ದೇಶ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಯೋಧರನ್ನು ಗೌರವಿಸಿ: ಸುಜಾತಾ

| Published : Feb 17 2025, 12:34 AM IST

ದೇಶ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಯೋಧರನ್ನು ಗೌರವಿಸಿ: ಸುಜಾತಾ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಯೋಧರ ಶ್ರಮ ಮತ್ತು ತ್ಯಾಗ ದೇಶದ ಸುರಕ್ಷತೆಗೆ ಕಾರಣವಾಗಿದೆ. ದೇಶ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಯೋಧರನ್ನು ಪ್ರತಿಯೊಬ್ಬರು ಗೌರವಿಸಿ ಸ್ಮರಿಸಬೇಕು ಎಂದು ನಗರ ಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಯೋಧರ ಶ್ರಮ ಮತ್ತು ತ್ಯಾಗ ದೇಶದ ಸುರಕ್ಷತೆಗೆ ಕಾರಣವಾಗಿದೆ. ದೇಶ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಯೋಧರನ್ನು ಪ್ರತಿಯೊಬ್ಬರು ಗೌರವಿಸಿ ಸ್ಮರಿಸಬೇಕು ಎಂದು ನಗರ ಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.ನಗರದ ದೀಪ ನಸಿಂಗ್ ಹೋಂ ಹತ್ತಿರ ನಾಗರಿಕರ ಪರವಾಗಿ ಪುಲ್ವಾಮ ದಾಳಿಯಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಯೋಧನಮನ ಸಲ್ಲಿಸಿ ಮಾತನಾಡಿದ ಭಾರತೀಯರು ಮರೆಯಲಾಗದ ದಿನ, ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನವಾಗಿದೆ ಎಂದರು.

ದೇಶದೊಳಗಿನ ಪ್ರಜೆಗಳು ಸುರಕ್ಷಿತವಾಗಿ ನೆಮ್ಮದಿಯ ಜೀವನ ನಿರ್ವಹಿಸಬೇಕೆಂದರೆ ಸೈನಿಕರ ತ್ಯಾಗ ಬಲಿದಾನಗಳು ಸಾಕಷ್ಟಿವೆ. ತಮ್ಮ ಕುಟುಂಬವನ್ನು ಮರೆತು ದೇಶವೇ ತಂದೆ-ತಾಯಿ ಎಂದು ಭಾವಿಸಿ ಮಾತೃ ಭೂಮಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಸೈನಿಕರ ಕಾರ್ಯ ಪ್ರತಿಯೊಬ್ಬರು ಸ್ಮರಿಸುವಂತದ್ದು. ಪ್ರತಿಯೊಬ್ಬ ಸೈನಿಕರ ಜೀವನವೂ ಇಂದಿನ ಯುವ ಜನತೆಯಲ್ಲಿ ದೇಶ ಪ್ರೇಮ ಮೂಡಿಸುತ್ತದೆ ಎಂದ ಅವರು ದೇಶದ ಎಲ್ಲಾ ನಾಗರಿಕರು ತಂದೆ-ತಾಯಿ, ಗುರು ಹಿರಿಯರು, ರೈತರು ಹಾಗೂ ಸೈನಿಕರ ತ್ಯಾಗ ಅರಿತು ಗೌರವ ಸಲ್ಲಿಸಿ ಅವರಿಗೆ ಕೃತಜ್ಞರಾಗಿ ರಬೇಕು ಎಂದು ಹೇಳಿದರು.

ಸುಮಂತ್ ನೆಮ್ಮರ್, ಹುತಾತ್ಮ ಸೈನಿಕರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ ೪೦ ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಆ ದಿನ ಇಡೀ ಭಾರತವೇ ಶೋಕಸಾಗರದಲ್ಲಿ ಮುಳುಗಿತ್ತು. ಯೋಧರು ಕುಟುಂಬ ತೊರೆದು, ತಮ್ಮ ಪ್ರಾಣನ್ನುಲೆಕ್ಕಿಸದೇ ದೇಶದ ರಕ್ಷಣೆ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಆವರ ಶ್ರಮ ನಮ್ಮ ನೆಮ್ಮದಿಗೆ ಕಾರಣ. ಅವರಿಂದಲೇ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದ ಅವರು ಪ್ರತಿಯೊಬ್ಬರು ಸೈನಿಕರನು ಸ್ಮರಿಸಿ ಗೌರವಸಲ್ಲಿಸಬೇಕು ಎಂದು ಹೇಳಿದರು.

.ಞಈ ಸಂದರ್ಭದಲ್ಲಿ ಬಿಜೆಪಿ ನಗರ ಯುವ ಮೋರ್ಚಾ ಕಾರ್ಯದರ್ಶಿ ಪ್ರಶಾಂತ್, ಸತ್ಯನಾರಾಯಣ, ಶರವಣ, ಸತೀಶ್ ಇತರರು ಉಪಸ್ಥಿತರಿದ್ದರು