ಸಂಘಟನೆಯಿಂದ ಮಾತ್ರ ಹಕ್ಕು ಪಡೆಯಲು ಸಾಧ್ಯ: ಮಹೇಶ್‌ಕುಮಾರ್‌

| Published : Jul 17 2025, 12:38 AM IST

ಸಂಘಟನೆಯಿಂದ ಮಾತ್ರ ಹಕ್ಕು ಪಡೆಯಲು ಸಾಧ್ಯ: ಮಹೇಶ್‌ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ತಾಲೂಕಿನಲ್ಲಿ ಹೋಬಳಿ ಹಂತದಲ್ಲಿ ಅಲ್ಲದೇ ಗ್ರಾಮಗಳಲ್ಲೂ ಸಹ ಘಟಕಗಳನ್ನು ಮಾಡುವ ಮೂಲಕ ಜನರಿಗೆ ಮತ್ತಷ್ಟು ತಿಳಿವಳಿಕೆ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ತಾವೆಲ್ಲರೂ ಜಾಗೃತಿಯಾಗಬೇಕಿದೆ. ಅಲ್ಲದೇ ಹೋರಾಟದ ಮೂಲಕ ತಮಗೆ ಸಿಗಬೇಕಾದ ಹಕ್ಕು - ಕರ್ತವ್ಯಗಳನ್ನು ನಾವು ಪಾಲಿಸಬೇಕಿದೆ.

ಕನ್ನಡಪ್ರಭ ವಾರ್ತೆ, ಹನೂರುಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿರುವಂತೆ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಪ್ರತಿಯೊಬ್ಬರೂ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಕಾಯಂ ಸದಸ್ಯ ಮಹೇಶ್ ಕುಮಾರ್ ಹೇಳಿದರು.

ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ನಾಲಾ ರೋಡ್, ಸುಳ್ವಾಡಿ, ಪಾಲಿಮೇಡು ಗ್ರಾಮದಲ್ಲಿ ರೈತ ಮಹಿಳಾ ಗ್ರಾಮ ಘಟಕ ಉದ್ಘಾಟನೆ ಮಾಡಿ ಮಾತನಾಡಿ, ಪ್ರತಿ ತಾಲೂಕಿನಲ್ಲಿ ಹೋಬಳಿ ಹಂತದಲ್ಲಿ ಅಲ್ಲದೇ ಗ್ರಾಮಗಳಲ್ಲೂ ಸಹ ಘಟಕಗಳನ್ನು ಮಾಡುವ ಮೂಲಕ ಜನರಿಗೆ ಮತ್ತಷ್ಟು ತಿಳಿವಳಿಕೆ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ತಾವೆಲ್ಲರೂ ಜಾಗೃತಿಯಾಗಬೇಕಿದೆ. ಅಲ್ಲದೇ ಹೋರಾಟದ ಮೂಲಕ ತಮಗೆ ಸಿಗಬೇಕಾದ ಹಕ್ಕು - ಕರ್ತವ್ಯಗಳನ್ನು ನಾವು ಪಾಲಿಸಬೇಕಿದೆ. ಅಲ್ಲದೇ ರಾಮಾಪುರ ಹೋಬಳಿ ಉದ್ದಕ್ಕೂ ಸಹ ಮಹಿಳಾ ಘಟಕ ಉದ್ಘಾಟನೆ ಯಾಗಿರುವುದು ತುಂಬಾ ಒಳ್ಳೆಯ ಬೆಳವಣಿಗೆ ಎಂದರು.ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಗ್ರಾಮಗಳಲ್ಲಿ ರೈತರು ಸಂಘಟನೆ ಮಾಡುವುದರ ಜೊತೆಗೆ ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಗೆ ಒತ್ತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಇದು ನ್ಯಾಯಯುತ ಸಂಘಟನೆ ಆಗಬೇಕು. ನೊಂದವರ ಪರ ಆಗಿರಬೇಕು. ಇಂತಹ ಸಂಘಟನೆಗಳ ಮೂಲಕ ನಮ್ಮ ಹಕ್ಕು ತಮಗೆ ಬೇಕಾದಂತಹ ಸೌಲಭ್ಯ ಪಡೆದುಕೊಳ್ಳಬಹುದು. ಜೊತೆಗೆ ಮಹಿಳಾ ಗ್ರಾಮ ಘಟಕಗಳಿಂದ ನಮ್ಮ ನಮ್ಮ ಕೆಲವು ಗ್ರಾಮಗಳಲ್ಲಿ ಅನೇಕ ರೀತಿ ಅಕ್ರಮ ಮದ್ಯ ಮಾರಾಟ ಮಟ್ಟಹಾಕಿದ್ದೇವೆ. ಈ ಮೂಲಕ ತಮ್ಮ ಗ್ರಾಮಗಳಲ್ಲಿಯೂ ಅಕ್ರಮ ಮಧ್ಯ ಮಾರಾಟ ತಡೆಗಟ್ಟಲು ಪ್ರತಿಯೊಬ್ಬ ಮಹಿಳೆಯರು ಮುಂದಾಗಬೇಕು ಎಂದರು.ಸಂಘಕ್ಕೆ ಸೇರ್ಪಡೆ:

ಮಹಿಳಾ ರೈತ ಸಂಘಟನೆಗೆ ಪಾಲಿಮೇಡು, ಸುಳ್ವಾಡಿ ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರ್ಪಡೆಯಾದರು. ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.ಮೆರವಣಿಗೆ:

ಮಹಿಳಾ ಗ್ರಾಮ ಘಟಕದ ಉದ್ಘಾಟನೆ ವೇಳೆ ನಾಲ್ ರೋಡು ಗ್ರಾಮದಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ಪುರುಷರು ತಮಟೆ ವಾದ್ಯ ಸದ್ದಿಗೆ ಕುಣಿಯುತ್ತಾ, ರೈತ ಸಂಘಕ್ಕೆ ಜಯವಾಗಲಿ ಎಂಬ ಘೋಷಣೆ ಕೂಗಿದರು. ರಾಜ್ಯ ಘಟಕದ ಕಾಯಂ ಸದಸ್ಯ ಮಹೇಶ್ ಕುಮಾರ್, ಹೆಬ್ಬಸೂರು ಬಸಣ್ಣ, ಜಿಲ್ಲಾ ಕಾಯಂ ಸದಸ್ಯ ರವಿ ನಾಯ್ದು, ಜಿಲ್ಲಾ ಉಪಾಧ್ಯಕ್ಷ ಗೌಡೇ ಗೌಡ, ಲೋಕೇಶ್ ಗೌಡ, ಸಂಘಟನೆ ಕಾರ್ಯದರ್ಶಿ ಮಹದೇವ್ ಪ್ರಸಾದ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಪುಂಗುಡಿ, ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್, ಉಪಾಧ್ಯಕ್ಷ ಪಳನಿಸ್ವಾಮಿ, ಪಾಲಿಮೇಡು ಅಧ್ಯಕ್ಷ ಶಾಂತಿ, ಉಪಾಧ್ಯಕ್ಷರಾದ ಪ್ರಿಯದರ್ಶಿನಿ, ಕಾರ್ಯದರ್ಶಿ ಜೆನಿಫರ್, ಸುಳ್ವಾಡಿ ಘಟಕದ ಮಾದಮ್ಮ, ಉಪಾಧ್ಯಕ್ಷರಾದ ರಾಣಿ, ಶಿವಮಲ್ಲೇ ಗೌಡ, ದಲಿತ ಸಂಘರ್ಷ ಸಮಿತಿ ಮಣಿ, ವೆಂಕಟೇಶ್, ಪೆದ್ದನಪಾಳ್ಯ ಮಣಿ ಉಪಸ್ಥಿತರಿದ್ದರು.