ಸಾರಾಂಶ
ಮಡಿಕೇರಿ ದಸರಾ ಕಲಾ ವೇದಿಕೆಯಲ್ಲಿ ದಶಮಂಟಪಗಳ ಪ್ರಶಸ್ತಿ ವಿತರಣೆ ಗಲಾಟೆ ನಡೆಸಿ ಸಾಮಾಗ್ರಿಗಳ ನಷ್ಟ ಪಡಿಸಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ದಸರಾ ಕಲಾ ವೇದಿಕೆಯಲ್ಲಿ ದಶಮಂಟಪಗಳ ಪ್ರಶಸ್ತಿ ವಿತರಣೆ ಸಂದರ್ಭ ಗಲಾಟೆ ನಡಿಸಿ ಸಾಮಗ್ರಿಗಳ ನಷ್ಟ ಪಡಿಸಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.ಉಳಿದವರನ್ನು ಪತ್ತೆಹಚ್ಚಲು ಪೊಲೀಸರಿಂದ ಕ್ರಮ ವಹಿಸಲಾಗಿದೆ.
ಮಡಿಕೇರಿಯ ದಸರಾ ಕಲಾ ವೇದಿಕೆಯಲ್ಲಿ ಬಹುಮಾನ ವಿತರಣೆ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿ ವೇದಿಕೆ ಏರಿ "ಮೋಸ.. ಮೋಸ " ಎಂದು ಘೋಷಣೆ ಕೂಗಿ ಅಲ್ಲಿದ್ದ ಪೊಡಿಯಮ್, ಎಲ್.ಇ.ಡಿ, ಧ್ವನಿವರ್ಧಕ, ಲೈಟ್ಗಳನ್ನು ಹೊಡೆದು ಹಾಕಿ ಹಾಗೆ ಬಹುಮಾನಕ್ಕೆ ಇಟ್ಟ ಚಿನ್ನ ಹಾಗೂ ಬೆಳ್ಳಿಯ ಬಹುಮಾನಗಳನ್ನು ವೇದಿಕೆಯಿಂದ ಕೆಳಗೆ ಬಿಸಾಕಿ, 150 ಕುರ್ಚಿಗಳನ್ನು ಹಾನಿಪಡಿಸಿ ಒಟ್ಟು ಎರಡು ಲಕ್ಷ ರೂಪಾಯಿ ನಷ್ಟ ಪಡಿಸಿರುವ ಹಿನ್ನೆಲೆಯಲ್ಲಿ ಪವನ್ ಕುಮಾರ್ ಕೆ.ಆರ್, ವಿನೋದ್ ಕಾರ್ಯಪ್ಪ ಸುಹಾಸ್ ಶೆಟ್ಟಿ, ಮೇಲೆ ಪೊಲೀಸರು ಬಿ.ಎನ್ ಎಸ್ 292, 324 (5)189(2) ರ ಅಡಿಯಲ್ಲಿ ಮೊಕದ್ದಮೆ ದಾಖಲು ಮಾಡಿಕೊಂಡಿದ್ದಾರೆ.ಈ ಘಟನೆಯಲ್ಲಿ ಭಾಗಿಯಾದ ಇತರರನ್ನು ಕೂಡ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ತಿಳಿಸಿದ್ದಾರೆ .