ಸಾರಾಂಶ
ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರೂಪ ಮೋಹನ್ ಅವರನ್ನು ಅಭಿನಂದಿಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಹೊಂಗನೂರು ಗ್ರಾಪಂ ನೂತನ ಅಧ್ಯಕ್ಷರಾಗಿ ರೂಪ ಮೋಹನ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು. ಗ್ರಾಪಂ ಅಧ್ಯಕ್ಷರಾಗಿದ್ದ ವಿಶಾಲಾಕ್ಷಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ನಿಗದಿಯಾಗಿತ್ತು. ಗ್ರಾಪಂ ಕಚೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರೂಪ ಮೋಹನ್ ಅವರು ಒಬ್ಬರೇ ನಾಮ ಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸುರೇಶ್ ಕುಮಾರ್ ಅಧಿಕೃತವಾಗಿ ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಪಿಡಿಒ ರಾಮೇಗೌಡ ಇದ್ದರು. ಗ್ರಾಪಂ ಅಭಿವೃದ್ದಿಗೆ ಶ್ರಮಿಸುವೆ:ನೂತನ ಅಧ್ಯಕ್ಷೆ ರೂಪ ಮೋಹನ್ ಮಾತನಾಡಿ, ಗ್ರಾಪಂ ಎಲ್ಲ ಸದಸ್ಯರು ಅವಿರೋಧವಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಆಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರು ಒಟ್ಟಿಗೆ ಗ್ರಾಮದ ಅಭಿವೃದ್ಧಿಗೆ ಶ್ರಮಿಸೋಣ. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಮೊದಲ ಆದ್ಯತೆಯಾಗಿರುತ್ತದೆ. ಸಂಸದರು, ಶಾಸಕರು ಹಾಗೂ ಸ್ಥಳಿಯ ಮುಖಂಡರು ಯಜಮಾನರ ಸಹಕಾರದೊಂದಿಗೆ ಹೆಚ್ಚಿನ ಅನುದಾನವನ್ನು ತಂದು ಗ್ರಾಪಂ ಅನ್ನು ಮಾದರಿ ಪಂಚಾಯಿತಿಯನ್ನಾಗಿ ಮಾಡುವುದಾಗಿ ತಿಳಿಸಿದರು. ನೂತನ ಅಧ್ಯಕ್ಷೆ ರೂಪ ಮೋಹನ್ ಹಾಗೂ ಸದಸ್ಯರನ್ನು ಭಾರಿ ಗಾತ್ರದ ಹಾರಗಳನ್ನು ಹಾಕಿ ಅಭಿನಂದಿಸಿ ಸಿಹಿ, ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ನವೀನ್‌ಕುಮಾರ್ ಸದಸ್ಯರಾದ ನಿರ್ಮಲರಾಮು, ಶಂಕರ್, ವಿಶಾಲಾಕ್ಷಿ, ರಂಗಸ್ವಾಮಿನಾಯಕ, ಮಹದೇವಶೆಟ್ಟಿ, ಶಿವಣ್ಣೇಗೌಡ, ಮಣಿಕಂಠ, ಕವಿತಾ, ಶೈಲಜಾ, ಕವಿತಾ, ಪೂವಮ್ಮ, ಚೈತ್ರ, ಸಿದ್ದರಾಜು, ನಾಗರತ್ನಮ್ಮ, ರಾಜಮ್ಮ, ಪದ್ಮ, ಮುಖಂಡರಾದ ದಿವಾಕರ್, ವೀರಣ್ಣ, ಹೊಂಗನೂರು ಪುಟ್ಟಸ್ವಾಮಿ, ತಾಪಂ ಮಾಜಿ ಸದಸ್ಯ ಸಿ.ಮಹದೇವ್, ಡಾ.ಸುಗಂಧರಾಜ್, ಕುನ್ನನಂಜಯ್ಯ, ಕುನ್ನನಾಯಕ, ಜಯರಾಜ್ ಇದ್ದರು.