ವಿವಿಧ ಬೇಡಿಕೆ ಈಡೇರಿಕೆಗೆ ನಿವೃತ್ತ ಸರ್ಕಾರಿ ನೌಕರರ ಪ್ರತಿಭಟನೆ

| Published : Oct 02 2024, 01:05 AM IST

ವಿವಿಧ ಬೇಡಿಕೆ ಈಡೇರಿಕೆಗೆ ನಿವೃತ್ತ ಸರ್ಕಾರಿ ನೌಕರರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಿವೃತ್ತ ಸರ್ಕಾರಿ ನೌಕರರಿಗೆ ಉಪ ಧನಗಳಾದ ಡಿಸಿಆರ್‌ಜಿ, ಕಮ್ಯೂಟೇಷನ್ ಹಾಗೂ ಗಳಿಕೆ ರಜೆ ನಗದೀಕರಣ ಮೊತ್ತವನ್ನು ನೀಡುವಲ್ಲಿ ಆರ್ಥಿಕ ನಷ್ಟ ಉಂಟಾಗಿರುವುದರಿಂದ ಈ ಸೌಲಭ್ಯಗಳನ್ನು ಏಳನೇ ವೇತನಾ ಆಯೋಗದ ಲೆಕ್ಕಕಾಚಾರದಲ್ಲಿ ನೀಡಿ ಆದೇಶ ಹೊರಡಿಸುವಂತೆ ಒತ್ತಾಯ.

ಕನ್ನಡಪ್ರಭ ವಾರ್ತೆ ಮಂಡ್ಯ

ನಿವೃತ್ತ ಸರ್ಕಾರಿ ನೌಕರರಿಗೆ ಉಪ ಧನಗಳಾದ ಡಿಸಿಆರ್‌ಜಿ, ಕಮ್ಯೂಟೇಷನ್ ಹಾಗೂ ಗಳಿಕೆ ರಜೆ ನಗದೀಕರಣ ಮೊತ್ತವನ್ನು ನೀಡುವಲ್ಲಿ ಆರ್ಥಿಕ ನಷ್ಟ ಉಂಟಾಗಿರುವುದರಿಂದ ಈ ಸೌಲಭ್ಯಗಳನ್ನು ಏಳನೇ ವೇತನಾ ಆಯೋಗದ ಲೆಕ್ಕಕಾಚಾರದಲ್ಲಿ ನೀಡಿ ಆದೇಶ ಹೊರಡಿಸುವಂತೆ ಒತ್ತಾಯಿಸಿ ನಿವೃತ್ತ ನೌಕರರ ವೇದಿಕೆಯವರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಒಂದು ದಿನದ ಶಾಂತಿಯುತ ಧರಣಿ ನಡೆಸಿದರು. ೧.೭.೨೦೨೨ರಿಂದ ೩೧.೭.೨೦೨೪ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಈ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನಾರಾಯಣಸ್ವಾಮಿ, ಟಿ.ರವಿಶಂಕರ್, ಸ್ವಾಮಿಗೌಡ, ಚನ್ನರಾಜು, ನಾಗಮಲ್ಲೇಶ್, ಎಸ್.ಮಹದೇವ್ ಇತರರಿದ್ದರು.

ರಂಗೋಲಿ ಮತ್ತು ಮೆಹಂದಿ ಸ್ಪರ್ಧೆಗೆ ನೋಂದಣಿ

ಶ್ರೀರಂಗಪಟ್ಟಣ: ದಸರಾ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಂಗೋಲಿ ಸ್ಪರ್ಧೆ (ಬಾಲ್ಯವಿವಾಹ ನಿಷೇಧ ಮತ್ತು ದಸರಾಕ್ಕೆ ಸಂಬಧಿಧಿಸಿದ ರಂಗೋಲಿಗಳು ) ಮತ್ತು ಮೆಹಂದಿ ಸ್ಪರ್ಧೆಯನ್ನು ಅ.5 ರಂದು ಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು ಬೆಳಗ್ಗೆ 8 ಗಂಟೆಯೊಳಗೆ ಹೆಸರನ್ನು ನೊಂದಹಿಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ರಂಗೋಲಿ ಮತ್ತು ಮೆಹಂದಿ ಸ್ಪರ್ಧೆಗೆ ಬೇಕಾಗುವ ಸಾಮಗ್ರಿಗಳನ್ನು ತರತಕ್ಕದು.

ಹೆಚ್ಚಿನ ಮಾಹಿತಿಗಾಗಿ ದೂ-08236-295349 ಅನ್ನು ತಾಲೂಕು ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದುಹೊಲಿಗೆ ಮತ್ತು ವಿಡಿಯೋಗ್ರಾಫಿ ತರಬೇತಿ ಶಿಬಿರ

ಮಂಡ್ಯ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯುವಜನರನ್ನು ಸ್ವಾವಲಂಬಿಯಾಗಲು ಉತ್ತೇಜಿಸುವ ದೃಷ್ಟಿಯಿಂದ ಹೊಲಿಗೆ ಮತ್ತು ವಿಡಿಯೋಗ್ರಾಫಿ ತರಬೇತಿ ಶಿಬಿರವನ್ನು ಬೆಂಗಳೂರು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಎಸ್ಸೆಸ್ಸೆಲ್ಸಿ(ಪಾಸ್ /ಫೇಲ್ ) ವಿದ್ಯಾರ್ಹತೆ ಹೊಂದಿದವರು ಹೊಲಿಗೆ ತರಬೇತಿ ಶಿಬಿರವನ್ನು ನವೆಂಬರ್ 7 ರಿಂದ 26 ರ ವರೆಗೆ ಮತ್ತು ದ್ವಿತೀಯ ಪಿ.ಯು.ಸಿ(ಪಾಸ್/ಫೇಲ್) ವಿದ್ಯಾರ್ಹತೆಯನ್ನು ಹೊಂದಿದವರು ನವೆಂಬರ್ 15 ರಿಂದ 26ರ ವರಗೆ ವಿಡಿಯೋಗ್ರಾಫಿ ತರಬೇತಿ ಶಿಬಿರವನ್ನು ಕನಿಷ್ಠ 18 ರಿಂದ 40 ವರ್ಷ ವಯೋಮಿತಿಯವರು ಭಾಗವಹಿಸಬಹುದು.

ನವೆಂಬರ್ 4 ರಂದು ಅರ್ಜಿ ಸಲ್ಲಿಸಲು ಕೊನೆದಿನ. ಆಸಕ್ತ ಪರಿಶಿಷ್ಟ ಜಾತಿಯ ಯುವಕ/ಯುವತಿಯರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೀಡುವ ಅರ್ಜಿಯನ್ನು ಪಡೆದು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಕಚೇರಿಗೆ ಸಲ್ಲಿಸತಕ್ಕದ್ದು ಎಂದು ಮಂಡ್ಯ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಕೈಮಗ್ಗ ನೇಕಾರರಿಂದ ಅರ್ಜಿ ಅಹ್ವಾನ

ಮಂಡ್ಯ: ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ 2024-25 ಸಾಲಿನ ನೇಕಾರ್ ಸಮ್ಮಾನ್ ಯೋಜನೆಯಡಿ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷಿಕ 5000 ಸಾವಿರಗಳ ಆರ್ಥಿಕ ನೆರವನ್ನು ನೀಡುವ ಸಲುವಾಗಿ ಅರ್ಹ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರು ಸೇವಾ ಸಿಂಧು ಪೋರ್ಟಲ್ ನಲ್ಲಿ ಮಾಹಿತಿಯನ್ನು ನೊಂದಯಿಸಿ ಕೊಳ್ಳಲು ಅವಕಾಶವಿದೆ. ಅ.10 ರೊಳಗೆ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಕಚೇರಿಗೆ ಅರ್ಜಿ ಸಲ್ಲಿಸಲು ಸೂಚಿಸಿದೆ.

ಹೆಚ್ಚಿನ ಮಾಹಿತಿಗಾಗಿ ಮೊ-9972405347 ಅನ್ನು ಸಂಪರ್ಕಿಸಬಹುದು ಎಂದು ಜಿಪಂ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.