ಹಿಂದೂ ಧರ್ಮ ಒಡೆದು ಆಳು ನೀತಿಯನ್ನು ಅನುಸರಿಸುವ ವಿಧ್ವಂಸಕ ಶಕ್ತಿಗಳಿಂದ ಭಾರತಾಂಬೆಯನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಹೆಗಲ ಮೇಲಿದೆ. ಭಾರತಾಂಬೆ ನಮ್ಮೆಲ್ಲರ ಆಸ್ತಿ ಅದನ್ನು ಪೂಜಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಅದನ್ನು ಪ್ರಶ್ನಿಸುವ ಹಾಗೂ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬದಲಾಗಿ ಸಂರಕ್ಷಿಸುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ಹೊರಬೇಕಿದೆ ಆಗ ಮಾತ್ರ ಸದೃಢ ದೇಶವನ್ನ ಕಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಹಿಂದೂ ಸಮಾಜದ ಏಕತೆ ಸಾಮರಸ್ಯ ಸಾಮಾಜಿಕ ಪರಿವರ್ತನೆ, ಧಾರ್ಮಿಕ ಮತ್ತು ರಾಷ್ಟ್ರೀಯ ಪ್ರಜ್ಞೆ ಭಾವನೆಯ ಬದುಕನ್ನು ಇನ್ನಷ್ಟು ಒಗ್ಗಟಿನ ಪ್ರದರ್ಶನಕ್ಕೆ ನಾವುಗಳು ಬರಬೇಕು ಎಂದು ಹಿಂದೂ ಸಮಾಜದ ಪ್ರಮುಖ ವಕ್ತಾರ ಹಾಗೂ ಸಾಮಾಜಿಕ ಚಿಂತಕ ನವೀನ್ ಸುಬ್ರಹ್ಮಣ್ಯ ತಿಳಿಸಿದ್ದಾರೆ.ಇಲ್ಲಿನ ಕೆಪಿಎಸ್ ಶಾಲಾ ಅವರಣದಲ್ಲಿ ಜರುಗಿದ ಬೃಹತ್ ಹಿಂದೂ ಸಮಾಜೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಾ, ಹಿಂದೂ ದೇವಾಲಯಗಳನ್ನು ಸಂರಕ್ಷಿಸುವುದರ ಜೊತೆಗೆ ಸನಾತನ ಹಿಂದೂ ಧರ್ಮ ಮತ್ತು ಅದರ ತತ್ವಗಳನ್ನು ಎತ್ತಿ ಹಿಡಿಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಿಂದೂ ಧರ್ಮದ ಸಾರ ಸಕಲ ಜೀವಿಗಳಿಗೂ ಲೇಸನ್ನು ಬಯಸುವ ಅಂಶವನ್ನು ಹೊಂದಿದ್ದು ಹಿಂದೂ ಧರ್ಮ ಇತರ ಧರ್ಮಗಳಿಗೆ ಹೋಲಿಸಿದರೆ ಪಾವಿತ್ರ್ಯತೆಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಹೇಳಿದರು. ಹಿಂದೂ ಧರ್ಮ ಒಡೆದು ಆಳು ನೀತಿಯನ್ನು ಅನುಸರಿಸುವ ವಿಧ್ವಂಸಕ ಶಕ್ತಿಗಳಿಂದ ಭಾರತಾಂಬೆಯನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಹೆಗಲ ಮೇಲಿದೆ. ಭಾರತಾಂಬೆ ನಮ್ಮೆಲ್ಲರ ಆಸ್ತಿ ಅದನ್ನು ಪೂಜಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಅದನ್ನು ಪ್ರಶ್ನಿಸುವ ಹಾಗೂ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬದಲಾಗಿ ಸಂರಕ್ಷಿಸುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ಹೊರಬೇಕಿದೆ ಆಗ ಮಾತ್ರ ಸದೃಢ ದೇಶವನ್ನ ಕಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್. ಜಿ. ಆರ್‌. ಕಾಲೇಜಿನ ಉಪಾನ್ಯಾಸಕ ಗಂಗೂರು ಸಿದ್ದೇಶ್ ಮಾತನಾಡುತ್ತ, ಹಿಂದೂ ಧರ್ಮವು ವಿಶ್ವದಲ್ಲೇ ಅತ್ಯಂತ ಪ್ರಾಚೀನ ಧರ್ಮಗಳಲ್ಲಿ ಒಂದು. ಇದು ಸುಮಾರು ೪,೦೦೦ ವರ್ಷಗಳಿಗಿಂತ ಹೆಚ್ಚು ಇತಿಹಾಸ ಹೊಂದಿದೆ. ಇದರ ಮೂಲಗಳು ಭಾರತೀಯ ಉಪಖಂಡದಲ್ಲಿ ಬೆಳೆಯುತ್ತಾ ಬಂದವು. ಹಿಂದೂ ಧರ್ಮವನ್ನು “ಸನಾತನ ಧರ್ಮ” ಎಂದೂ ಕರೆಯುತ್ತಾರೆ, ಅಂದರೆ ಶಾಶ್ವತ ಧರ್ಮ. ಈ ಕಾಲದಲ್ಲಿ ಎರಡು ಮಹಾಕಾವ್ಯಗಳು ರಚಿಸಲ್ಪಟ್ಟವು ಮಹಾಭಾರತ ರಾಮಾಯಣ, ಮಹಾಭಾರತದ ಒಂದು ಭಾಗವಾಗಿದ್ದು, ಜೀವನದ ಕರ್ತವ್ಯ ಮತ್ತು ಧರ್ಮದ ಬಗ್ಗೆ ಉಪದೇಶ ನೀಡುತ್ತದೆ.

ರಾಮಾಯಣದಲ್ಲಿ ತನ್ನ ಕುಟುಂಬ ಮಾತಿನ ಬೆಲೆ, ಹಿರಿಯರ ಆಜ್ಞೆ, ಗೌರವ, ಪಾಲನೆ ಇವುಗಳನ್ನು ನೋಡುತ್ತ ಬಂದ ನಮ್ಮ ಸಂಪ್ರದಾಯ. ಹಿಂದೂ ಧರ್ಮವು ಒಂದು ಏಕೈಕ ಸ್ಥಾಪಕರಿಲ್ಲದ, ಅನೇಕ ಪರಂಪರೆಗಳು ಮತ್ತು ತತ್ವಗಳ ಸಂಯೋಜನೆಯಾಗಿದೆ. ಇದು ಕಾಲಕ್ರಮೇಣ ರೂಪಾಂತರಗೊಂಡು ಇಂದು ವಿಶ್ವದಾದ್ಯಂತ ಕೋಟಿ ಕೋಟಿ ಜನರ ಆಧ್ಯಾತ್ಮಿಕ ಜೀವನಕ್ಕೆ ಆಧಾರವಾಗಿದೆ. ಹಿಂದು ಸಮಾಜವು ಒಂದು ಏಕೀಕೃತ ವ್ಯವಸ್ಥೆಯಲ್ಲ; ಅದು ವೈವಿಧ್ಯಮಯ ಆಚರಣೆಗಳು, ದೇವತೆಗಳು, ಸಂಪ್ರದಾಯಗಳು ಮತ್ತು ತತ್ವಶಾಸ್ತ್ರಗಳನ್ನು ಒಳಗೊಂಡಿರುವ ವಿಶಾಲ ಸಂಸ್ಕೃತಿಯಾಗಿದೆ. ಒಟ್ಟಿನಲ್ಲಿ ನಮ್ಮ ದೇಶದ ಸ್ವಾತಂತ್ರ್ಯ ಪೂರ್ವ ನಂತರ ಹಿಂದೂ ಧರ್ಮವನ್ನು ಒಡೆಯಲು ರಾಜಕೀಯ ವೈಯುಕ್ತಿಕ ಅಧಿಕಾರಕ್ಕೆ ಹೆಚ್ಚು ಆಸಕ್ತಿ ನೀಡುತ್ತ ಬಂದಿದೆ. ಇದರ ಪರಿಣಾಮ ಕೆಲವೇ ವರ್ಷಗಳಲ್ಲಿ ನೋಡುತ್ತಿರ ಎಂದು ತಿಳಿಸಿದರು.ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷ ರಘುನಾಥ್ ಅವರು ಮಾತನಾಡಿ, ಹಿಂದೂ ಧರ್ಮ ಸನಾತನ ಧರ್ಮ ಭಾರತೀಯರ ಕಣಕಣದಲ್ಲೂ ಹಿಂದುತ್ವ ಅಡಗಿರಬೇಕು. ದೇಶ ಭಾಷೆ, ನಿಲ್ಲ, ಜಲ ಸಂಸ್ಕೃತಿ ವಿಷಯಕ್ಕೆ ಯಾರೇ ಅಡ್ಡಿಪಡಿಸಿದರೂ ಪ್ರತಿಯೊಬ್ಬರು ಯೋಧರಂತೆ ನಿಂತು ಸಂರಕ್ಷಿಸುವ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.ವಿಶೇಷವಾಗಿ ವಿದೇಶಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಿಂದೂ ಸಮಾಜೋತ್ಸವದ ಮುಖಂಡ ಬೇಲೂರು ತಾಲೂಕು ಹಿಂದೂ ಸಮಾಜೋತ್ಸವದ ಅಧ್ಯಕ್ಷ ರೇಣುಕುಮಾರ್‌, ಹಳೇಬೀಡಿನ ಅಧ್ಯಕ್ಷ ರಘುನಾಥ್, ಪುಷ್ಪಗಿರಿ ಧಾರ್ಮಿಕ ಪರಿಷತ್ ಅಧ್ಯಕ್ಷ ಡಾ. ಎಂ. ಸಿ. ಕುಮಾರ್‌, ಸ್ಥಳೀಯ ಮುಖಂಡರಾದ ಪರಮೇಶ್, ಈಶ್ವರ್‌, ಶಶಿಧರ್‌, ಸಿದ್ದೇಶ್, ಗಂಗೂರು ಶಿವಕುಮಾರ್, ಬಸ್ತಿಹಳ್ಳಿ ಸೋಮಣ್ಣ, ಪ್ರಸನ್ನ, ರಂಜಿತ್, ದರ್ಶನ್, ಶಂಕರ್‌ನಾಗ್, ಶಿವನಾಗ್, ಶಾರದ ಸಂಸ್ಥೆಯ ಅಧ್ಯಕ್ಷ ಯತೀಶ್, ಬೇಲೂರಿನ ಶೋಭಗಣೇಶ್, ಶ್ರೀಹರಿ, ಮುರಳಿ, ನಾಗೇನಹಳ್ಳೀ ಶ್ರೀಧರ್‌, ಮಂಜು, ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡು ಯಶಸ್ವಿಗೊಳಿಸಿದರು. ಸ್ವಾಗತ ಗಂಗೂರು ಶಿವಕುಮಾರ್, ನಿರೂಪಣೆ ಸುರೇಶ್, ವಂದನಾರ್ಪಣೆ ಯುಕ್ತ, ವಂದೇ ಮಾತರಂ ಗೀತೆ ಮೂಲಕ ಮುಕ್ತಾಯಗೊಂಡಿತು.