ಜೆಇಇ ಪರೀಕ್ಷೆಯಲ್ಲಿ ಶೇ.94 ಅಂಕ ಪಡೆದ ರೋಹಿಣಿ

| Published : Feb 21 2024, 02:02 AM IST

ಜೆಇಇ ಪರೀಕ್ಷೆಯಲ್ಲಿ ಶೇ.94 ಅಂಕ ಪಡೆದ ರೋಹಿಣಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ದುಗ್ಗಾವರ ಗ್ರಾಮದ ಮುಖ್ಯ ಶಿಕ್ಷಕ ಜಯಣ್ಣನವರ ಪುತ್ರಿ ಜೆ.ರೋಹಿಣಿ ಇತ್ತೀಚೆಗೆ ನಡೆದ ಜೆಇಇ ಪರೀಕ್ಷೆಯಲ್ಲಿ ಶೇ.94.60 ಅಂಕಗಳಿಸಿದ್ದಾರೆ.

ಚಳ್ಳಕೆರೆ: ಶೈಕ್ಷಣಿಕ ಕ್ಷೇತ್ರದಲ್ಲೂ ಸಹ ನಿರೀಕ್ಷೆಗೂ ಮೀರಿ ಹೆಚ್ಚು ಪೈಪೋಟಿ ನಡೆಯುತ್ತಿದ್ದು, ಪ್ರತಿಯೊಂದು ಪರೀಕ್ಷೆಯಲ್ಲೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸುವ ಮೂಲಕ ಶೈಕ್ಷಣಿಕ ಪ್ರಗತಿಯಲ್ಲಿ ಮುಂದಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರೂ ಸಹ ತಮ್ಮದೇಯಾದ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯುತ್ತಿದ್ದು, ಇದು ಶೈಕ್ಷಣಿಕ ಬದಲಾವಣೆಗೆ ಇಟ್ಟದಿಟ್ಟ ಹೆಜ್ಜೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಟಿ.ವೀರೇಶ್ ತಿಳಿಸಿದರು.

ತಾಲ್ಲೂಕಿನ ದುಗ್ಗಾವರ ಗ್ರಾಮದ ಮುಖ್ಯ ಶಿಕ್ಷಕ ಜಯಣ್ಣನವರ ಪುತ್ರಿ ಜೆ.ರೋಹಿಣಿ ಇತ್ತೀಚೆಗೆ ನಡೆದ ಜೆಇಇ ಪರೀಕ್ಷೆಯಲ್ಲಿ ಶೇ.೯೪.೬೦ ಅಂಕ ಗಳಿಸಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯನ್ನು ಅಭಿನಂದಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲೇ ಹೆಚ್ಚು ವಿದ್ಯಾಭ್ಯಾಸ ಮಾಡಿದ ಜೆ.ರೋಹಿಣಿ ಜೆಇಇ ಪರೀಕ್ಷೆಯಲ್ಲೂ ಸಹ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿರುವುದು ಸಂತಸ ವಿಷಯವೆಂದರು. ಪ್ರಸ್ತುತ ಜೆ.ರೋಹಿಣಿ ಚಿತ್ರದುರ್ಗದ ಎಸ್‌ಆರ್‌ಎಸ್ ಕಾಲೇಜಿನಲ್ಲಿ ಅಭ್ಯಾಸ ಮುಂದುವರೆಸಿದ್ದಾರೆ. ವಿದ್ಯಾರ್ಥಿನಿ ತಾಯಿ ಲಕ್ಷ್ಮಿದೇವಿ, ಶಿಕ್ಷಕರಾದ ಕೆಂಚವೀರನಹಳ್ಳಿ ಎನ್.ಮಲ್ಲೇಶ್, ಎಂ.ಎನ್.ಮೃತ್ಯುಂಜಯ, ಎಚ್.ಒ.ರಾಜಣ್ಣ, ಗ್ರಾಮದ ಮುಖಂಡರಾದ ಬಂಡೆರಂಗಪ್ಪ, ಎಚ್.ರವಿಕುಮಾರ್, ಜಿ.ಚಂದ್ರಣ್ಣ, ಪಿ.ಕಾಟನಾಯಕ ಮುಂತಾದವರು ಅಭಿನಂದಿಸಿದರು.