ಹುಣಸೇಹಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

| Published : Oct 19 2025, 01:00 AM IST

ಸಾರಾಂಶ

ಹೊಸಕೋಟೆ: ತಾಲೂಕಿನ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ತರುವ ಮೂಲಕ ಅವಿರತ ಶ್ರಮಿಸುತ್ತಿದ್ದು ೨ ಕೋಟಿ ವೆಚ್ಚದಲ್ಲಿ ಹುಣಸೆಹಳ್ಳಿ, ಬಿಸನಹಳ್ಳಿ, ಮಾಕನಹಳ್ಳಿ ರಸ್ತೆಯನ್ನು ಅಗಲೀಕರಣ ಮಾಡಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೆಗೌಡ ಹೇಳಿದರು.

ಹೊಸಕೋಟೆ: ತಾಲೂಕಿನ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ತರುವ ಮೂಲಕ ಅವಿರತ ಶ್ರಮಿಸುತ್ತಿದ್ದು ೨ ಕೋಟಿ ವೆಚ್ಚದಲ್ಲಿ ಹುಣಸೆಹಳ್ಳಿ, ಬಿಸನಹಳ್ಳಿ, ಮಾಕನಹಳ್ಳಿ ರಸ್ತೆಯನ್ನು ಅಗಲೀಕರಣ ಮಾಡಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೆಗೌಡ ಹೇಳಿದರು.

ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಹುಣಸೆಹಳ್ಳಿ ಗ್ರಾಮದಲ್ಲಿ 2 ಕೋಟಿ ವೆಚ್ಚದ ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು ೪೦ ಕೋಟಿಗೂ ಅಧಿಕ ಹಣ ಇದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಯಲ್ಲಿ ರಸ್ತೆಗಳು ಸಾಗಲಿವೆ ಎಂದರು.

ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಬ್ಯಾನ್ ಮಾಡುತ್ತಿವೆ ಎಂದು ಎಲ್ಲೂ ಸಹ ಯಾರೂ ಹೇಳಿಲ್ಲ. ಬದಲಾಗಿ ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜನೆಗೆ ನಿಷೇಧ ಹೇರುವಂತೆ ಚರ್ಚೆ ಮಾಡಲಾಗಿದೆ ಅಷ್ಟೆ. ವಿನಾಕಾರಣವಾಗಿ ಬಿಜೆಪಿಯವರು ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ವೇಳೆ ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಭೈರೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಕೋಡಿಹಳ್ಳಿ ಸುರೇಶ್, ಮಾಜಿ ಅಧ್ಯಕ್ಷ ಕೋಡಿಹಳ್ಳಿ ಸೊಣ್ಣಪ್ಪ, ನಿರ್ದೇಶಕರಾದ ಗಟ್ಟಿಗನಬ್ಬೆ ಸುನಿಲ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಮೂರ್ತಿ, ಬಿಎಂಆರ್‌ಡಿಎ ಸದಸ್ಯ ಡಾ.ಎಚ್‌ಎಮ್ ಸುಬ್ಬರಾಜು, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗ ರಾಜ್ಯ ಸಂಚಾಲಕ ಜಿನ್ನಾಗರ ಜಗನ್ನಾಥ್,ಮಾಜಿ ತಾಪಂ ಅಧ್ಯಕ್ಷೆ ರಾಣಿ ರಾಮಚಂದ್ರ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

ಫೋಟೋ: 16 ಹೆಚ್‌ಎಸ್‌ಕೆ 3

ಹೊಸಕೋಟೆ ತಾಲೂಕಿನ ಹುಣಸೆಹಳ್ಳಿ ಗ್ರಾಮದಲ್ಲಿ 2 ಕೋಟಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು.