ಭಾರತೀಯ ಯೋಧರ ತ್ಯಾಗವನ್ನು ಎಲ್ಲರೂ ಗೌರವಿಸಿ

| Published : Feb 08 2025, 12:33 AM IST

ಸಾರಾಂಶ

ದೇಶದ ರಕ್ಷಣೆ ಮಾಡುತ್ತಿರುವ ಯೋಧರ ಸೇವೆ ಸ್ಮರಿಸಿ ನಗರದ ೩೨ನೇ ವಾರ್ಡಿನ ನಾಗರಿಕ ಸಮಿತಿ ದೇಶದ ಸೇನಾನಿಗಳಿಗೆ ಗೌರವ ಸಮರ್ಪಿಸಿದರು. ಈ ವೇಳೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ದೇಶದ ರಕ್ಷಣೆ ಮಾಡುತ್ತಿರುವ ಯೋಧರ ಸೇವೆ ಸ್ಮರಿಸಿ ನಗರದ ೩೨ನೇ ವಾರ್ಡಿನ ನಾಗರಿಕ ಸಮಿತಿ ದೇಶದ ಸೇನಾನಿಗಳಿಗೆ ಗೌರವ ಸಮರ್ಪಿಸಿದರು. ಈ ವೇಳೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರನ್ನು ಸನ್ಮಾನಿಸಲಾಯಿತು.

ನಿವೃತ್ತ ಪ್ರಾಂಶುಪಾಲ ಮರಿಬಸಪ್ಪ ಮಾತನಾಡಿ, ತಮ್ಮ ಕುಟುಂಬದಿಂದ ದೂರ ಉಳಿದು, ಜೀವದ ಹಂಗು ತೊರೆದು ಗಡಿಯಲ್ಲಿ ದೇಶ ಕಾಯುತ್ತಾ ಶತ್ರುಗಳಿಂದ ದೇಶದ ರಕ್ಷಣೆ ಮಾಡುತ್ತಿರುವ ಭಾರತೀಯ ಯೋಧರ ತ್ಯಾಗವನ್ನು ಎಲ್ಲರೂ ಗೌರವಿಸಿ ಅಭಿನಂದಿಸಬೇಕು ಎಂದರು.

ರೈತರು ದೇಶಕ್ಕೆ ಅನ್ನ ನೀಡಿದರೆ ಸೈನಿಕರು ದೇಶವನ್ನು ಶತ್ರುಗಳ ದಾಳಿಯಿಂದ ರಕ್ಷಣೆ ಮಾಡುತ್ತಾರೆ. ನಾವೆಲ್ಲಾ ಸುರಕ್ಷಿತವಾಗಿದ್ದೇವೆಂದರೆ ಅದು ಗಡಿಯಲ್ಲಿ ಯೋಧರು ಹಗಲು ರಾತ್ರಿ ದೇಶ ಕಾಯುತ್ತಿವುದೇ ಕಾರಣ. ಅವರ ಸೇವೆ, ಕೊಡುಗೆ ಮರೆಯಲಾಗದು ಎಂದು ಹೇಳಿದರು.

ಬಿಜೆಪಿ ಮುಖಂಡ ಪ್ರೇಮ್‌ಕುಮಾರ್ ಮಾತನಾಡಿ, ಸೈನಿಕರು ತಮ್ಮ ವೈಯಕ್ತಿಕ ಬದುಕನ್ನು ಬದಿಗಿಟ್ಟು ದೇಶದ ರಕ್ಷಣೆಗಾಗಿ ನಿರಂತರವಾಗಿ ಕಾವಲು ಕಾಯುತ್ತಾರೆ. ಎಷ್ಟೋ ಸೈನಿಕರು ದೇಶ ರಕ್ಷಣೆ ಕಾರ್ಯದಲ್ಲಿ ಜೀವ ತೆತ್ತು ಹುತಾತ್ಮರಾಗಿದ್ದಾರೆ, ಅವರ ಕುಟುಂಬಗಳು ನೋವು ಅನುಭವಿಸಿವೆ. ಅವರ ನೋವು ನಮ್ಮೆಲ್ಲರ ನೋವು. ಅಂತಹ ತ್ಯಾಗಿಗಳನ್ನು ನಾವು ಸದಾ ಸ್ಮರಿಸಿ ಗೌರವಿಸಬೇಕು ಎಂದು ಹೇಳಿದರು.

ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು. ಇದೇ ವೇಳೆ ನಿವೃತ್ತ ಸೈನಿಕ ರೇಣುಕಾರಾಧ್ಯ ಅವರ ಜನ್ಮ ದಿನ ಆಚರಿಸಿ ಸಂಭ್ರಮಿಸಿದರು. ವಾರ್ಡಿನ ಹಿರಿಯ ನಾಗರೀಕರು ಸಮಾರಂಭದಲ್ಲಿ ಭಾಗವಹಿಸಿ ಯೋಧರಿಗೆ ಗೌರವಾರ್ಪಣೆ ಮಾಡಿದರು