ಪುತ್ತೂರು: ಪರಿಸರ ಸ್ವಚ್ಛತೆಗೆ ಸಂಬಂಧಿಸಿದಂತೆ ಸಾರ್ವಜನಿಕರೂ ತಮ್ಮ ಜವಾಬ್ದಾರಿ, ಕರ್ತವ್ಯಗಳನ್ನು ಪಾಲಿಸಬೇಕಾಗುತ್ತದೆ. ನಮ್ಮ ಹಾಗೆಯೇ ಪೌರ ಕಾರ್ಮಿಕರು ಕೂಡ ಮನುಷ್ಯರು. ಅವರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುವುದು, ಅವರ ಸೇವೆಗೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪುತ್ತೂರು ನಗರಸಭೆಯ ಪೌರಾಯುಕ್ತೆ ವಿದ್ಯಾ ಎಂ. ಕಾಳೆ ಹೇಳಿದರು.
ಪುತ್ತೂರು: ಪರಿಸರ ಸ್ವಚ್ಛತೆಗೆ ಸಂಬಂಧಿಸಿದಂತೆ ಸಾರ್ವಜನಿಕರೂ ತಮ್ಮ ಜವಾಬ್ದಾರಿ, ಕರ್ತವ್ಯಗಳನ್ನು ಪಾಲಿಸಬೇಕಾಗುತ್ತದೆ. ನಮ್ಮ ಹಾಗೆಯೇ ಪೌರ ಕಾರ್ಮಿಕರು ಕೂಡ ಮನುಷ್ಯರು. ಅವರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುವುದು, ಅವರ ಸೇವೆಗೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪುತ್ತೂರು ನಗರಸಭೆಯ ಪೌರಾಯುಕ್ತೆ ವಿದ್ಯಾ ಎಂ. ಕಾಳೆ ಹೇಳಿದರು.ಗಾಂಧಿ ಜಯಂತಿ ಕಾರ್ಯಕ್ರಮದ ಅಂಗವಾಗಿ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಉದ್ಯಮಿಗಳಾದ ಎಂ.ಜಿ. ರಫೀಕ್, ವಾಮನ ಪೈ, ವಿಶ್ವನಾಥ ಗೌಡ, ಇಸ್ಮಾಯಿಲ್ ಮತ್ತಿತರ ಪ್ರಾಯೋಜಕತ್ವದಲ್ಲಿ ನಗರಸಭೆ ಸಭಾಂಗಣದಲ್ಲಿ ನಡೆದ ನಗರಸಭೆ ಪೌರ ಕಾರ್ಮಿಕರಾದ ಸ್ವಚ್ಛತಾ ಸೇನಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ದೇಶ ಕಂಡ ಅಪರೂಪದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ನಗರಸಭೆಯ ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ ಕೃತಜ್ಞತೆ ಸಮರ್ಪಿಸಿರುವುದು ಶ್ಲಾಘನೀಯ. ಪೌರ ಕಾರ್ಮಿಕರಿಂದ ನಗರ ಸ್ವಚ್ಛವಾಗಿದೆ. ನಗರ ಸಭೆಗೆ ರಾಷ್ಟ್ರಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಹೆಸರು ಬರಲು ಕಾರಣವೇ ಪೌರ ಕಾರ್ಮಿಕರು. ಪೌರ ಕಾರ್ಮಿಕರ ಕೆಲಸದ ಜೊತೆಗೆ ಅವರ ಆರೋಗ್ಯದ ಬಗ್ಗೆಯೂ ನಾವು ಅರಿಯಬೇಕಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ರೋಟರಿ ಸೇವಾ ಸಂಸ್ಥೆಗಳೊಂದಿಗೆ ಐದು ಉದ್ಯಮ ಸಂಸ್ಥೆಗಳು ಪುತ್ತೂರಿನ ಅಭಿವೃದ್ಧಿಗೆ ಸೇವೆಯ ಮೂಲಕ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಸ್ವಚ್ಛತೆ ಎಂಬುದು ಕೇವಲ ಸ್ವಚ್ಛತಾ ಸಿಬ್ಬಂದಿಯ ಜವಾಬ್ದಾರಿಯಲ್ಲ, ಅದು ನಮ್ಮೆಲ್ಲರ ಜವಾಬ್ದಾರಿ. ಪ್ರತ್ತೂರು ನಗರದ ಸೌಂದರ್ಯೀಕರಣದಲ್ಲಿ ಪೌರ ಕಾರ್ಮಿಕರ ಸೇವೆ ಬಹಳ ಅನನ್ಯವಾಗಿದೆ ಎಂದರು.ಉಪ್ಪಿನಂಗಡಿ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಇಬ್ರಾಹಿಂ ಎಂ. ಮಾತನಾಡಿ, ಸತ್ಯ, ಅಹಿಂಸೆಯನ್ನು ಬೋಧಿಸಿದ ಮಾನವತಾವಾದಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿರವರ ಹುಟ್ಟುಹಬ್ಬದಂದು ರೋಟರಿ ಸಂಸ್ಥೆ ಹಾಗೂ ಉದ್ಯಮಗಳು ಜೊತೆಗೂಡಿ ಪೌರ ಕಾರ್ಮಿಕರನ್ನು ಸನ್ಮಾನಿಸಿರುವುದು ಅವಿಸ್ಮರಣೀಯ ಎನಿಸಿದೆ ಎಂದರು.ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ. ದತ್ತಾತ್ರೇಯ ರಾವ್ ಸ್ವಾಗತಿಸಿ, ನಗರ ಸ್ವಚ್ಛತಾ ಸೇನಾನಿಗಳು ಪ್ರತಿನಿತ್ಯ ಏನು ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇವರು ಮಾಡುವ ಶ್ರದ್ಧೆಯ ಕಾರ್ಯ ಸಮಾಜದ ಅಭಿವೃದ್ಧಿಗೆ ಮಾದರಿಯಾಗಿದೆ ಎಂದರು.ಗೌರವಾರ್ಪಣೆಪುತ್ತೂರನ್ನು ನಿರಂತರವಾಗಿ ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಹೀರೋಗಳಾದ ನಗರಸಭೆ ಸ್ವಚ್ಛತಾ ಸೇನಾನಿಗಳಿಗೆ, ಚಾಲಕರಿಗೆ, ಸೂಪರ್‌ವೈಸರ್‌ಗಳಿಗೆ, ಸಮುದಾಯ ಪ್ರೇರಕರ ಸಹಿತ ಸುಮಾರು 65 ಮಂದಿಗೆ ತಲಾ ರು. 2 ಸಾವಿರ ಮೌಲ್ಯದ ಕಿಟ್ ಸಮರ್ಪಣೆ ಮಾಡುವ ಮೂಲಕ ಗೌರವಿಸಲಾಯಿತು. ನಗರಸಭಾ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಅವರನ್ನು ಸನ್ಮಾನಿಸಲಾಯಿತು.ರೋಟರಿ ಸಂಸ್ಥೆಯ ವಿಶ್ವನಾಥ ಗೌಡ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಮನೋಜ್ ಟಿ.ವಿ, ಇಸ್ಮಾಯಿಲ್, ವಾಮನ ಪೈ, ಜಾಗೃತಿ ಜಾಥಾ ಉಸ್ತುವಾರಿ ಜಗಜೀವನ್ ದಾಸ್ ರೈ, ಪುತ್ತೂರು ನಗರಸಭೆಯ ಆರೋಗ್ಯ ನಿರೀಕ್ಷಕಿ ಶ್ವೇತಾಕಿರಣ್, ಸಂತ ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್, ಸುದಾನ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್, ಪುತ್ತೂರು ಎಂಟು ರೋಟರಿ ಕ್ಲಬ್ ಗಳ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.ಕಾರ್ಯಕ್ರಮದ ಪ್ರಾಯೋಜಕರಲ್ಲಿ ಓರ್ವರಾದ ರೋಟರಿಯ ರಫೀಕ್ ಎಂ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿ ಪ್ರಾರ್ಥಿಸಿದರು. ರೋಟರಿ ಪುತ್ತೂರು ಪೂರ್ವಾಧ್ಯಕ್ಷ ವಾಮನ ಪೈ ವಂದಿಸಿದರು. ಹೇಮಾ ಜಯರಾಂ ಕಾರ್ಯಕ್ರಮ ನಿರ್ವಹಿಸಿದರು.ಸ್ವಚ್ಛತಾ ಜಾಗೃತಿ ಜಾಥಾಬೆಳಗ್ಗೆ ದರ್ಬೆ ಮತ್ತು ಬೊಳುವಾರಿನಿಂದ ಏಕಕಾಲಕ್ಕೆ ನಮ್ಮ ಕಸ ನಮ್ಮ ಜವಾಬ್ದಾರಿ, ಸ್ವಚ್ಛ ಪರಿಸರ ಸುಂದರ ಪರಿಸರ, ಅಲ್ಲಲ್ಲಿ ಉಗುಳಬೇಡಿ, ಸ್ವಚ್ಛ ಪುತ್ತೂರು ಸುಂದರ ಪುತ್ತೂರು, ಅಲ್ಲಲ್ಲಿ ಪ್ಲಾಸ್ಟಿಕ್, ಕಸ ಎಸೆಯಬೇಡಿ, ಮನೆ ಮನೆಗೆ ಬಂದು ಕಸ ಸಂಗ್ರಹಿಸುವ ಸ್ವಚ್ಛತಾ ಸೇನಾನಿಗಳನ್ನು ಗೌರವಿಸಿ, ಹಸಿ ಕಸ, ಒಣ ಕಸ ವಿಂಗಡಿಸಿ ಕೊಡೋಣ ಎಂಬ ಘೋಷ ವಾಕ್ಯದೊಂದಿಗೆ ಸ್ವಚ್ಛತಾ ಜಾಗೃತಿ ಜಾಥಾ ಪುತ್ತೂರು ಬಸ್ ನಿಲ್ದಾಣದ ತನಕ ನಡೆಯಿತು. ಈ ಜಾಥಾದಲ್ಲಿ ಪುತ್ತೂರಿನ 8 ರೋಟರಿ ಕ್ಲಬ್ ಸದಸ್ಯರು, ಸಂತ ಫಿಲೋಮಿನಾ ಕಾಲೇಜು, ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿಗಳು, ನಗರಸಭೆ ಅಧಿಕಾರಿಗಳು ಭಾಗವಹಿಸಿದ್ದರು.