ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ವಾಹನ ಸವಾರರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸಿದರೆ ಅಪಘಾತ ತಡೆಯಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಹೇಳಿದರು.ಜಿಲ್ಲಾಡಳಿತ, ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ, ಪ್ರಾದೇಶಿಕ ಸಾರಿಗೆ ಇಲಾಖೆ, ಪೋಲಿಸ್ ಇಲಾಖೆ, ಕೆಕೆಆರ್‌ಟಿಸಿ, ಲೋಕೋಪಯೋಗಿ ಇಲಾಖೆ, ಜೆಸ್ಕಾಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಪ್ರಾದೇಶಿಕ ಕಚೇರಿಯ ಆವರಣದಲ್ಲಿ ರಸ್ತೆ ಸುರಕ್ಷತೆ ಮತ್ತು ಹೆಲ್ಮೆಟ್ ಕಡ್ಡಾಯ ಕುರಿತು ವಾಹನ ಚಾಲಕರಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸೇಫ್ಟಿ ಡ್ರೈವ್- ಬೈಕ್ ಜಾಥಾ, ತ್ರೈಮಾಸಿಕ ತೆರಿಗೆ ಬಾಕಿದಾರರಿಗೆ ತೆರಿಗೆ ಕಟ್ಟುವ ಅರಿವು ಕಾರ್ಯಕ್ರಮಕ್ಕೆ ಪಾರಿವಾಳ ಹಾರಿ ಬಿಡುವ ಮೂಲಕ ಹಾಗೂ ಬೈಕ್ ಜಾಥಾಗೆ ಹಸಿರು ನಿಶಾನೆ ತೋರಿ ಮತ್ತು ಸೀಟ್ ಬೆಲ್ಟ್ ವಿತರಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಬೈಕ್ ಜಾಥಾದಲ್ಲಿ ಎಡಿಸಿ ಕೊಟ್ಟೆಪ್ಪಗೊಳ್ ಬೈಕ್ ಚಲಿಸಿ ಗಮನ ಸೆಳೆದರು. ನಗರದ ಪದವಿ ಕಾಲೇಜು, ಸುಭಾಷ್ ವೃತ್ತ, ಶಾಸ್ತ್ರಿ ವೃತ್ತ, ಹೊಸಳ್ಳಿ ಕ್ರಾಸ್, ಗಂಜ್ ವೃತ್ತ, ಮೈಲಾಪೂರ ಬೇಸ್, ಚಕ್ಕರ್ ಕಟ್ಟಾ, ಗಾಂಧಿ ವೃತ್ತ, ವೀರಶೈವ ಕಲ್ಯಾಣ ಮಂಟಪ, ಹಿರೇ ಅಗಸಿ, ಕನಕ ಸರ್ಕಲ್, ಕಾಡ್ಲೂರ್ ಪೆಟ್ರೋಲ್ ಬಂಕ್ ಸೇರಿದಂತೆ ನಗರದ ಮುಖ್ಯ ಬೀದಿಗಳಲ್ಲಿ ಜಾಥಾ ನಡೆಯಿತು.ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಿಲಿಂದಕುಮಾರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಅಭಿಮನ್ಯು ಕೆ.ಎಸ್.ಶ್ರೀಂಗೇರಿ, ಕೆಎಸ್ಆರ್‌ಟಿಸಿ ಜಿಲ್ಲಾ ಅಧಿಕಾರಿ ಸುನಿಲ್ ಕುಮಾರ ಚಂದರಗಿ, ಕೃಷಿ ಇಲಾಖೆ ಅಧಿಕ್ಷಕ ವೆಂಕಟೇಶ ಹಿರೇನೂರ, ಜೆಸ್ಕಾಂ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೀರನಗೌಡ ಸೇರಿದಂತೆ ಇತರರಿದ್ದರು.