ಸಾರಾಂಶ
ಪಟ್ಟಣದ ದುರ್ಗಿಗುಡಿ ದಕ್ಷಿಣ ಭಾಗದಲ್ಲಿರುವ ತುಂಗಾ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಮಾರ್ಚ್ 2ರಂದು ಚುನಾವಣೆ ನಡೆಯಿತು. ಒಟ್ಟು 13 ಸ್ಥಾನಗಳಿದ್ದು, 3 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರಿಂದ ಉಳಿದ 10 ಸ್ಥಾನಗಳಿಗೆ ಚುನಾವಣೆ ನಡೆಯಿತು.
ಹೊನ್ನಾಳಿ: ಪಟ್ಟಣದ ದುರ್ಗಿಗುಡಿ ದಕ್ಷಿಣ ಭಾಗದಲ್ಲಿರುವ ತುಂಗಾ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಮಾರ್ಚ್ 2ರಂದು ಚುನಾವಣೆ ನಡೆಯಿತು. ಒಟ್ಟು 13 ಸ್ಥಾನಗಳಿದ್ದು, 3 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರಿಂದ ಉಳಿದ 10 ಸ್ಥಾನಗಳಿಗೆ ಚುನಾವಣೆ ನಡೆಯಿತು.
ಸಾಮಾನ್ಯ ಕ್ಷೇತ್ರ (7), ಮಹಿಳಾ ಮೀಸಲು (2), ಹಿಂದುಳಿದ ಪ್ರ ವರ್ಗ- ಅ (1), ಹಿಂದುಳಿದ ಪ್ರ ವರ್ಗ- ಬ (1) ಹಾಗೂ ಪರಿಶಿಷ್ಟ ಜಾತಿ (1), ಪರಿಶಿಷ್ಟ ಪಂಗಡಕ್ಕೆ (1) ಮೀಸಲು ಸ್ಥಾನ ನಿಗದಿಯಾಗಿತ್ತು.ವಿಜೇತ ಅಭ್ಯರ್ಥಿಗಳು:
ಎಚ್.ಎ. ಅಶೋಕ್ (452 ಮತ), ಜಿ.ಎನ್. ಸುರೇಶ್ (442), ಎಸ್. ಶ್ರೀನಿವಾಸ್ (374), ಕೆ.ಎಂ. ರಘು (359), ಎನ್. ರಾಜೇಂದ್ರಪ್ಪ (336), ಬಿ.ವಿ. ಚಂದ್ರಪ್ಪ( 326), ಬಿ.ಪಿ. ಅಶೋಕ್ ( 407), ದಿಡಗೂರು ಬಿ.ಎಚ್. ಗೋಪಾಲಕೃಷ್ಣ (391), ಡಿ.ಸಿ. ಬಸವರಾಜಪ್ಪ ( 372), ಎ.ಕೆ. ತಿಮ್ಮೇಶ್ 302 ಮತ ಪಡೆದು ವಿಜೇತರಾದರು.ಅವಿರೋಧ ಆಯ್ಕೆ:
ಹಿಂದುಳಿದ ಪ್ರವರ್ಗ ಅ ಮೀಸಲು ಕ್ಷೇತ್ರದಿಂದ ಎಚ್.ಬಿ. ಪುನೀತ್, ಮಹಿಳಾ ಮೀಸಲು ಕ್ಷೇತ್ರದಿಂದ ಜಯಮ್ಮ ಬಸವನಗೌಡ ಮತ್ತು ಕೆ.ವಿ.ಚನ್ನಮ್ಮ ವಿರೂಪಾಕ್ಷಪ್ಪ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್ ತಿಳಿಸಿದರು.- - - (** ಈ ಪೋಟೋ ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)-3ಎಚ್.ಎಲ್.ಐ1.ಜೆಪಿಜಿ:
ಹೊನ್ನಾಳಿ ಪಟ್ಟಣದ ದುರ್ಗಿಗುಡಿ ದಕ್ಷಿಣ ಭಾಗದಲ್ಲಿರುವ ತುಂಗಾ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಚುನಾವಣೆ ನಡೆದಿದ್ದು, ವಿಜೇತ ಅಭ್ಯರ್ಥಿಗಳಿಗೆ ಮಾಲೆ ಹಾಕಿ, ಅಭಿನಂದಿಸಲಾಯಿತು.