ಡೇರಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ - ಎಸ್.ಪಿ.ಸ್ವಾಮಿ

| Published : Mar 12 2025, 12:45 AM IST

ಸಾರಾಂಶ

ಮದ್ದೂರು: ಹಾಲು ಉತ್ಪಾದಕರ ಸಹಕಾರ ಸಂಘಗಳ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ಮನ್ಮುಲ್ ನೂತನ ನಿರ್ದೇಶಕ ಎಸ್. ಪಿ.ಸ್ವಾಮಿ ಮಂಗಳವಾರ ಹೇಳಿದರು.

ಮದ್ದೂರು: ಹಾಲು ಉತ್ಪಾದಕರ ಸಹಕಾರ ಸಂಘಗಳ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ಮನ್ಮುಲ್ ನೂತನ ನಿರ್ದೇಶಕ ಎಸ್. ಪಿ.ಸ್ವಾಮಿ ಮಂಗಳವಾರ ಹೇಳಿದರು.

ಪಟ್ಟಣದ ಮಳವಳ್ಳಿ ರಸ್ತೆಯ ಬಿಜೆಪಿ ಕಚೇರಿಯಲ್ಲಿ ಸಿ.ಎ.ಕೆರೆ ಹೋಬಳಿ ಮಣಿಗೆರೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಕೆ.ಪುಟ್ಟಲಿಂಗಯ್ಯ ನೇತೃತ್ವದಲ್ಲಿ ವಿವಿಧ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ನಿವೃತ್ತಿ ಪರಿಹಾರ ಧನವನ್ನು ಒಕ್ಕೂಟ ಪ್ರಸ್ತುತ 5 ಲಕ್ಷ ರು. ನೀಡುತ್ತಿದೆ. ಅದನ್ನು ಕನಿಷ್ಠ 7 ಲಕ್ಷ ರು. ಗಳಿಗೆ ಏರಿಕೆ ಮಾಡುವಂತೆ ಸಂಘಗಳ ಕಾರ್ಯದರ್ಶಿಗಳು ಬೇಡಿಕೆ ಇಟ್ಟಿದ್ದಾರೆ. ನಿವೃತ್ತಿ ಪರಿಹಾರ ಧನ ಏರಿಕೆ ಸಂಬಂಧ ತಾವು ಹಾಲು ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ರಾಜ್ಯ ಸರ್ಕಾರ ಕಳೆದ 9 ತಿಂಗಳಿಂದ ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರತಿ ಲೀಟರ್ ಗೆ 5 ರು. ಗಳ ಪ್ರೋತ್ಸಾಹ ಧನದಲ್ಲಿ ಸಂಘಗಳ ಕಾರ್ಯದರ್ಶಿಗಳ ಹತ್ತು ಪೈಸೆ ಇನ್ಸೆಂಟಿವ್ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಕಾರ್ಯದರ್ಶಿಗಳು ಅಹವಾಲು ಸಲ್ಲಿಸಿದ್ದಾರೆ. ಈ ಬಗ್ಗೆಯೂ ಸಹ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ನಿರ್ದೇಶಕ ಆಶ್ವಾಸನೆ ನೀಡಿದರು. ಗೋಪನಹಳ್ಳಿ ಹಾಲು ಉತ್ಪಾದಕರ ಸಂಘದ ಕೆಂಪರಾಜು, ಬೀದರ ಹೊಸಹಳ್ಳಿಯ ಎಚ್.ಎಸ್.ಮರಿಗೌಡ, ಬೊಪ್ಪಸಮುದ್ರ ದ ಎಂ. ಮಾದಯ್ಯ, ಮೆಳ್ಳಹಳ್ಳಿಯ ವೆಂಕಟಾಚಲಯ್ಯ, ಇದ್ದರು.