ಸಾರಾಂಶ
ನೀಟ್ ಪರೀಕ್ಷೆಯಲ್ಲಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕಲಬುರಗಿ:
ನೀಟ್ ಪರೀಕ್ಷೆಯಲ್ಲಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಈ ಕಾಲೇಜಿ ವಿದ್ಯಾರ್ಥಿಗಳಾದ ಸಾಮ್ರಾಟ್ 640, ಶ್ರೀಹರಿ ಜೋಷಿ 579, ಪದ್ಮಜಾ 575, ವೀರೇಶ ಆರ್ 497, ಕಾರ್ತೀಕ್ ಕುಲಕರ್ಣಿ 495, ಭಾಗ್ಯಶ್ರೀ 493, ಅಂಕಿತಾ ಎಸ್ 483, ಗೌರಿ ಕುಲಕರ್ಣಿ 481, ಶ್ರೀನಿಧಿ ಬಿರಾದಾರ 478, ರಿತೇಶ್ ರೆಡ್ಡಿ 434, ಪೂಜಾ ಕಲಾಲ್ 423, ನಿಖಿತಾ ರೆಡ್ಡಿ 418 ಅಂಕ, 720ಕ್ಕೆ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರೂ ಹಾಗೂ ಪ್ರಾಂಶುಪಾಲರಾದ ಡಾ. ಭುರ್ಲಿ ಪ್ರಹ್ಲಾದ ರವರು ಅಭಿನಂದಿಸಿದ್ದಾರೆ. ಹಾಗೂ ಕಾಲೇಜಿನ ಸಿಬ್ಬಂದಿ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.