ರಸ್ತೆ ಅಗಲೀಕರಣದಿಂದ ಸಾರ್ವಜನಿಕರಿಗೆ ತೊಂದರೆ

| Published : Apr 23 2025, 12:36 AM IST

ಸಾರಾಂಶ

ಹಿರಿಯೂರು ನಗರದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ವಿಶೇಷ ಸಾಮಾನ್ಯ ಸಭೆ ನಡೆಸಲಾಯಿತು.

ನಗರಸಭೆಯ ವಿಶೇಷ ಸಾಮಾನ್ಯ ಸಭೆ । ರಸ್ತೆ ಕಾಮಗಾರಿಗೆ ಅಧಿಕಾರಿಗಳ ಮೇಲೆ ಮುಗಿಬಿದ್ದ ನಗರಸಭೆ ಸದಸ್ಯರುಕನ್ನಡಪ್ರಭ ವಾರ್ತೆ ಹಿರಿಯೂರು:

ಶಾಸಕರ ವಿಶೇಷ ಅನುದಾನದ ಕೆಲಸಗಳನ್ನು ನಗರಸಭೆ ಅಧ್ಯಕ್ಷ, ಸದಸ್ಯರ ಗಮನಕ್ಕೆ ತರದೇ ಕೆಲಸ ಮಾಡಲಾಗುತ್ತಿದೆ ಎಂದು ನಗರಸಭೆಯ ಕೆಲ ಸದಸ್ಯರು ಆರೋಪಿಸಿದರು.ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಗರಸಭೆ

ಸದಸ್ಯ ಜಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ, ನಗರದ ಟಿ.ಬಿ.ವೃತ್ತದಿಂದ ಗಾಂಧಿ ವೃತ್ತದವರೆಗೆ ಹಾಗೂ ಹುಳಿಯಾರು ರಸ್ತೆ ಅಗಲೀಕರಣ ಕಾಮಗಾರಿ ವಿಳಂಬವಾಗಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿನ ಕೆಲಸಗಳನ್ನು ಬೇಗ ಪೂರ್ಣಗೊಳಿಸಿ ಎಂದು ಅಧಿಕಾರಿಗಳ ಬಳಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಅಗಲೀಕರಣ ವಿಷಯದಲ್ಲಿ ಅಧಿಕಾರಿಗಳು ಸದಸ್ಯರು ಹಾಗೂ ಸಾರ್ವಜನಿಕರ ಪರವಾಗಿ ನಿಲ್ಲದೆ ಕಾಮಗಾರಿ ಗುತ್ತಿಗೆದಾರರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೌರಾಯುಕ್ತ ಎ.ವಾಸಿಂ ಸದಸ್ಯರ ಮಾತಿಗೆ ಉತ್ತರಿಸಿ ಮಳೆ ಬಂದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ. ಸಂಬಂಧಪಟ್ಟವರಿಗೆ ಸೂಚನೆ ನೀಡಿ ಕಾಮಗಾರಿಗೆ ವೇಗ ನೀಡಲಾಗುವುದು ಎಂದರು.

ವಿಶೇಷ ಸಾಮಾನ್ಯ ಸಭೆಯಲ್ಲಿ 2025-26ನೇ ಸಾಲಿಗೆ ಎಸ್‌ಎಫ್‌ಸಿ ಮುಕ್ತ ನಿಧಿ ಯೋಜನೆಯಲ್ಲಿ ಹಂಚಿಕೆಯಾಗಿರುವ ಅನುದಾನಕ್ಕೆ ದಿನಾಂಕ ಏ.25 ರೊಳಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸಲು ಸೂಚಿಸಿರುವಂತೆ ನಗರಸಭೆಗೆ ಹಂಚಿಕೆಯಾಗಿರುವ ಅನುದಾನ 17 ಲಕ್ಷಗಳಿಗೆ ಬಂಡವಾಳ ಆಸ್ತಿಗಳ ಅವತರಣೆ ಶೇ.24.10 ಯೋಜನೆಯಲ್ಲಿ ಎಸ್‌ಸಿಎಸ್‌ಪಿ ಯೋಜನೆಗೆ 27ಲಕ್ಷ ರು. ಹಾಗೂ ಟಿಎಸ್‌ಪಿ ಯೋಜನೆಗೆ 11 ಲಕ್ಷ ರು. ಕ್ರಿಯಾಯೋಜನೆ ತಯಾರಿಸುವ ಬಗ್ಗೆ ವಿಷಯ ಮಂಡಿಸಲಾಯಿತು. 2025-2026ನೇ ಸಾಲಿಗೆ ಎಸ್‌ಎಫ್‌ಸಿ ಕುಡಿಯುವ ನೀರು ಯೋಜನೆಯಲ್ಲಿ ಹಂಚಿಕೆಯಾಗಿರುವ ಅನುದಾನಕ್ಕೆ ಏ.25 ರೊಳಗೆ ಹಂಚಿಕೆಯಾಗಿರುವ 9.32‌ ಲಕ್ಪ ಅನುದಾನಕ್ಕೆ ಕ್ರಿಯಾ ಯೋಜನೆ ಸಿದ್ದಪಡಿಸುವುದು.

2025-26ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಹಂಚಿಕೆಯಾಗಿರುವ ಅನುದಾನಕ್ಕೆ ಏ.25 ರೊಳಗೆ ಯೋಜನೆ ಸಿದ್ಧಪಡಿಸಿ 351 ಲಕ್ಷಗಳಿಗೆ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ವಿಷಯ ಮಂಡಿಸಲಾಯಿತು.

2025-26ನೇ ಸಾಲಿನ ಅವಧಿಗೆ ನಗರಸಭೆ ಸಾಮಾನ್ಯ ನಿಧಿಯಲ್ಲಿ ಶೇ.24.10ರಷ್ಟು ಯೋಜನೆಗಳಿಗೆ 30 ಲಕ್ಷ ರು. ಶೇ.7.25ರ ಯೋಜನೆಗಳಿಗೆ 9 ಲಕ್ಷ ರು. ಹಾಗೂ ಶೇ 5 ರ ಯೋಜನೆಗಳಿಗೆ 7 ಲಕ್ಷ ರೂಗಳನ್ನು ಕಾಯ್ದಿರಿಸಿದ್ದು ಕಾಯ್ದಿರಿಸಲಾದ ಮೊತ್ತಕ್ಕೆ ಕ್ರಿಯಾ ಯೋಜನೆಗಳ ಕಾರ್ಯಕ್ರಮಗಳನ್ನು ರೂಪಿಸಲು ಚರ್ಚಿಸಲಾಯಿತು.

ನಗರಸಭೆ ವ್ಯಾಪ್ತಿಯಲ್ಲಿನ ಕಟ್ಟಡ ನೆಲಸಮಗೊಳಿಸಲು ಅನುಮತಿ ನೀಡುವ ಸಂದರ್ಭದಲ್ಲಿ ವಾಸೋಪಯೋಗದ ಕಟ್ಟಡಗಳಿಗೆ 1,500, ವಾಣಿಜ್ಯ ಉದ್ದೇಶದ ಕಟ್ಟಡಗಳಿಗೆ 3,000 ಶುಲ್ಕ ಪಾವತಿಸಿಕೊಳ್ಳುತ್ತಿದ್ದು ಅಳತೆ ಆಧಾರದ ಮೇಲೆ ಶುಲ್ಕ ನಿಗದಿಪಡಿಸಿ ಪಾವತಿಸಿಕೊಳ್ಳುವ ಬಗೆಗಿನ ವಿಷಯಗಳನ್ನು ಸಭೆಯಲ್ಲಿ ಮಂಡಿಸಲಾಯಿತು.

ಈ ವೇಳೆ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಸದಸ್ಯರಾದ ಈ.ಮಂಜುನಾಥ್, ಗುಂಡೇಶ್ ಕುಮಾರ್, ಎಂ.ಡಿ ಸಣ್ಣಪ್ಪ, ವಿಠ್ಠಲ ಪಾಂಡುರಂಗ, ಜಗದೀಶ್, ಮಹೇಶ್ ಪಲ್ಲವ, ಬಾಲಕೃಷ್ಣ, ವೈಪಿಡಿ ದಾದಾಪೀರ್, ಚಿತ್ರ ಜಿತ್ ಯಾದವ್, ಶಿವರಂಜನಿ, ಶಂಷುನ್ನಿಸಾ, ಶಿವಕುಮಾರ್, ಗಿರೀಶ್ ಸೇರಿ ಹಲವು ಸದಸ್ಯರು ಉಪಸ್ಥಿತರಿದ್ದರು.