ತಾಲೂಕಿನ ಮಾಯಸಂದ್ರದ ಕಂದಾಯ ನಿರೀಕ್ಷಕ ಸಾರ್ವಜನಿಕರನ್ನು ಗುಲಾಮರಂತೆ ಕಾಣುತ್ತಿದ್ದಾರೆಂದು ತಾಲೂಕು ಬಿಜೆಪಿ ಅಧ್ಯಕ್ಷ ಜಿ.ವಿ.ಪ್ರಕಾಶ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಮಾಯಸಂದ್ರದ ಕಂದಾಯ ನಿರೀಕ್ಷಕ ಸಾರ್ವಜನಿಕರನ್ನು ಗುಲಾಮರಂತೆ ಕಾಣುತ್ತಿದ್ದಾರೆಂದು ತಾಲೂಕು ಬಿಜೆಪಿ ಅಧ್ಯಕ್ಷ ಜಿ.ವಿ.ಪ್ರಕಾಶ್ ಆರೋಪಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ನಾನು ಮುಖ್ಯಮಂತ್ರಿಯಲ್ಲ. ಪ್ರಜಾ ಸೇವಕ ಅಂತ ಕರೆಯಿರಿ ಎಂದು ಹೇಳಿದ್ದಾರೆ. ಆದರೆ ಈ ಮಾಯಸಂದ್ರ ಹೋಬಳಿಯ ರಾಜಸ್ವ ನಿರೀಕ್ಷಕರು ಸಾರ್ವಜನಿಕರನ್ನು ಗುಲಾಮರಂತೆ ಕಾಣುತ್ತಾರೆ. ಏಕವಚನದಲ್ಲಿ ಮಾತನಾಡಿಸುತ್ತಾರೆ. ಇಂಗ್ಲೀಷ್ ನಲ್ಲಿ ಬೈತಾರೆ ಎಂದು ದೂರಿದರು. ಈ ಕಂದಾಯ ನಿರೀಕ್ಷರು ಕೇಂದ್ರ ಸ್ಥಾನದಲ್ಲಿ ಇರುವುದೇ ಇಲ್ಲ. ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ. ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಹಾಕಲು ರಾಜಸ್ವ ನಿರೀಕ್ಷರ ವರದಿ ಅವಶ್ಯಕ. ರೈತರನ್ನು ಅವಮಾನಿಸುತ್ತಾರೆ. ಸುಲಭವಾಗಿ ಮಾಡಬೇಕಾದ ಕೆಲಸ ಕಾರ್ಯಗಳಿಗೆ ಹಲವಾರು ಸಾರಿ ಕಚೇರಿಗೆ ಅಲೆಸುತ್ತಾರೆ. ಎಲ್ಲರಿಗೂ ಉಢಾಫೆಯ ಉತ್ತರ ನೀಡುತ್ತಾರೆಂದು ದೂರಿದರು.

ಈ ವೇಳೆ ತಾಲೂಕು ಬಿಜೆಪಿ ಉಪಾಧ್ಯಕ್ಷ ನವೀನ್ ಬಾಬು, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ತಾಳಕೆರೆ ಶ್ರೀಕಾಂತ್, ತಾಲೂಕು ರೈತ ಮೋರ್ಚಾ ಉಪಾಧ್ಯಕ್ಷ ಅರಳೀಕೆರೆ ಸತೀಶ್, ಜಿಲ್ಲಾ ಸಮಿತಿ ವಿಶೇಷ ಆಹ್ವಾನಿತ ಸದಸ್ಯ ಹಾಲೇಗೌಡ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ತೀರ್ಥಕುಮಾರ್, ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ನಗರ ಪ್ರಧಾನ ಕಾರ್ಯದರ್ಶಿ ದಯಾನಂದ್, ತಾಳಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಟರಾಜ್ ಉಪಸ್ಥಿತರಿದ್ದರು.