ಸಾರಾಂಶ
ದೊಡ್ಡಕಾಡನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರಂಗರಾಜು ಎನ್.ಆರ್. ಅವರ ಪುತ್ರ ಮಂಜು ಮಿಲನ್ ನಿರ್ದೇಶಿಸಿ ನಾಯಕ ನಟನಾಗಿ ನಟಿಸಿರುವ "ರಿದಂ " ಚಲನಚಿತ್ರ ಮೇ ೧5ರ ಗುರುವಾರ ತೆರೆ ಕಾಣುತ್ತಿದ್ದು, ಹೆಚ್ಚಿನ ಉತ್ತೇಜನ ನೀಡುವಂತೆ ರಿದಂ ಚಿತ್ರ ತಂಡ ವಿನಂತಿಸಿದೆ. ನಾಯಕಿಯಾಗಿ ಮೇಘಶ್ರೀ ನಟಿಸಿರುವ ಚಿತ್ರದಲ್ಲಿ ಸಮನ್, ವಿನಯ ಪ್ರಕಾಶ್, ಭವ್ಯ, ಶಿವರಾಂ ಮುಖ್ಯ ಭೂವಿಕೆಯಲ್ಲಿದ್ದಾರೆ. ಸಂಗೀತವನ್ನು ಎ.ಟಿ.ರವೀಶ್ ನೀಡಿದ್ದು, ಸಾಹಸವನ್ನು ಅಲ್ಟಿಮೇಟ್ ಶಿವು, ಫಯಾಜ್ ಖಾನ್ ಹಾಗೂ ಗಣೇಶ್ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕಿನ ದೊಡ್ಡಕಾಡನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರಂಗರಾಜು ಎನ್.ಆರ್. ಅವರ ಪುತ್ರ ಮಂಜು ಮಿಲನ್ ನಿರ್ದೇಶಿಸಿ ನಾಯಕ ನಟನಾಗಿ ನಟಿಸಿರುವ "ರಿದಂ " ಚಲನಚಿತ್ರ ಮೇ ೧5ರ ಗುರುವಾರ ತೆರೆ ಕಾಣುತ್ತಿದ್ದು, ಹೆಚ್ಚಿನ ಉತ್ತೇಜನ ನೀಡುವಂತೆ ರಿದಂ ಚಿತ್ರ ತಂಡ ವಿನಂತಿಸಿದೆ.ರಿದಂ ಚಲನಚಿತ್ರದ ಕಥೆ, ಚಿತ್ರಕಥೆ, ಸಾಹಿತ್ಯ, ಸಂಕಲನ ಮತ್ತು ನಿರ್ದೇಶನ ಮಾಡಿರುವ ಮಂಜು ಮಿಲನ್ ಅವರೇ ನಟನಾಗಿ ನಟಿಸಿದ್ದು, ನಾಯಕಿಯಾಗಿ ಮೇಘಶ್ರೀ ನಟಿಸಿರುವ ಚಿತ್ರದಲ್ಲಿ ಸಮನ್, ವಿನಯ ಪ್ರಕಾಶ್, ಭವ್ಯ, ಶಿವರಾಂ ಮುಖ್ಯ ಭೂವಿಕೆಯಲ್ಲಿದ್ದಾರೆ. ಸಂಗೀತವನ್ನು ಎ.ಟಿ.ರವೀಶ್ ನೀಡಿದ್ದು, ಸಾಹಸವನ್ನು ಅಲ್ಟಿಮೇಟ್ ಶಿವು, ಫಯಾಜ್ ಖಾನ್ ಹಾಗೂ ಗಣೇಶ್ ನೀಡಿದ್ದಾರೆ.
ಯುವ ಉತ್ಸಾಹಿ ನಿರ್ದೇಶಕ ಹಾಗೂ ನಾಯಕ ನಟ ಮಂಜು ಮಿಲನ್ ಅವರು ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಹೊಸ ಲವ್ ಸ್ಟೋರಿಯ ಶಕೆ ಪ್ರಾರಂಭಿಸಿದ್ದು, ಹೊಸ ಪ್ರಯೋಗ ಉತ್ತೇಜಿಸುವ ಜತೆಗೆ ಚಲನಚಿತ್ರದ ಯಶಸ್ಸಿಗೆ ಸಹಕರಿಸುವಂತೆ ರಿದಂ ಚಿತ್ರ ತಂಡದ ಜತೆಗೆ ಮಂಜು ಮಿಲನ್ ವಿನಂತಿಸಿದ್ದಾರೆ.