್ಯವಿಲ್ಲ, ರೈತರು ಮತ್ತು ಸೈನಿಕರನ್ನು ಎಲ್ಲರೂ ಗೌರವಿಸಿ ಎಂದು ಮಂಜುಶ್ರೀ ಎಜ್ಯುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಪಿ.ಆರ್ ಮಂಜುನಾಥ್ ಹೇಳಿದರು.ಅವರು ನಗರದ ಮಂಜುಶ್ರೀ ಶಾಲೆಯಲ್ಲಿ ನಡೆದ ರೈತ ಸೈನಿಕೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವಉದ್ಘಾಟಿಸಿ ಮಾತನಾಡಿದರು. ಜಮೀನಿನಲ್ಲಿ ರೈತನೂ ಸಹ ಹಗಲಿರುಳೆನ್ನದೆ, ಮಳೆ ಗಾಳಿ ಎನ್ನದೇ ಬೆಳೆ ಬಿತ್ತುತ್ತಾನೆ. ಗಡಿಯಲ್ಲಿ ಸೈನಿಕರೂ ಸಹ ಮಳೆ ಗಾಳಿ, ಹಗಲಿರುಳೆನ್ನದೆ ತಮ್ಮ ಜೀವನ ಹಂಗು ತೊರೆದು ದೇಶವನ್ನು ಕಾಯುತ್ತಾರೆ. ಇವರಿಬ್ಬರ ಸೇವೆಯನ್ನು ಎಂದಿಗೂ ನಾವೂ ಮರೆಯುವಂತಿಲ್ಲ, ಇವರ ಸೇವೆಗೆ ನಾವು ಚಿರರುಣಿಗಳು ಎಂದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಮಾತನಾಡಿ ರೈತರನ್ನು, ಸೈನಿಕರನ್ನು ಗುರುತಿಸಿ ಮಂಜುಶ್ರೀ ಶಾಲೆಯ ವತಿಯಿಂದ ರೈತ ಸೈನಿಕೋತ್ಸವ ಎಂಬ ವಿಶೇಷ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ. ಮುಂದೆಯೂ ಇದೇ ರೀತಿ ಕಾರ್ಯಕ್ರಮಗಳನ್ನು ಮಾಡಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ 2024-25 ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಎಸ್ ಎಚ್ ಚಂದ್ರಶೇಖರರಾಧ್ಯ, ಜಿಎಸ್ ರವಿ, ಎಸ್ ಎಲ್ ರಂಗನಾಥ್ ಇವರನ್ನು ಸನ್ಮಾನಿಸಲಾಯಿತು. ವಿಶೇಷ ಆಹ್ವಾನಿತರಾದ ಮಾಜಿ ಮೇಜರ್ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಕಾಶ್ಮೀರದ ಕೆ ಶಿವಮೂರ್ತಿ, ನಗರ ಪೊಲೀಸ್ ಸಿಪಿಐ ಮಂಜೇಗೌಡ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. 2024-25 ನೇ ಸಾಲಿನ ನೆಟ್ ಬಾಲ್ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ತೃತೀಯ ಸ್ಥಾನ ಪಡೆದ ಮಂಜುಶ್ರೀ ಶಾಲೆಯ ವಿದ್ಯಾರ್ಥಿಗಳಾದ ಧನ್ಯತಾ. ಎಸ್.ಪಿ, ದೇವಿಕಾ. ಬಿ.ಎನ್, ಚಂಚಲ, ಅದಿತಿ ಜಿ ಎನ್, ವಿನಂತಿ ವಿ ಕುಮಾರ್ ತಾಡಿ, ಭೂಮಿಕ, ಸಿಂಚನ ಎ ಎಸ್, ನಿಕಿತಾ ಆರ್, ನಿಶ್ಚಿತ ಎಸ್ ಎನ್, ದೈಹಿಕ ಶಿಕ್ಷಣ ಶಿಕ್ಷಕರಾದ ಹೇಮಂತ್ ಕುಮಾರ್ ಮತ್ತು ನವೀನ್ ಕುಮಾರ್ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯದರ್ಶಿ ಮಹಲಿಂಗಪ್ಪ, ಮುಖ್ಯ ಶಿಕ್ಷಕ ಶಿವಮೂರ್ತಿ, ಸೇರಿದಂತೆ ಆಡಳಿತ ಮಂಡಳಿ ಮುಖ್ಯ ಶಿಕ್ಷಕರು ಸಿಬ್ಬಂದಿ ವರ್ಗ ಹಾಜರಿದ್ದರು.