ಸಾರಾಂಶ
ವೃತ್ತಿ ಜತೆಗೆ ಪ್ರವೃತ್ತಿ ಬೆಳೆಸಿಕೊಂಡರೆ ನಿವೃತ್ತಿ ಜೀವನ ಅರ್ಥಪೂರ್ಣವಾಗಿ ಕಳೆಯಬಹುದು ಎಂದು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹಿಬೂಬಸಾಬ್ ಚನ್ನೂರ ಹೇಳಿದರು.
ಕನ್ನಡಪ್ರಭ ವಾರ್ತೆ ಜೇವರ್ಗಿ
ವೃತ್ತಿ ಜತೆಗೆ ಪ್ರವೃತ್ತಿ ಬೆಳೆಸಿಕೊಂಡರೆ ನಿವೃತ್ತಿ ಜೀವನ ಅರ್ಥಪೂರ್ಣವಾಗಿ ಕಳೆಯಬಹುದು ಎಂದು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹಿಬೂಬಸಾಬ್ ಚನ್ನೂರ ಹೇಳಿದರು.ಪಟ್ಟಣದ ಸಜ್ಜನ್ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಜೋಪಡಪಟ್ಟಿ. ಮುಖ್ಯ ಶಿಕ್ಷಕಿ ಶಹನಾಜ್ ಬೇಗಂ ಸೇವಾ ವಯೋನಿವೃತ್ತಿ ಕಾರ್‍ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಿವೃತ್ತಿ ಜೀವನವನ್ನು ಉತ್ತಮವಾಗಿ ಕಳೆಯಲು ಕೆಲವು ಸಿದ್ದತೆ ಮಾಡಿಕೊಳ್ಳಬೇಕಿದೆ. ಇದರಲ್ಲಿ ರೂಡಿಸಿಕೊಂಡವರು ನಿವೃತ್ತಿ ಬಳಿಕ ಪ್ರವೃತ್ತಿಯೇ ವೃತ್ತಿಯಾಗಲಿದೆ. ಇದರಿಂದ ನಿವೃತ್ತಿ ಜೀವನ ಉತ್ತಮವಾಗಿ ಕಳೆಯಲು ಸಾಧ್ಯ. ಶಹನಾಜ್ ಬೇಗಂ ಅವರು ಸುಮಾರು ಮೂರು ದಶಕಗಳ ಕಾಲ ಜೋಪಡಪಟ್ಟಿ ಬಡಾವಣೆಯ ಉರ್ದು ಶಾಲೆಯಲ್ಲಿ ಸೇವೆ ಸಲ್ಲಿಸಿದ್ದು, ಜತೆಗೆ ಸಾರ್ವಜನಿಕರಲ್ಲಿ ಉತ್ತಮ ಭಾಂದವ್ಯ ಹೊಂದಿದರು ಎಂದರು.
ಕಾರ‍್ಯಕ್ರಮದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಟಿ. ಬಿರಾದಾರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುಡುಲಾಲ್ ಶೇಖ್, ಗುರುಶಾಂತ ಚಿಂಚೋಳಿ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹಿಬೂಬಸಾಬ್ ಚನ್ನೂರ, ಅಬ್ದುಲ್ ರಹಿಮಾನ್ ಪಟೇಲ್, ಆಥೀಕ್‌ಸೇಟ್ ಜರಮ್, ದಾವುದ್ ಇನಾಮದಾರ, ಬಂದೇನವಾಜ ಮಂದೇವಾಲ, ಹುಸೇನ್ ಮಿಠಾಯಿವಾಲೆ, ಬಾವಾಸಾಬ ಅಡತ್, ಬದ್ರುನೀಸಾ ಬೇಗಂ, ಯಾಸ್ಮೀನ್ ಫಾಥೀಮಾ, ರೇಖಾ ಸೇರಿದಂತೆ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.