ಬಕ್ಕಚೌಡಿ ಗ್ರಾಮದಲ್ಲಿ ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ

| Published : Feb 16 2024, 01:49 AM IST

ಸಾರಾಂಶ

ಬೀದರ್ ತಾಲೂಕಿನ ಬಕಚೌಡಿ ಗ್ರಾಮದಲ್ಲಿರುವ ನಕಲಿ ಕ್ಲಿನಿಕ್‌ಗಳ ಮೇಲೆ ತಹಸೀಲ್ದಾರ್ ಹಾಗೂ ಆರೋಗ್ಯ ಅಧಿಕಾರಿಗಳ ತಂಡ ದಾಳಿ ನಡೆಸಿ ಸೀಜ್ ಮಾಡಲಾಯಿತು.

ಬೀದರ್‌: ಬೀದರ್‌ ತಹಸೀಲ್ದಾರ್‌ ಡಿ.ಜೆ.ಮಹತ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಸಂಗಾರೆಡ್ಡಿ ಮತ್ತು ತಂಡದಿಂದ ಬೀದರ ತಾಲೂಕಿನ ಬಕ್ಕಚೌಡಿ ಗ್ರಾಮದ ಯಾವುದೇ ವೈದ್ಯಕೀಯ ಪದವಿ ಪಡೆಯದೆ ಅನಧಿಕೃತವಾಗಿ ನಡೆಸುತ್ತಿದ್ದ ಎರಡು ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ಸೀಜ್ ಮಾಡಲಾಯಿತು.

ಸೀಜ್ ಮಾಡಿರುವ ಔಷಧಿಗಳನ್ನು ಪರಿಶೀಲಿಸಿದಾಗ ರೋಗಿಗಳಿಗೆ ಹೈಡೋಸ್ ಹಾಗೂ ಸ್ಟೇರಾಯಿಡ್ ನೀಡುತ್ತಿರುವುದು ಕಂಡುಬಂದಿರುತ್ತದೆ. ಇದು ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಗೂ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಸೇರಿದ ಗ್ರಾಮಸ್ಥರಿಗೆ ತಾಲೂಕು ಆರೋಗ್ಯ ಅಧಿಕಾರಿ ಸಂಗಾರೆಡ್ಡಿ ತಿಳಿ ಹೇಳಿದರು.

ಈ ಸಂದರ್ಭದಲ್ಲಿ ಆಯುಷ್ ವೈದ್ಯಾಧಿಕಾರಿ ಶಿವಕುಮಾರ ನೇಳಗೆ, ಕೆಪಿಎಂಇ ವಿಷಯ ನಿರ್ವಾಹಕ ಮಹೇಶ ರೆಡ್ಡಿ, ಪ್ರವೀಣ ಹಾಗೂ ಪೊಲೀಸ್ ಸಿಬ್ಬಂದಿ ಸುಭಾಷ, ಅನೀಲ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಯಾಸಿನ, ನಂದಕುಮಾರ, ಶೆಷಾರಾವ್, ರಾಜಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.