ಸಾರಾಂಶ
ಇದು ಮಹತ್ತರವಾದ ಲೋಕಸಭಾ ಚುನಾವಣೆ. ಈ ಚುನಾವಣೆಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ವತಿಯಿಂದ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ನಾನು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಕಣದಿಂದ ನಿವೃತ್ತಿ ಹೊಂದಿರುವುದಾಗಿ ಪ್ರಸನ್ನಕುಮಾರ್ ಬಿ. ಹೇಳಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಇದು ಮಹತ್ತರವಾದ ಲೋಕಸಭಾ ಚುನಾವಣೆ. ಈ ಚುನಾವಣೆಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ವತಿಯಿಂದ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ನಾನು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಕಣದಿಂದ ನಿವೃತ್ತಿ ಹೊಂದಿರುವುದಾಗಿ ಪ್ರಸನ್ನಕುಮಾರ್ ಬಿ. ಹೇಳಿದರು.ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬರೀ ಸುಳ್ಳುಗಳನ್ನು ಹೇಳುತ್ತಾ ದಲಿತರಿಗೆ, ಶೋಷಿತ ವರ್ಗಕ್ಕೆ ಮೋಸ ಮಾಡಿದ್ದಾರೆಂದು ಆರೋಪಿಸಿದರು.ಎಸ್ಸಿ, ಎಸ್ಟಿ ಮಕ್ಕಳ ಉನ್ನತ ವಿದ್ಯಾಭ್ಯಾಸದ ಅನುದಾನದಲ್ಲಿ ಕಡಿತ, ಸ್ಕಾಲರ್ ಶಿಪ್‌ನಲ್ಲೂ ಕಡಿತ ಮಾಡಿದ್ದಾರೆ. ಮತ ಪಡೆಯುವುದಕ್ಕಾಗಿಯೇ ಮಾತ್ರ ಘೋಷಣೆಗಳನ್ನು ಮಾಡಿ, ನಂತರ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದರು.ನಾನು ಪ್ರಚಾರಕ್ಕೆ ಹೋದಡೆಯೆಲ್ಲಾ ಕಾಂಗ್ರೆಸ್‌ಗೆ ಒಲವು ವ್ಯಕ್ತವಾಗುತ್ತಿದೆ. ನನ್ನ ಹಿತೈಷಿಗಳು, ಸ್ನೇಹಿತರು ಇಲ್ಲಿ ಜಾತಿ, ಸಮುದಾಯದ ರಾಜಕೀಯ ನಡೆಯುತ್ತಿದೆ. ನಿನ್ನ ಭವಿಷ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸುವಂತೆ ಹೇಳಿದರು, ಆದ್ದರಿಂದ ನಾನು ಈಗ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದೇನೆ ಮುಂದೆ ಕಾಂಗ್ರೇಸ್ ಪಕ್ಷ ಸೇರುವುದಾಗಿ ಹೇಳಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳ ಮೂಲಕ ಎಲ್ಲಾ ಜನರಿಗೂ ಒಳ್ಳೆಯದನ್ನು ಮಾಡುತ್ತಿದ್ದು, ಕ್ಷೇತ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ರನ್ನು ಬೆಂಬಲಿಸುತ್ತಿದ್ದೇನೆ ಸುನೀಲ್ ಬೋಸ್‌ರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕೆಂದರು. ಪತ್ರಿಕಾಗೋಷ್ಠಿಯಲ್ಲಿ ಛಲವಾದಿ ಮಹಾಸಭಾ ದಾವಣಗೆರೆಯ ರುದ್ರಮಣಿ, ಶೇಖರಪ್ಪ, ಜಯಪ್ಪ, ಕೊಟ್ರಿ ಬಸಪ್ಪ, ರಾಘವೇಂದ್ರ ಕೊಂಡಾಜಿ, ಸೋಮಶೇಖರ್ ಇದ್ದರು.