ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮವನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವುದನ್ನು ವಿರೋಧಿಸಿ ಗ್ರಾಮಸ್ಥರು ಶಾಸಕ ಕೆ.ಎಂ.ಉದಯ್ ಅವರಿಗೆ ಗ್ರಾಮ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಪೊಲೀಸರಿಂದ ಗ್ರಾಮಸ್ಥರ ಪ್ರತಿಭಟನೆ ಅರಿತ ಶಾಸಕರು ಗೆಜ್ಜಲಗೆರೆ ಗ್ರಾಮ ಭೇಟಿ ರದ್ದುಪಡಿಸಿದ ಘಟನೆ ಘಟನೆ ಸೋಮವಾರ ಜರುಗಿತು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಗೆಜ್ಜಲಗೆರೆ ಗ್ರಾಮವನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವುದನ್ನು ವಿರೋಧಿಸಿ ಗ್ರಾಮಸ್ಥರು ಶಾಸಕ ಕೆ.ಎಂ.ಉದಯ್ ಅವರಿಗೆ ಗ್ರಾಮ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಪೊಲೀಸರಿಂದ ಗ್ರಾಮಸ್ಥರ ಪ್ರತಿಭಟನೆ ಅರಿತ ಶಾಸಕರು ಗೆಜ್ಜಲಗೆರೆ ಗ್ರಾಮ ಭೇಟಿ ರದ್ದುಪಡಿಸಿದ ಘಟನೆ ಘಟನೆ ಸೋಮವಾರ ಜರುಗಿತು.

ಕಳೆದ 119 ದಿನಗಳಿಂದ ಗೆಜ್ಜಲಗೆರೆ ಗ್ರಾಮದ ಹೋರಾಟಗಾರರ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಸಹ ಶಾಸಕ ಉದಯ್ ಅವರು ಧರಣಿ ಸ್ಥಳಕ್ಕೆ ಬಂದು ಅಹವಾಲು ಆಲಿಸುವ ಪ್ರಯತ್ನ ಮಾಡಲಿಲ್ಲ ಎಂದು ದೂರಿದರು.

ಆದರೆ, ಕಾಂಗ್ರೆಸ್ ಕಾರ್ಯಕರ್ತರ ಗೃಹ ಪ್ರವೇಶಕ್ಕೆ ಬರುವ ಸಮಯವಿದೆ. ಧರಣಿ ಸ್ಥಳಕ್ಕೆ ಬಂದು ಅಹವಾಲು ಸ್ವೀಕರಿಸುವ ಪ್ರಯತ್ನ ಮಾಡಲಿಲ್ಲ ಎಂದು ಗ್ರಾಮಸ್ಥರು, ಶಾಸಕರು ಗ್ರಾಮದ ಒಳಗೆ ಹೋಗುವ ರಸ್ತೆಯನ್ನು ಬಂದ್ ಮಾಡಿ ಕಪ್ಪು ಬಾವುಟ, ಒನಕೆ ಹಾಗೂ ದೊಣ್ಣೆಗಳನ್ನು ಹಿಡಿದು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ರೈತಪರ ಹೋರಾಟಗಾರ್ತಿ ಸುನಂದಾ ಜಯರಾಂ, ಶಾಸಕರ ಕಾರು ಗ್ರಾಮ ಪ್ರವೇಶ ಮಾಡಲು ರಸ್ತೆಗೆ ತಡೆಯೊಡ್ಡಿ ಧರಣಿ ನಡೆಸುತ್ತಿದ್ದೇವೆ ಎಂದರು.

ನಂತರ ಸ್ಥಳದಲ್ಲಿದ್ದ ಪೊಲೀಸರು ಗ್ರಾಮದಲ್ಲಿನ ಪರಿಸ್ಥಿತಿ ಗಂಭೀರ ಸ್ವರೂಪರ ಪಡೆದುಕೊಳ್ಳುತ್ತಿರುವ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದ ನಂತರ ಗ್ರಾಮ ಭೇಟಿ ರದ್ದು ಪಡಿಸಿದರು. ಕಬ್ಬಿನ ಬೆಲೆ ಹೆಚ್ಚಳ ಮಾಡದಿದ್ದರೆ ದೊಡ್ಡ ಮಟ್ಟದ ಹೋರಾಟ: ಕ್ಯಾತನಹಳ್ಳಿ ಪಿ.ರವೀಂದ್ರಪಾಂಡವಪುರ: ರಸಗೊಬ್ಬರ ದರ ಮೂರು ಬಾರಿ ಹೆಚ್ಚಳವಾದರೂ ಕಬ್ಬಿನ ಬೆಳೆಗೆ ಬೆಲೆ ಹೆಚ್ಚಳ ಮಾಡುವ ಯಾವುದೇ ನಿರ್ಧಾರ ಕೈಗೊಳ್ಳದಿರುವ ಸರ್ಕಾರದ ವಿರುದ್ಧ ಜೆಡಿಎಸ್‌‍ ರೈತ ಮುಖಂಡ ಕ್ಯಾತನಹಳ್ಳಿ ಪಿ.ರವೀಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಕಬ್ಬಿನ ಉಪ ಉತ್ಪನ್ನಗಳಿಂದಲೇ ರೈತರಿಗೆ ನೀಡುವ ಹಣ ವಸೂಲಿಯಾಗುತ್ತಿದ್ದರೂ ಕಾರ್ಖಾನೆ ಮಾಲೀಕರ ಹಿತಾಸಕ್ತಿಗೆ ಧಕ್ಕೆ ತರಲಾಗದ ಸರ್ಕಾರ ಇಕ್ಕಟ್ಟಿನಲ್ಲಿದೆ. ಇದರಿಂದ ಬೆಳೆಗಳಿಗೆ ನೀರಿನ ಅಭಾವ, ಕೀಟ ನಾಶಕ, ಕಳೆನಾಶಕಗಳ ಬೆಲೆ ಹೆಚ್ಚಳದ ಮಧ್ಯೆಯೂ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ನ್ಯಾಯಯುತ ದರ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಲವಾರು ವೈರುಧ್ಯಗಳ ನಡುವೆ ಬೆಳೆದ ಬೆಳೆಗಳಿಗೆ ದೊರೆತ ಬೆಲೆಗಳಲ್ಲೇ ಸರ್ಕಾರವೇ ರೈತರಿಗೆ ನೀಡಬೇಕಾದ ಹಣವನ್ನು ಬಾಕಿ ಉಳಿಸಿಕೊಂಡಿರುವುದರಿಂದ ಸರ್ಕಾರವೇ ರೈತನಿಗೆ ಸಾಲಗಾರನಾಗಿದ್ದಾನೆ. ಇದರಿಂದ ಸಂಕಷ್ಟ ಎದುರಾಗಿದೆ. ಕೂಡಲೇ ಸರ್ಕಾರ ರೈತರಿಗೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ರಸಗೊಬ್ಬರದ ಬೆಲೆ ಒಂದೇ ವರ್ಷದಲ್ಲಿ ಮೂರು ಬಾರಿ ಹೆಚ್ಚಳವಾಗಿದೆ. ಇದರಿಂದ ಕಬ್ಬು ಬೆಳೆಯುವುದೇ ಕಷ್ಟವಾಗಿದೆ. ಕೂಡಲೇ ಟನ್‌ ಕಬ್ಬಿಗೆ ಕನಿಷ್ಠ ಬೆಲೆಯನ್ನು 5ಸಾವಿರ ರು ನಿಗದಿ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದ ರೈತರು ಶೀಘ್ರದಲ್ಲೇ ದೊಡ್ಡಮಟ್ಟದ ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.