ಮಾಯಸಂದ್ರ ಕ್ರಾಸ್‌ನಿಂದ ಅಂಚಿಹಳ್ಳಿಗೆ ರಸ್ತೆ ನಿರ್ಮಾಣಕ್ಕೆ ಚಾಲನೆ

| Published : Aug 23 2024, 01:11 AM IST

ಮಾಯಸಂದ್ರ ಕ್ರಾಸ್‌ನಿಂದ ಅಂಚಿಹಳ್ಳಿಗೆ ರಸ್ತೆ ನಿರ್ಮಾಣಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಯಸಂದ್ರ ಕ್ರಾಸ್‌ನಿಂದ ಅಂಚಿಹಳ್ಳಿಗೆ ರಸ್ತೆ ನಿರ್ಮಾಣಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ತುರುವೇಕೆರೆ

ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಾಯಸಂದ್ರ- ಯಡಿಯೂರು ರಸ್ತೆಯ ಮಾರ್ಗ ಮಧ್ಯದ ಮಾಯಸಂದ್ರ ಕ್ರಾಸ್‌ನಿಂದ ಅಂಚಿಹಳ್ಳಿವರೆಗಿನ ಡಾಂಬಾರು ರಸ್ತೆ ನಿರ್ಮಾಣಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಗುರುವಾರ ಚಾಲನೆ ನೀಡಿದರು.ಜಡೆಯ ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, 10 ಕೋಟಿ ರು. ವೆಚ್ಚದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಯಡಿಯೂರು ಕ್ರಾಸ್ ನಿಂದ ಅಂಚಿಹಳ್ಳಿವರೆಗೆ ಡಾಂಬಾರು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ರಸ್ತೆಯೂ ಆದಲ್ಲಿ ಯಡಿಯೂರು - ಮಾಯಸಂದ್ರ ರಸ್ತೆಯ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಸಾರ್ವಜನಿಕರು ಅಗತ್ಯಕ್ಕೆ ತಕ್ಕಂತೆ ಈಗಲೇ ರಸ್ತೆಯ ಮಧ್ಯೆ ಪೈಪ್‌ ಅಳವಡಿಸಿಕೊಳ್ಳಬಹುದಾಗಿದೆ. ರಸ್ತೆ ನಿರ್ಮಾಣವಾದ ನಂತರ ರಸ್ತೆಯನ್ನು ಅಗೆದು ಪೈಪ್‌ ಅಳವಡಿಸಲು ಮುಂದಾದಲ್ಲಿ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು. ಜಡೆಯದಿಂದ ಮಾಯಸಂದ್ರ ದವರೆಗೆ ಡಾಂಬಾರು ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜಡೆಯ ಕ್ರಾಸ್ ನಿಂದ ಕಣಕೂರು ವರಗಿನವರೆಗೂ ಡಾಂಬಾರು ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಭಾಕರ್, ಸಹಾಯಕ ಇಂಜಿನಿಯರ್ ಇಮ್ರಾನ್, ಗುತ್ತಿಗೆದಾರರಾದ ಕೇಶವ್, ಮಾಯಸಂದ್ರ, ಭೈತರಹೊಸಳ್ಳಿ, ಸೊರನವಹಳ್ಳಿಯ ಹಲವಾರು ಗ್ರಾಮ ಪಂಚಾಯ್ತಿ ಸದಸ್ಯರು, ಜನಪ್ರತಿನಿಧಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು. ಸ