ಸಾರಾಂಶ
Road accident: passengers escape
ಸಾಗರ: ತಾಲೂಕಿನ ಭೀಮನೇರಿ ಗ್ರಾಮದ ಸಮೀಪ ಶುಂಠಿ ತುಂಬಿದ ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಗುರುವಾರ ನಡೆದಿದೆ. ಸಾಗರದಿಂದ ಶುಂಠಿ ತುಂಬಿಕೊಂಡು ಹುಬ್ಬಳ್ಳಿಗೆ ಹೋಗುತ್ತಿದ್ದ ಲಾರಿ ಮತ್ತು ಹುಬ್ಬಳಿ ಕಡೆಯಿಂದ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ರಸ್ತೆಗೆ ಅಡ್ಡವಾಗಿ ಬಂದ ಹಾವನ್ನು ತಪ್ಪಿಸಲು ಹೋಗಿ ಕಾರಿನ ಚಾಲಕ ಎದುರು ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಲಾರಿ ಚಾಲಕ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ರಸ್ತೆ ಪಕ್ಕಕ್ಕೆ ಲಾರಿ ತೆಗೆದುಕೊಂಡು ಹೋದಾಗ ಲಾರಿ ಪಲ್ಟಿಯಾಗಿ ಶುಂಠಿಚೀಲ ಕೆಳಗೆ ಉರುಳಿದೆ. ಅದೃಷ್ಟವಶಾತ್ ಲಾರಿ ಮತ್ತು ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ.
----೧೮ಕೆ.ಎಸ್.ಎ.ಜಿ.೧
ರಸ್ತೆ ಅಪಘಾತದಲ್ಲಿ ಶುಂಠಿ ಲಾರಿ ಪಲ್ಟಿಯಾಗಿರುವುದು