ಸಾರಾಂಶ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಶುಕ್ರವಾರ ಮತ್ತು ಶನಿವಾರ ಮಳೆಯ ಆರ್ಭಟ ಮುಂದುವರೆದಿದೆ.ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಹಲವು ಹಾನಿಯಾಗಿದ್ದು, ಹಾನಗಲ್ಲು ಗ್ರಾಮದ ಲೋಹಿತ್ ಅವರ ವಾಸದ ಮನೆಗೆ ಹಾನಿಯಾಗಿದೆ. ಜೊಸೇಫ್ ಅವರ ಮನೆಯ ಮನೆಯ ಎದುರು ಬರೆ ಕುಸಿದಿದೆ. ಶುಕ್ರವಾರ ಬೆಳಗ್ಗೆ ಮಡಿಕೇರಿಯ ಸೋಮವಾರಪೇಟೆ ಹೆದ್ದಾರಿಯ ಕುಂಬೂರು ಗ್ರಾಮದ ರಸ್ತೆಯ ಮೇಲೆ ಮರ ಬಿದ್ದಿದ್ದು, ಅರಣ್ಯ ಇಲಾಖೆಯವರು ತೆರವುಗೊಳಿಸುವ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಕಳೆದ 24 ಗಂಟೆಗಳ ಅವಧಿಯಲ್ಲಿ ತಾಲೂಕಿನಲ್ಲಿ ಸರಾಸರಿ 1.58 ಸೆಂಟೀ ಮೀಟರ್ ಮಳೆಯಾಗಿದೆ. ಶಾಂತಳ್ಳಿ ಹೋಬಳಿಗೆ 3.48 ಸೆಂಟೀ ಮೀಟರ್, ಸೋಮವಾರಪೇಟೆ ಕಸಬಾ 1.20, ಕೊಡ್ಲಿಪೇಟೆ 0.91 ಹಾಗೂ ಶನಿವಾರಸಂತೆ ಹೋಬಳಿಗೆ 0.72 ಸೆಂಟೀ ಮೀಟರ್ ಮಳೆಯಾಗಿದೆ.---------------------------------------------
ಕೊಡಗು ಜಿಲ್ಲೆಯಲ್ಲಿ ಮುಂದುವರೆದ ಮಳೆಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಾದ್ಯಂತ ಶನಿವಾರವೂ ಉತ್ತಮ ಮಳೆ ಮುಂದುವರೆದಿದೆ.ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಚಳಿ ವಾತಾವರಣವಿದೆ. ಕಳೆದೊಂದು ವಾರದಿಂದ ಮಳೆ ವಾತಾವರಣವಿದೆ. ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 35.12 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 5.97 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1540.50 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 950.98 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ 71.17 ಮಿ.ಮೀ,
ವಿರಾಜಪೇಟೆ ತಾಲೂಕಿನಲ್ಲಿ 22.50 ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ 28.42 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 39.50 ಮಿ.ಮೀ. ಮಳೆಯಾಗಿದೆ ಹಾಗೂ ಕುಶಾಲನಗರ ತಾಲೂಕಿನಲ್ಲಿ 14 ಮಿ.ಮೀ. ಮಳೆಯಾಗಿದೆ.ಹೋಬಳಿ ವಿವರ : ಮಡಿಕೇರಿ ಕಸಬಾ 53, ನಾಪೋಕ್ಲು 50.20, ಸಂಪಾಜೆ 49.50, ಭಾಗಮಂಡಲ 132, ವಿರಾಜಪೇಟೆ 23, ಅಮ್ಮತ್ತಿ 22, ಹುದಿಕೇರಿ 33, ಶ್ರೀಮಂಗಲ 28.60, ಪೊನ್ನಂಪೇಟೆ 35, ಬಾಳೆಲೆ 17.09, ಸೋಮವಾರಪೇಟೆ 30.20, ಶನಿವಾರಸಂತೆ 18, ಶಾಂತಳ್ಳಿ 87, ಕೊಡ್ಲಿಪೇಟೆ 22.80, ಕುಶಾಲನಗರ 7, ಸುಂಟಿಕೊಪ್ಪ 21 ಮಿ.ಮೀ.ಮಳೆಯಾಗಿದೆ.