ಧರ್ಮ ಪಾಲನೆ ಕ್ಷತ್ರಿಯರ ಜವಾಬ್ದಾರಿ : ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌

| N/A | Published : Feb 24 2025, 12:32 AM IST / Updated: Feb 24 2025, 01:28 PM IST

ಸಾರಾಂಶ

ಪಾಲೇಮಾರ್‌ ಗಾರ್ಡನ್‌ನಲ್ಲಿ ಎರಡು ದಿನಗಳ ಕ್ಷಾತ್ರ ಸಂಗಮ ರಾಮಕ್ಷತ್ರಿಯರ ಸಮಾವೇಶದ ಸಮಾರೋಪ ಸಮಾರಂಭ ನಡೆಯಿತು.

 ಮಂಗಳೂರು : ಹಿಂದೆ ರಾಜ್ಯ ರಕ್ಷಣೆಗಾಗಿ ಯುದ್ಧದಲ್ಲಿ ಹೋರಾಡುತ್ತಿದ್ದ ಕ್ಷತ್ರಿಯ ಸಮುದಾಯವಿತ್ತು. ಇಂದು ಆ ಕಾಲ ಬದಲಾಗಿದೆ. ಆದರೂ ಮನೆ ಮನೆಯಲ್ಲಿ ಧರ್ಮ ಪಾಲನೆ, ಸಂಘಟನೆ ಮೂಲಕ ಧರ್ಮ ರಕ್ಷಣೆ ಆಗಬೇಕಾಗಿದೆ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದ್ದಾರೆ.

ನಗರದ ಪಾಲೇಮಾರ್‌ ಗಾರ್ಡನ್‌ನಲ್ಲಿ ಎರಡು ದಿನಗಳ ಕ್ಷಾತ್ರ ಸಂಗಮ ರಾಮಕ್ಷತ್ರಿಯರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಧರ್ಮ, ಸಂಸ್ಕೃತಿ, ಪರಂಪರೆ ಉಳಿಸುವ ಜವಾಬ್ದಾರಿ ಕ್ಷತ್ರಿಯ ಸಮುದಾಯಗಳ ಮೇಲಿದೆ. ಅದಕ್ಕಾಗಿ ಎಲ್ಲರೂ ಒಂದಾಗಿ ಮುನ್ನಡೆಯಬೇಕಾಗಿದೆ. ರಾಮಕ್ಷತ್ರಿಯರ ಸಮುದಾಯದಲ್ಲಿ ರಾಮನ ಹೆಸರೇ ಇದೆ. ಇದು ಅಪೂರ್ವವಾದ ಸಮುದಾಯವಾಗಿದೆ ಎಂದರು.

ಕಾರ್ಯಕ್ರಮದ ಪ್ರಧಾನ ಸಲಹೆಗಾರ, ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಅಧ್ಯಕ್ಷತೆ ವಹಿಸಿದ್ದರು. ಭೂಸೇನಾ ನಿವೃತ್ತ ಅಧಿಕಾರಿ ಬ್ರಿಗೇಡಿಯರ್‌ ಐ.ಎನ್‌.ರೈ, ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿದರು.

ರಾಮಕ್ಷತ್ರಿಯ ಸಮಾಜದ ಹಿರಿಯ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಪ್ರಧಾನ ಸಂಚಾಲಕ ಜೆ.ಕೆ. ರಾವ್‌, ವಿಶ್ವ ರಾಮಕ್ಷತ್ರಿಯ ಮಹಾ ಸಂಘದ ಅಧ್ಯಕ್ಷ ಶಶಿಧರ್‌ ನಾಯ್ಕ್, ಸಂಘದ ಗೌರವಾಧ್ಯಕ್ಷ ರವೀಂದ್ರ ಕೆ., ಉಪಾಧ್ಯಕ್ಷ ಜಯಕರ ಕೆ., ಕಾರ್ಯದರ್ಶಿ ರವೀಂದ್ರ ರಾವ್‌ ಕೆ., ಕೋಶಾಧಿಕಾರಿ ದಿನೇಶ್‌ ಕುಮಾರ್‌ ಬೇಕಲ್‌, ಪ್ರಮುಖರಾದ ಎಂ.ವಿ.ರಾಘವೇಂದ್ರ ರಾವ್‌, ಗಣಪತಿ ಬಿ, ದೇವರಾಯ ಶೇರೆಗಾರ, ಡಾ.|ಕೃಷ್ಣ ಪ್ರಸಾದ್‌ ಕೂಡ್ಲು, ಎಸಿಎಫ್‌ ಶ್ರೀಧರ್‌, ನಾಗರಾಜ್‌ ಕಾಮಧೇನು ಇದ್ದರು. ಸಂಘದ ಅಧ್ಯಕ್ಷ ಮುರಳೀಧರ್‌.ಸಿ.ಎಚ್‌ ಸ್ವಾಗತಿಸಿದರು.