ಪಾದಚಾರಿ ಸಂಚಾರಕ್ಕೆ ಸಂಚಕಾರ ತಂದ ರಸ್ತೆ ವ್ಯಾಪಾರ

| Published : Dec 30 2024, 01:04 AM IST

ಸಾರಾಂಶ

ರಸ್ತೆಯನ್ನೆ ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ ಪಾದಚಾರಿ, ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಈ ಹಿಂದೆ ಪಪಂಯವರು ಈ ವ್ಯಾಪಾರಿಗಳನ್ನು ತೆರವುಗೂಳಿಸಿದ್ದರು. ಆದರೆ ಈಗ ಪಪಂ ಕೈಕಟ್ಟಿ ಕುಳಿತ್ತಿರುವುದು ಅನುಮಾನ ಕಾರಣವಾಗಿದೆ.

ಅಂಬಳೆ ವೀರಭದ್ರನಾಯಕ

ಕನ್ನಡಪ್ರಭ ವಾರ್ತೆ ಯಳಂದೂರು

ರಸ್ತೆಯನ್ನೆ ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ ಪಾದಚಾರಿ, ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಈ ಹಿಂದೆ ಪಪಂಯವರು ಈ ವ್ಯಾಪಾರಿಗಳನ್ನು ತೆರವುಗೂಳಿಸಿದ್ದರು. ಆದರೆ ಈಗ ಪಪಂ ಕೈಕಟ್ಟಿ ಕುಳಿತ್ತಿರುವುದು ಅನುಮಾನ ಕಾರಣವಾಗಿದೆ.

ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದ ಬಳಿ ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟಕ್ಕೆ ಹಾದು ಹೋಗುವ ರಸ್ತೆ ಮತ್ತು ಚಾಮರಾಜನಗರ, ಮೈಸೂರು ರಸ್ತೆಯನ್ನೆ ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಪಟ್ಟಣದ ಹೃದಯಭಾಗದಲ್ಲಿ ಬಾಗಲಕೋಟೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ನಿತ್ಯ ನೂರಾರು ಲಾರಿ, ಬಸ್, ಕಾರು, ಬೈಕ್‌ ದಟ್ಟಣೆ ಜಾಸ್ತಿಯಾಗಿದೆ. ಕಿರಿದಾದ ರಸ್ತೆಯಲ್ಲೆ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುವುದರಿಂದ ಅಪಘಾತಗಳು ನಿತ್ಯ ನಡೆಯುತ್ತಿದೆ. ಅಲ್ಲದೆ ಸಣ್ಣ ಪುಟ್ಟ ಮಾತಿಗೂ ವ್ಯಾಪಾರಿಗಳ ಜೊತೆಯಲ್ಲಿ ವಾಹನ ಸವಾರರು ಜಗಳವಾಡಬೇಕಾದ ಪರಿಸ್ಥಿತಿ ಬಂದಿದೆ.

ಸಭೆಗೆ ಸೀಮಿತವಾದ ಆದೇಶ:

ರಸ್ತೆ ಅತಿಕ್ರಮಿಸಿಕೊಂಡಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಪಪಂಗೆ ದೂರು ನೀಡಲಾಗಿತ್ತು. ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವಂತೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರಿಂದ ಪಪಂಯವರು ಕಾರ್ಯಾಚರಣೆ ನಡೆಸಲು ಆತುರರಾಗಿದ್ದರು. ಆದರೆ ಕೆಲವು ಕಾಣದ ಕೈಗಳ ರಾಜಕೀಯ ಒತ್ತಡಕ್ಕೆ ಕಾರ್ಯಾಚರಣೆ ಸ್ಥಗಿತಗೂಂಡಿದೆ.

ಬೀದಿಬದಿ ವ್ಯಾಪಾರಿಗಳನ್ನು ತೆರವುಗೂಳಿಸಬೇಕೆಂದು ಪಪಂ, ಪೊಲೀಸ್ ಇಲಾಖೆ ಮುಂದಾದ ವೇಳೆ ರಾಜಕೀಯ ಒತ್ತಡ ತರಿಸಿ ತೆರವು ಕಾರ್ಯ ತಡೆಯಲು ಸಲುವಾಗಿ ವ್ಯಾಪಾರಿಗಳು ಕಾಣದ ಕೈಗಳಿಗೆ ಹಣ ನೀಡುತ್ತಾರೆ.

ಪುಟ್‌ಪಾತ್ ರಾಜಕೀಯಕ್ಕೆ ಹೆದರದ ಡಿಸಿ:ಈ ಹಿಂದೆ ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದ ಎಂ.ಆರ್‌. ರವಿ ಅವರು, ತಳ್ಳುಗಾಡಿಗಳಿಂದ ಪುಟ್‌ಪಾತ್‌ ಅತಿಕ್ರಮಿಸಿ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದನ್ನು ಕಂಡು ಅವರೇ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಯಾವುದೇ ಮುಲಾಜಿಗೆ ತಲೆಕೆಡಿಸಿಕೂಳ್ಳದೆ ಆಮಿಷ, ರಾಜಕೀಯ ಒತ್ತಡಕ್ಕೆ ಮಣಿಯದೆ ಅಂದಿನ ಪ.ಪಂ.ಮುಖ್ಯಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ನಾಗರತ್ನ ಅವರಿಗೆ ತಕ್ಷಣವೇ ಪ್ಯಾಪಾರಿಗಳನ್ನು ತೆರವುಗೂಳಿಸುವಂತೆ ಸೂಚನೆ ನೀಡಿ, ಪುಟ್‌ಪಾತ್ ಅಂಗಡಿ ತೆರವು ಕಾರ್ಯಚರಣೆ ನಡೆಸುವ ಮೂಲಕ ಅಧಿಕಾರ ದಕ್ಷತೆ ಮೆರೆದಿದ್ದರು.ಜಾಗ ಕೊಟ್ಟರು ಹೋಗದ ವ್ಯಾಪಾರಿಗಳು: ಈ ಹಿಂದೆ ಪಪಂಯು ವ್ಯಾಪಾರಿಗಳನ್ನು ತೆರವುಗೊಳಿಸಿದ ಸಂದರ್ಭದಲ್ಲಿ ವ್ಯಾಪಾರಿಗಳಿಗೆ ಸಂತೆ ನಡೆಯುವ ಸ್ಥಳ, ಬಸ್ ನಿಲ್ದಾಣದ ಹಿಂಬಾಗ ಇರುವ ಸಿಡಿಎಸ್ ಸಮುದಾಯ ಭವನ, ಬಿಎಸ್‌ಎನ್ಎಲ್‌ ಹಿಂಭಾಗದ ರಸ್ತೆಯಲ್ಲಿ ವ್ಯಾಪಾರ ಮಾಡುವಂತೆ ಜಾಗ ಗುರುತು ಮಾಡಿ ತೋರಿಸಲಾಗಿತ್ತು. ಆದರೆ, ವ್ಯಾಪಾರಿಗಳು ಅಲ್ಲಿಗೆ ಹೋಗದೆ ಮೊಂಡಾಟ ಮಾಡಿದರು. ಆದರೆ ಕಾಲಕ್ರಮೇಣ ಮತ್ತೆ ತೆರವು ಮಾಡಿದ ಜಾಗದಲ್ಲೇ ಮತ್ತೆ ರಸ್ತೆ ಅತಿಕ್ರಮಿಸಿ ವ್ಯಾಪಾರ ಮಾಡುವುದರ ಮೂಲಕ ಪಪಂಗೆ ಸವಾಲ್ ಹಾಕಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾದರೆ ಸಹಿಸದ ಶಾಸಕ ಎ.ಆರ್.ಕೃಷ್ಣಮೂರ್ತಿ ತಾವು ಕೈಗೊಂಡ ನಿರ್ಣಯವನ್ನು ಜಾರಿಗೂಳಿಸಲು ಏಕೆ ವಿಫಲವಾದರೂ ಎಂಬುದು ತಿಳಿಯುತ್ತಿಲ್ಲ. ಇನ್ನಾದರೂ ಪಪಂ ಸುಗಮಕ್ಕೆ ಸಂಚಾರಕ್ಕೆ ಅನುಕೂಲ ಮಾಡಿಕೂಡಲು ಮುಂದಾಗಬೇಕು.ರಸ್ತೆ ಅತಿಕ್ರಮಿಸಿ ಕೊಂಡಿರುವುದನ್ನು ಪಪಂಯವರು ತೆರವುಗೂಳಿಸದೆ ಇರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಕೆಲವೆಡೆ ಅಡ್ಡ ದಿಡ್ಡಿ ವಾಹನಗಳು ನಿಲ್ಲಿಸುವುದರಿಂದ ಸಂಚಾರದಲ್ಲಿ ವ್ಯತ್ಯಾಸವಾಗುತ್ತಿದೆ. ಪಪಂ ಸೂಕ್ತ ನಿರ್ಣಯ ಕೈಗೊಂಡರೆ ನಾವು ಸಮಸ್ಯೆ ಬಗೆಹರಿಸುತ್ತೇವೆ.ಹನುಮಂತ ಉಪ್ಪಾರ್, ಪಿಎಸ್‌ಐ ಯಳಂದೂರು ಈ ಹಿಂದೆ ಪುಟ್‌ಪಾತ್‌ ವ್ಯಾಪಾರಿಗಳನ್ನು ತೆರವುಗೂಳಿಸಲಾಗಿತ್ತು. ಆದರೆ ಮತ್ತೆ ಪುಟ್‌ಪಾತ್‌ ಅತಿಕ್ರಮಿಸಿಕೂಂಡಿದ್ದು ತೆರವು ಮಾಡಲು ಸಭೆಯಲ್ಲಿ ನಿರ್ಣಯವಾಗಿದೆ. ಮುಂದಿನ ದಿನಗಳಲ್ಲಿ ತೆರವುಗೂಳಿಸಲು ಕ್ರಮ ಕೈಗೂಳ್ಳುತೇನೆ.

ಮಹೇಶ್ ಕುಮಾರ್ ಪಪಂ ಮುಖ್ಯಾಧಿಕಾರಿ ಯಳಂದೂರು

ವ್ಯಾಪಾರಿಗಳನ್ನು ತೆರವುಗೂಳಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಶಾಸಕ ಎ.ಆರ್.ಕೃಷ್ಣಮೂರ್ತಿ ರಸ್ತೆ ಅತಿಕ್ರಮದ ಬಗ್ಗೆ ಗಮನಹರಿಸಬೇಕು.

ಉಮೇಶ್ ಗೌತಮ್ ಯಳಂದೂರು