ಸಾರಾಂಶ
ಗದಗ: ಆದರ್ಶ ಸಮಾಜ ನಿರ್ಮಾಣವಾಗುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಮಕ್ಕಳಲ್ಲಿ ಆಂತರಿಕ ಮೌಲ್ಯ ವೃದ್ಧಿಸುವ ಕಾರ್ಯ ಶಿಕ್ಷಕರಿಂದ ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.
ಅವರು ಸೋಮವಾರ ನಗರದ ಉಷಾದೇವಿ ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್ ಸೆಂಟರ್‌ದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ 51 ಶಿಕ್ಷಕ ಶಿಕ್ಷಕಿಯರಿಗೆ ನೇಷನ್ ಬಿಲ್ಡರ್ ಅವಾರ್ಡ ಪ್ರಧಾನ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷೆ ನಾಗರತ್ನ ಮಾರನಬಸರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಇನ್ನರ್‌ವ್ಹೀಲ್ ಕ್ಲಬ್ ಗದಗ-ಬೆಟಗೇರಿ 51ನೇ ಜುಬೇಲಿ ವರ್ಷಾಚರಣೆಯಲ್ಲಿದೆ. ಸಮಾಜಮುಖಿಯಾಗಿ ಹಲವಾರು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿದೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಕ್ಲಬ್‌ನ ಸದಸ್ಯರ ಸಹಮತದಿಂದ 51 ಶಿಕ್ಷಕ-ಶಿಕ್ಷಕಿಯರನ್ನು ವಿವಿಧ ಹಂತಗಳಲ್ಲಿ ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಲಾಗಿದೆ ಎಂದರು.
ಪ್ರೇಮಾ ಗುಳಗೌಡ್ರ ಕ್ಲಬ್ ಕಾರ್ಯದರ್ಶಿ ವೀಣಾ ತಿರ್ಲಾಪೂರ ಮುಂತಾದವರು ಮಾತನಾಡಿದರು. ಕ್ಲಬ್‌ನ ಮಾಜಿ ಅಧ್ಯಕ್ಷೆ ಅನ್ನಪೂರ್ಣ ವರವಿ, ಶಾಂತಾ ನಿಂಬಣ್ಣವರ, ಜ್ಯೋತಿ ದಾನಪ್ಪಗೌಡ್ರ, ಜಯಶ್ರೀ ಉಗಲಾಟ ಮುಂತಾದವರು ವೇದಿಕೆಯಲ್ಲಿದ್ದರು. ನಂದಾ ಬಾಳಿಹಳ್ಳಿಮಠ ಪ್ರಾರ್ಥಿಸಿದರು. ಪುಷ್ಪಾ ಭಂಡಾರಿ ನಿರೂಪಿಸಿದರು. ಸುಮಾ ಪಾಟೀಲ ವಂದಿಸಿದರು.ಕಾರ್ಯಕ್ರಮದಲ್ಲಿ ಮೀನಾಕ್ಷಿ ಕೊರವನವರ, ಪೂಜಾ ಭೂಮಾ, ರಾಜೇಶ್ವರಿ ಬಳ್ಳಾರಿ, ಸುಶೀಲಾ ಕೋಟಿ, ಅನ್ನಪೂರ್ಣ ವರವಿ, ವೀಣಾ ಕಾವೇರಿ, ರೇಣುಕಾ ಅಮಾತ್ಯ, ಜಯಶ್ರೀ ಪಾಟೀಲ, ವಿದ್ಯಾ ಗಂಜಿಹಾಳ, ಸಂಗೀತಾ ಪಟ್ಟಣಶೆಟ್ಟಿ, ಸಾಗರಿಕಾ ಅಕ್ಕಿ, ಪ್ರಿಯಾಂಕಾ ಹಳ್ಳಿ, ಸುವರ್ಣಾ ಮದರಿಮಠ, ರೇಖಾ ರೊಟ್ಟಿ ಮುಂತಾದವರಿದ್ದರು.