ಸಾರಾಂಶ
ಕಾನೂನು ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಜಯಣ್ಣ ಹೇಳಿಕೆ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಅಪರಾಧ ಮುಕ್ತ ಸಮಾಜವನ್ನಾಗಿಸಲು ಕಾನೂನನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಗ್ರಾಪಂ ಅಧ್ಯಕ್ಷ ಎಸ್.ಜಯಣ್ಣ ಹೇಳಿದರು.ತಾಲೂಕಿನ ಬಿ.ಜಿಕೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಶನಿವಾರ ಜಿಪಂ, ತಾಪಂ, ತಾಲೂಕು ಸಮಾಜ ಕಲ್ಯಾಣ ಇಲಾಖೆ, ಸಮಾಜ ಪರಿವರ್ತನಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳ ಕಾನೂನು ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ ಅಸಮಾನತೆಯನ್ನು ನಿವಾರಿಸಿ ಸರ್ವರಿಗೂ ಸಮಾನತೆ ಕಲ್ಪಿಸುವಲ್ಲಿ ಡಾ.ಬಾಬಾ ಸಾಹೇಬರು ಬರೆದ ಸಂವಿದಾನ ಪ್ರತಿ ಭಾರತೀಯನಿಗೂ ಬದುಕುವ ಹಕ್ಕು ನೀಡಿದೆ. ಪ್ರಜಾಭುತ್ವದ ರಾಷ್ಟ್ರದಲ್ಲಿ ಪ್ರತಿಯೊಬ್ಬರೂ ಸ್ನೇಹ ಜೀವಿಗಳಾಗಿ ಬಾಳಬೇಕು.ಮೇಲು ಕೀಳೆಂಬ ಬೇದ ವನರಿಯದೆ ಸೌಹಾರ್ಧತೆಯಿಂದ ಬಾಳಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡಿದೆ. ಸರ್ಕಾರದ ಸೌಲಬ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣವಂತರಾಗಬೇಕು.ಸಂವಿದಾನದ ಮಹತ್ವವನ್ನು ಅರಿತುಕೊಂಡು ಸಂವಿದಾನದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದರು. ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ಷಣ್ಮುಖಪ್ಪ ಮಾತನಾಡಿ, ನಾಗರಿಕ ಸಮಾಜದಲ್ಲಿ ಪ್ರತಿಯೊಬ್ಬರಿಗೂ ನೆಮ್ಮದಿಯಿಂದ ಬಾಳಲು ಕಾನೂನುಗಳ ಪರಿಪಾಲನೆ ಮುಖ್ಯವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಸಂವಿದಾನ ಮತ್ತು ಕಾನೂನಿನ ಮಹತ್ವ ಅರಿತುಕೊಂಡು ಬದುಕಬೇಕು ಎಂದರು. ಈ ವೇಳೆ ಹಿರಿಯ ವಕೀಲ ಎಸ್.ಎಫ್.ಶಮೀವುಲ್ಲ, ಗ್ರಾಪಂ ಸದಸ್ಯ ಮಹೇಶ್, ಮುಖಂಡರಾದ ಮಲ್ಲಣ್ಣ, ರಾಜ, ಗುಂಡಣ್ಣ, ಮಾರಣ್ಣ, ಬಸಣ್ಣ, ಮುಖ್ಯ ಶಿಕ್ಷಕಿ ಬಂಜಮ್ಮ, ಸಮಾಜ ಪರಿವರ್ತನಾ ಸಂಸ್ಥೆಯ ಕಾರ್ಯದರ್ಶಿ ಮರ್ಲಹಳ್ಳಿ ಪರಮೇಶ್ ಇದ್ದರು.