ಪರಿಶಿಷ್ಟರ ಜಮೀನಿನಲ್ಲಿ ರಸ್ತೆ: ಕ್ರಮ ಕೈಗೊಳ್ಳದ ಪೊಲೀಸರು

| Published : Dec 20 2024, 12:45 AM IST

ಪರಿಶಿಷ್ಟರ ಜಮೀನಿನಲ್ಲಿ ರಸ್ತೆ: ಕ್ರಮ ಕೈಗೊಳ್ಳದ ಪೊಲೀಸರು
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ತಾಲೂಕಿನ ಕೆ.ಜಿ.ಹೊಸಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಕುಟುಂಬದ ಜಮೀನಿನಲ್ಲಿ ಅಕ್ರಮ ರಸ್ತೆ ನಿರ್ಮಿಸಿ ಜಮೀನು ಮಾಲೀಕರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ರಾಮನಗರ ಗ್ರಾಮಾಂತರ ಪೊಲೀಸರು ನೊಂದ ಕುಟುಂಬಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಪಿ.ಪುನೀತ್‌ರಾಜ್ ಆರೋಪಿಸಿದರು.

ರಾಮನಗರ: ತಾಲೂಕಿನ ಕೆ.ಜಿ.ಹೊಸಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಕುಟುಂಬದ ಜಮೀನಿನಲ್ಲಿ ಅಕ್ರಮ ರಸ್ತೆ ನಿರ್ಮಿಸಿ ಜಮೀನು ಮಾಲೀಕರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದೆ ರಾಮನಗರ ಗ್ರಾಮಾಂತರ ಪೊಲೀಸರು ನೊಂದ ಕುಟುಂಬಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಪಿ.ಪುನೀತ್‌ರಾಜ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಜಿ.ಹೊಸಹಳ್ಳಿ ಗ್ರಾಮದ ಜಯಲಕ್ಷ್ಮಿ ಅವರ ಅಕ್ಕ ಕಾಳಮಂಚಮ್ಮನವರ ಸರ್ವೆ ನಂ.೫೦ರ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದು, ಇವರ ಜಮೀನಿನಲ್ಲಿ ೩೦ರಿಂದ ೪೦ ಅಡಿ ಜಮೀನನ್ನು ನರೇಗಾ ಯೋಜನೆಯಲ್ಲಿ ರಸ್ತೆ ನಿರ್ಮಾಣಕ್ಕೆ ಜಮೀನಿನಲ್ಲಿದ್ದ ಮಾವು, ತೇಗ, ನೀಲಗಿರಿ ಮತ್ತು ಇತರೆ ಮರಗಳನ್ನು ಕಡಿದಿದ್ದಾರೆ. ಮರ ಕಡಿದಿರುವ ವಿಷಯ ತಿಳಿದು ಸ್ಥಳಕ್ಕೆ ಹೋದ ಜಯಲಕ್ಷ್ಮಮ್ಮ ಕುಟುಂಬಕ್ಕೆ ಅಲ್ಲಿನ ಬೆಟ್ಟೇಗೌಡರ ಹೆಂಡತಿ ಆಶಾ ಮತ್ತು ಭೀಮಣ್ಣ ಅವಾಚ್ಯ ಶಬ್ದಗಳಿಂದ ಬೈದು ಇದು ಸರ್ಕಾರಿ ಜಮೀನು ಹತ್ತಿರ ಬರಬೇಡಿ ಎಂದು ಬೆದರಿಕೆಯೊಡ್ಡಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇವರ ಬಗ್ಗೆ ದೂರು ದಾಖಲಿಸಿ ಕಾನೂನು ಕ್ರಮ ಜರುಗಿಸಿ ಎಫ್‌ಐಆರ್ ದಾಖಲಿಸಿ ಎಂದು ರಾಮನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರೂ ನಾಲ್ಕು ದಿನಗಳಿಂದಲೂ ಯಾವುದೇ ಕ್ರಮ ಜರುಗಿಸದೇ ರಾಜಿ ಸಂಧಾನ ಮಾಡಿಕೊಳ್ಳಿ ಎಂದು ಪೊಲೀಸರು ಒತ್ತಡ ಹೇರುತ್ತಿದ್ದಾರೆ. ನೊಂದ ಕುಟುಂಬಕ್ಕೆ ಗ್ರಾಮಾಂತರ ಪೊಲೀಸರು ಸಹಕಾರ ನೀಡುತ್ತಿಲ್ಲ. ಗ್ರಾಪಂ ಅಧಿಕಾರಿಗಳು ಕೂಡ ಅವರ ಜೊತೆ ಶಾಮೀಲಾಗಿ ಪರಿಶಿಷ್ಟ ಪಂಗಡದ ನೊಂದ ಕುಟುಂಬಕ್ಕೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಗ್ರಾಪಂ ನರೇಗಾ ಯೋಜನೆಯಲ್ಲೂ ಜೆಸಿಬಿ ಬಳಸಿ ಅಲ್ಲೂ ಕಾನೂನು ಗಾಳಿಗೆ ತೂರಿದ್ದಾರೆ. ಜಮೀನು ನೊಂದ ಕುಟುಂಬಕ್ಕೆ ಸೇರಿದ್ದಾದರೂ ಸರ್ಕಾರಿ ಜಮೀನು ಎಂದು ಉದ್ಧೇಶಪೂರ್ವಕವಾಗಿಯೇ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಜರುಗಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ. ಪೊಲೀಸರ ನಡೆ ಅನುಮಾನ ಮೂಡಿಸಿದ್ದು ಪೊಲೀಸರ ವರ್ತನೆ ಬಗ್ಗೆ ಪೊಲೀಸ್ ಮಹಾ ಅಧೀಕ್ಷಕರಿಗೂ ತಿಳಿಸಲಾಗಿದೆ. ಆದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ರಾಮನಗರ ಗ್ರಾಮಾಂತರ ಠಾಣೆಯಲ್ಲಿರುವ ಠಾಣಾಧಿಕಾರಿ ಮತ್ತು ಇತರ ಅಧಿಕಾರಿ ಸಿಬ್ಬಂದಿ ವರ್ಗದವರನ್ನು ಬೇರೆಡೆಗೆ ವರ್ಗಾವಣೆ ಮಾಡಿ ಜನಸ್ನೇಯಿ ಠಾಣೆಯಾಗಿ ಕಾರ್ಯನಿರ್ವಹಿಸಲು ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು.

ಈ ವೇಳೆ ಜಯಲಕ್ಷ್ಮಮ್ಮ, ಕಾಳಮಂಚಮ್ಮ, ರವಿ, ಭಾಗ್ಯ, ರಾಧ ಮುಂತಾದವರಿದ್ದರು.

ಪೊಟೋ೧೯ಸಿಪಿಟಿ೩: ರಾಮನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಪಿ.ಪುನೀತ್‌ರಾಜ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.