ಎಲ್ಲ ಕಾಲದಲ್ಲೂ ಧರ್ಮ -ಅಧರ್ಮಗಳ ಸಂಘರ್ಷ ನಡೆದಿರುತ್ತದೆ. ಆದರೆ ಅಂತಿಮವಾಗಿ ಧರ್ಮವೇ ಗೆಲ್ಲುವುದು ಎಂದು ಕೊಡಿಗೇನಹಳ್ಳಿ ನಿಸರ್ಗ ಜ್ಞಾನ ಮಂದಿರದ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಟಿ.ಕಲ್ಪನಾ ನುಡಿದರು

ಕನ್ನಡಪ್ರಭ ವಾರ್ತೆ ಮಧುಗಿರಿ

ಎಲ್ಲ ಕಾಲದಲ್ಲೂ ಧರ್ಮ -ಅಧರ್ಮಗಳ ಸಂಘರ್ಷ ನಡೆದಿರುತ್ತದೆ. ಆದರೆ ಅಂತಿಮವಾಗಿ ಧರ್ಮವೇ ಗೆಲ್ಲುವುದು ಎಂದು ಕೊಡಿಗೇನಹಳ್ಳಿ ನಿಸರ್ಗ ಜ್ಞಾನ ಮಂದಿರದ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಟಿ.ಕಲ್ಪನಾ ನುಡಿದರು. ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ನಿಸರ್ಗ ಜ್ಞಾನ ಮಂದಿರದಲ್ಲಿ ನಡೆದ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳಿದ ಸಂದೇಶ ವ್ಯಕ್ತಿಗೆ ಮಾತ್ರವಲ್ಲ, ಅದು ಎಲ್ಲರಿಗೂ ಆಗಿದೆ.ಮಾತು ಕೃತಿಯಾದಾಗ ಮಾತ್ರ ಅಭ್ಯುದಯ ಸಾಧ್ಯ ಎಂದ ಅವರು, ಅಕ್ಷರ ಅಭ್ಯಾಸ ಓದು ಬರಹಕ್ಕೆ ಮಾತ್ರ ಸೀಮಿತವಲ್ಲ,ಇತಿಹಾಸ ತಿಳಿದು ಸಂಸ್ಕಾರ ರೂಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಶಿಕ್ಷಕರಾದ ಕಲ್ಪನಾ, ಮಿಜ್ಬಾ, ಮಲ್ಲಿಕಾ, ಸಾಧಿಕ್, ಗೀತಾ, ವಸಂತಲಕ್ಷ್ಮೀ, ಸುಶ್ಮಾ, ಶೈಲಜಾ, ತನ್ವೀಯಾ,ಕಾವ್ಯ ,ನೇತ್ರ, ಸಾಮರಸ್ಯ ವಿವಿದ ವೇಷ ಭೂಷಣಗಳನ್ನು ಧರಿಸಿದ್ದ ವಿದ್ಯಾರ್ಥಿಗಳು ಇದ್ದರು.