ಓವರ್‌ಬ್ರಿಡ್ಜ್‌ ವೃತ್ತದಿಂದ ಉಳ್ಳಾಲಬೈಲ್‌ವರೆಗಿನ ಕಿರಿದಾದ ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತೊಕ್ಕೊಟ್ಟು ಓವರ್‌ ಬ್ರಿಡ್ಜ್‌ ನಿಂದ ಉಳ್ಳಾಲಬೈಲಿನವರೆಗೆ ರಸ್ತೆ ಪರಿಶೀಲನೆಗೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ ಗಳ ಜತೆಗೆ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿದರು.

ಉಳ್ಳಾಲ: ಓವರ್‌ಬ್ರಿಡ್ಜ್‌ ವೃತ್ತದಿಂದ ಉಳ್ಳಾಲಬೈಲ್‌ವರೆಗಿನ ಕಿರಿದಾದ ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತೊಕ್ಕೊಟ್ಟು ಓವರ್‌ ಬ್ರಿಡ್ಜ್‌ ನಿಂದ ಉಳ್ಳಾಲಬೈಲಿನವರೆಗೆ ರಸ್ತೆ ಪರಿಶೀಲನೆಗೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ ಗಳ ಜತೆಗೆ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿದರು.ಓವರ್‌ಬ್ರಿಡ್ಜ್‌ ಭಾಗದಲ್ಲಿ ಕೆಳಭಾಗದಲ್ಲಿ ಮನೆಗಳಿರುವ ಕಾರಣ ಮಣ್ಣು ತುಂಬಿ ರಸ್ತೆ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಎರಡೂ ಬದಿಗಳಲ್ಲಿ ಕಾಂಕ್ರೀಟಿಕರಣ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಧಾರ್ಮಿಕ ಪರಿಷತ್‌ ಸದಸ್ಯ ಸುರೇಶ್‌ ಭಟ್ನಗರ, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಶೆಟ್ಟಿ ಬೋಳಿಯಾರ್‌, ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಅಶ್ವಿನ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್‌ , ಮುಡಾ ಮಾಜಿ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಉಳ್ಳಾಲ ನಗರ ಕಾಂಗ್ರೆಸ್‌ ಅಧ್ಯಕ್ಷ ಮುಸ್ತಾಫ ಅಬ್ದುಲ್ಲಾ, ಗೇರು ನಿಗಮದ ಅಧ್ಯಕ್ಷೆ ಮಮತ ಡಿ ಎಸ್ ಗಟ್ಟಿ , ಮನ್ಸೂರ್‌ ಮಂಚಿಲ, ಕೋಟೆಕಾರು ವಲಯ ಮಹಿಳಾ ಅಧ್ಯಕ್ಷೆ ತುಳಸಿ ಗಟ್ಟಿ, ಭಾಸ್ಕರ್‌ ತೊಕ್ಕೊಟ್ಟು, ಅಯೂಬ್‌ ಮಂಚಿಲ, ಅಶ್ರಫ್‌ ಕೋಡಿ, ಬಾಝಿಲ್‌ ಡಿಸೋಜ, ಸುಹಾಸಿನಿ ಬಬ್ಬುಕಟ್ಟೆ, ಯು.ಬಿ.ಸಲೀಂ, ಸ್ವಪ್ನಾ ಹರೀಶ್‌, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ದಾಸ್‌ ಪ್ರಕಾಶ್‌, ಪ್ರೀತಮ್‌, ಗುತ್ತಿಗೆದಾರರಾದ ನಾಗೇಶ್‌, ಕೆ.ಕೆ.ನಾಸೀರ್‌, ಕಾವ್ಯಶ್ರೀ , ಝಿಯಾ, ಮೊದಲಾದವರು ಉಪಸ್ಥಿತರಿದ್ದರು.