ಸಾರಾಂಶ
ಉಜಿರೆ-ಧರ್ಮಸ್ಥಳ- ಪೆರಿಯಶಾಂತಿ ಸ್ಪರ್ ರಸ್ತೆಗೆ ಶಿಲಾನ್ಯಾಸಕನ್ನಡಪ್ರಭ ವಾರ್ತೆ ಬೆಳ್ತಂಗಡಿಉಜಿರೆ-ಧರ್ಮಸ್ಥಳ- ಪೆರಿಯಶಾಂತಿ ರಸ್ತೆ ಅಭಿವೃದ್ಧಿ ಹೊಂದುವುದರಿಂದ ಇಡೀ ರಾಜ್ಯದ ಜನತೆಗೆ ಅನುಕೂಲವಾಗಲಿದೆ. ಈ ರಸ್ತೆ ಅಭಿವೃದ್ಧಿ ರಾಷ್ಟ್ರೀಯ ಕಲ್ಪನೆಯ ಯೋಜನೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ಶನಿವಾರ ಧರ್ಮಸ್ಥಳದ ದ್ವಾರದ ಬಳಿ 614 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಹೊಂದಲಿರುವ ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ಸ್ಪರ್ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ರಸ್ತೆ ಅಭಿವೃದ್ಧಿಯಿಂದ ಜನರಿಗೆ ಸಮಯದ ಉಳಿತಾಯವಾಗಲಿದೆ. ನೇತ್ರಾವತಿಯಿಂದ ಧರ್ಮಸ್ಥಳದ ವರೆಗೆ ಅಂಡರ್ ಪಾಸ್ ಆಗುವುದರಿಂದ ರಸ್ತೆ ಸಂಚಾರ ಸುಲಭವಾಗಲಿದೆ. ಕುಸಿತ ಉಂಟಾಗುವ ಸ್ಥಳಗಳಲ್ಲಿ ಕವರ್ ಕ್ರಾಪ್ ಬೆಳೆಸುವುದರಿಂದ ಕುಸಿತದ ಪ್ರಮಾಣ ಕಡಿಮೆಯಾಗುತ್ತದೆ. ಈಗಾಗಲೇ ಕ್ಷೇತ್ರದ ಸಮೀಪದ ರಸ್ತೆಯಲ್ಲಿ ಈ ಕ್ರಮವನ್ನು ಅಳವಡಿಸಲಾಗಿದೆ. ಶಾಸಕರ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿವೃತ್ತ ಇ.ಇ. ಶಿವಪ್ರಸಾದ್ ಅಜಿಲರು ಉತ್ತಮ ರೂಪುರೇಷೆ ನೀಡುವುದರಿಂದ ರಸ್ತೆಯು ಸುಸಜ್ಜಿತವಾಗಿ ನಿರ್ಮಾಣವಾಗಲಿದೆ ಎಂದರು.ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಶಿರಾಡಿ ಘಾಟ್ ಭಾಗದಲ್ಲಿ ಹೆದ್ದಾರಿ, ರೈಲ್ವೇ ಸುರಂಗ ಮಾರ್ಗಕ್ಕೆ ಸಂಬಂಧಿಸಿ ಜಾಯಿಂಟ್ ವರ್ಕಿಂಗ್ ಗ್ರೂಪ್ ರಚನೆಗೆ ಹೆದ್ದಾರಿ ಸಚಿವರು ಒಪ್ಪಿಗೆ ಸೂಚಿಸಿದ್ದು, ಮುಂದೆ ಅದರ ಕಾರ್ಯಸಾಧ್ಯತೆಯ ಅಧ್ಯಯನ ಮಾಡಿಕೊಂಡು ಯೋಜನೆಯನ್ನು ಪರಿಸರಕ್ಕೆ ಹಾನಿಯಾಗದ ರೀತಿ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಲಾಗುವುದು. ಗುರುವಾಯನಕೆರೆ-ಬಜಗೋಳಿ, ಪೆರಿಯಶಾಂತಿ- ಸುಳ್ಯ ರಸ್ತೆಗಳು ಮುಂದಿನ ದಿನಗಳಲ್ಲಿ ಮೇಲ್ದರ್ಜೆಗೆ ಏರಲಿವೆ. ಮಾಣಿ-ಸಂಪಾಜೆ ರಸ್ತೆ ಡಿಪಿಆರ್ ಹಂತದಲ್ಲಿದ್ದು, ಕಾಮಗಾರಿಗೆ ವಿಶೇಷ ಅನುಮೋದನೆ ಪಡೆಯಲಾಗುವುದು, ಬೆಳ್ತಂಗಡಿ ತಾಲೂಕಿನ ರಸ್ತೆಗಳು ಸೇರಿ ಜಿಲ್ಲೆಯಲ್ಲಿ 45 ಕಿ.ಮೀ. ರಸ್ತೆಯ ಅಭಿವೃದ್ಧಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಶಾಸಕ ಹರೀಶ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ, ಎರಡು ಶ್ರದ್ಧಾ ಕೇಂದ್ರ ಎರಡು ಹೆದ್ದಾರಿಗಳನ್ನು ಸಂಪರ್ಕಿಸುವ ಈ ರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳ್ಳಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಪಿಡಬ್ಲ್ಯೂಡಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಿವಪ್ರಸಾದ್ ಅಜಿಲ ಮೊದಲಾದವರು ಸಾಕಷ್ಟು ಪ್ರಯತ್ನಪಟ್ಟಿದ್ದು, ಅದು ಸಾರ್ಥಕಗೊಂಡಿದೆ. ಕೇಂದ್ರ ಸಚಿವ ನಿತೀಶ್ ಗಡ್ಕರಿ, ಈ ರಸ್ತೆಯ ಅಭಿವೃದ್ಧಿಗೆ ವಿಶೇಷವಾದ ಮುತುವರ್ಜಿ ವಹಿಸಿದ್ದಾರೆ ಎಂದು ತಿಳಿಸಿದರು.ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿವೃತ್ತ ಇ.ಇ. ಶಿವಪ್ರಸಾದ್ ಅಜಿಲ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪಿ., ಧರ್ಮಸ್ಥಳ ಪ್ಯಾಕ್ಸ್ ಅಧ್ಯಕ್ಷ ಪ್ರೀತಂ ಡಿ., ಮುಗ್ರೋಡಿ ಕನ್‌ಸ್ಟ್ರಕ್ಷನ್‌ನ ಸುಧಾಕರ ಶೆಟ್ಟಿ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ವಿಮಲಾ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ ಕಾರಂತ್ ಸೇರಿದಂತೆ ಬೆಳಾಲು, ಪಟ್ರಮೆ, ಪುದುವೆಟ್ಟು, ಕಲ್ಮಂಜ, ಕೊಕ್ಕಡ ಮೊದಲಾದ ಗ್ರಾಮಗಳ ಅಧ್ಯಕ್ಷರು ಉಪಸ್ಥಿತರಿದ್ದರು.ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸರಾವ್ ಸ್ವಾಗತಿಸಿದರು. ಸುಧೀರ್ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ ಅಲಂಬಿಲ ವಂದಿಸಿದರು.ರಸ್ತೆಯ ರೂಪುರೇಷೆಈ ರಸ್ತೆಯ ರೂಪುರೇಷೆ ಕುರಿತು ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿವೃತ್ತ ಇ.ಇ. ಶಿವಪ್ರಸಾದ್ ಅಜಿಲ, 30.5 ಕಿ.ಮೀ. ವ್ಯಾಪ್ತಿಯ ಈ ರಸ್ತೆ ನೇರಗೊಳ್ಳುವುದರಿಂದ ಇದರ ವ್ಯಾಪ್ತಿ 28.49 ಕಿ.ಮೀ.ಗೆ ಸೀಮಿತಗೊಳ್ಳಲಿದೆ. ನೇತ್ರಾವತಿಯಲ್ಲಿ ಎರಡು ಪಾರ್ಪಿಕಲ್ಲಿನಲ್ಲಿ ಒಂದು ಬೃಹತ್ ಸೇತುವೆಗಳು, ನಿಡ್ಲೆಯಲ್ಲಿ ಕಿರು ಸೇತುವೆ ನಿರ್ಮಾಣಗೊಳ್ಳಲಿವೆ. 37 ಸ್ಲ್ಯಾಬ್ ಮೋರಿ, 12 ಬಾಕ್ಸ್ ಮೋರಿ ರಚನೆಗೊಳ್ಳಲಿದ್ದು, 3 ಪ್ರಮುಖ ಕ್ರಾಸ್ ರೋಡ್ ಜಂಕ್ಷನ್, 63 ಸಣ್ಣ ಜಂಕ್ಷನ್‌ಗಳು ಇರಲಿವೆ. ಉಜಿರೆಯಿಂದ ಧರ್ಮಸ್ಥಳದ ವರೆಗೆ ಚತುಷ್ಪಥ, ಧರ್ಮಸ್ಥಳದಿಂದ ಪೆರಿಯಶಾಂತಿ ವರೆಗೆ 10 ಮೀ. ಅಗಲದ ದ್ವಿಪಥ ರಸ್ತೆ ನಿರ್ಮಾಣಗೊಳ್ಳಲಿದೆ ಎಂದರು.;Resize=(128,128))
;Resize=(128,128))
;Resize=(128,128))
;Resize=(128,128))