ರಾಜ್ಯ ಆಹಾರ ಆಯೋಗದ ಸದಸ್ಯೆಯಾಗಿ ರೋಹಿಣಿಪ್ರಿಯ ನೇಮಕ

| Published : Mar 16 2024, 01:47 AM IST

ಸಾರಾಂಶ

ಕನಕಪುರ: ರಾಜ್ಯ ಆಹಾರ ಆಯೋಗದ ಸದಸೈಯಾಗಿ ರಾಜ್ಯ ಕಾಂಗ್ರೆಸ್ ಮಹಿಳಾ ಸದಸ್ಯೆ ಎ.ರೋಹಿಣಿ ಪ್ರಿಯ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕನಕಪುರ: ರಾಜ್ಯ ಆಹಾರ ಆಯೋಗದ ಸದಸೈಯಾಗಿ ರಾಜ್ಯ ಕಾಂಗ್ರೆಸ್ ಮಹಿಳಾ ಸದಸ್ಯೆ ಎ.ರೋಹಿಣಿ ಪ್ರಿಯ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತಮ್ಮ ಮೇಲೆ ವಿಶ್ವಾಸವಿಟ್ಟು ಬಹಳ ಮಹತ್ತರ ಜವಾಬ್ದಾರಿ ನೀಡಿ ಆಹಾರ ಆಯೋಗದ ಸಮಸ್ಯೆಯನ್ನಾಗಿ ನೇಮಕ ಮಾಡಿರುವ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ರೋಹಿಣಿ ಪ್ರಿಯ ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬೆಂಗಳೂರಿನ ಸ್ವಗ್ರಹಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.