ಕುಕನೂರು: ಪ್ರತಿಯೊಬ್ಬ ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಗ್ರಾಪಂ ಕಾರ್ಯದರ್ಶಿ ಫಕೀರಪ್ಪ ಮೂಲಿಮನಿ ಹೇಳಿದರು.
ತಾಲೂಕಿನ ನೆಲಜೇರಿ ಗ್ರಾಪಂ ಗ್ರಂಥಾಲಯ ಹಾಗೂ ಅರಿವು ಕೇಂದ್ರದಲ್ಲಿ ಕಲಿಕಾ ಟಾಟಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ದಿನಾಚರಣೆಯ ಕಾರ್ಯಕ್ರಮಕ್ಕೆ ಕೆಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಶನಿವಾರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಹಿರಿಯರನ್ನು ಗೌರವಿಸುವ ಮೂಲಕ ಪೂರ್ವಜರ ಕಾಲದಿಂದಲೂ ಬಂದಿರುವ ಸಂಸ್ಕೃತಿ ವಿಚಾರ ನಡೆಸಬೇಕು. ಶತಾಯುಷಿ ಬದುಕು ಮೂಲಕ ಹಿರಿಯರ ಮಾರ್ಗದರ್ಶನೊಂದಿಗೆ ಮುನ್ನಡೆಯಲಿ. ಇಂದಿನ ದಿನಮಾನದಲ್ಲಿ ತಂದೆ ತಾಯಿರನ್ನು ಪೂಜ್ಯಭಾವನೆಯಿಂದ ಕಾಣುವುದು ಅಪರೂಪವಾಗಿದೆ.ಅಂತಹ ಸನ್ಮಾರ್ಗ ಅನುಸರಿಸಬೇಕಿದೆ ಎಂದರು.ಗ್ರಂಥಾಲಯ ಮೇಲ್ವಿಚಾರಕ ದೇವರಾಜ್ ಮ್ಯಾದನೇರಿ ಮಾತನಾಡಿ, ಪೂರ್ವಜರ ಕಾಲದಿಂದಲೂ ಹಿರಿಯರಿಗೆ ಗೌರವ ಕೊಟ್ಟು ನಡೆಯುಂತಹ ಪರಂಪರೆ ಉಳಿಸಿಕೊಳ್ಳಬೇಕು. ಯುವ ಪೀಳಿಗೆಗೆ ಆಚಾರ್ ವಿಚಾರ ತಿಳಿಸಬೇಕು. ಮಹಿಳೆಯರನ್ನು ಗೌರವಯುತವಾಗಿ ಕಾಣಬೇಕು ಎಂದರು.
ಗ್ರಾಪಂ ಕಾರ್ಯದರ್ಶಿ ಯಮನೂರಪ್ಪ ವಾಲ್ಮೀಕಿ, ಕಂಪ್ಯೂಟರ್ ಆಪರೇಟರ್ ಮಂಜುಳಾ ಉಸಗಲಿ, ಕಾಯಕ ಮಿತ್ರ ಲಲಿತಾ ಹೊಸೂರು, ಗ್ರಾಮ ಹಿರಿಯರ ಕೇಂದ್ರದ ಪೇರಕಿ ಅಮೃತಾ ಡಿ.ಭಾವಿಕಟ್ಟಿ, ಅಂದಾನಪ್ಪ ಕಲ್ಲಭಾವಿ, ಶಂಕ್ರಪ್ಪ ಕುರಿ, ಆನಂದಸ್ವಾಮಿ,ಬಸಮ್ಮ ಭಾವಿಕಟ್ಟಿ, ಅನಸೂಯಾ ಹನಮನಾಳ, ದ್ಯಾಮವ್ವ ಕಲ್ಲಭಾವಿ, ಬಸವಂತೆವ್ವ ಹೊಸಳ್ಳಿ, ಗಂಗವ್ವ ಭಾವಿಕಟ್ಟಿ,ರೇಣುಕಾ ಲಂಡೇರ್, ರೇಖಾ ಮಾಲಿಪಾಟೀಲ್, ಸುಭಾಷ್ ಮಾಲಿಪಾಟೀಲ್ ಇದ್ದರು.