ರೋಟರಿ ಕ್ಲಬ್‌ ಆಫ್‌ ಬೆಳಗಾವಿ ಅನ್ನೋತ್ಸವ ಆರಂಭ

| Published : Jan 05 2025, 01:30 AM IST

ಸಾರಾಂಶ

ಬೆಳಗಾವಿ ತಾಲೂಕಿನ ನಾನಾವಾಡಿಯ ಅಂಗಡಿ ತಾಂತ್ರಿಕ ಕಾಲೇಜು ಮೈದಾನದಲ್ಲಿ ರೋಟರಿ ಕ್ಲಬ್‌ ಆಫ್ ಬೆಳಗಾವಿ ಆಯೋಜಿಸಿದ ಅನ್ನೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಗಿದ್ದು, ಜ.14ರವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ತಾಲೂಕಿನ ನಾನಾವಾಡಿಯ ಅಂಗಡಿ ತಾಂತ್ರಿಕ ಕಾಲೇಜು ಮೈದಾನದಲ್ಲಿ ರೋಟರಿ ಕ್ಲಬ್‌ ಆಫ್ ಬೆಳಗಾವಿ ಆಯೋಜಿಸಿದ ಅನ್ನೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಗಿದ್ದು, ಜ.14ರವರೆಗೆ ನಡೆಯಲಿದೆ.

ಅನ್ನೋತ್ಸವಕ್ಕೆ ಚಾಲನೆ ನೀಡಿದ ಮಾಜಿ ಸಂಸದೆ ಮಂಗಲ ಅಂಗಡಿ ಮಾತನಾಡಿ, ದೇಶದಾದ್ಯಂತ ಭಾಗವಹಿಸುವವರಿಗೆ ಅವರ ಪಾಕ ಪದ್ಧತಿ ಪ್ರದರ್ಶಿಸಲು ಅತ್ಯುತ್ತಮ ವೇದಿಕೆಯಾಗಿದೆ. ಈ ಕಾರ್ಯಕ್ರಮಗಳಿಂದ ಬರುವ ಆದಾಯವನ್ನು ಸಮಾಜದ ಸುಧಾರಣೆಗೆ ಬಳಸಲಾಗುತ್ತದೆ, ಇದು ಒಂದು ಅತ್ಯುತ್ತಮ ಸಾಮಾಜಿಕ ಕಾರ್ಯವಾಗಿದೆ ಎಂದರು.

ಅತಿಥಿಯಾಗಿ ಡಾ.ಸ್ಫೂರ್ತಿ ಅಂಗಡಿ, ರೋಟರಿ ಜಿಲ್ಲಾ ಗವರ್ನರ್ ರೋಟೇರಿಯನ್ ಶರದ್ ಪೈ ಆಗಮಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ಸುಹಾಸ್ ಚಂದಕ್, ಪದ್ಮಜಾ ಶರದ್ ಪೈ, ಸಹಾಯಕ ಗವರ್ನರ್ ಪುಷ್ಪಾ ಪರ್ವತರಾವ್, ಅನ್ನೋತ್ಸವದ ಅಧ್ಯಕ್ಷ ಅಕ್ಷಯ ಕುಲಕರ್ಣಿ, ಶೈಲೇಶ ಮಾಂಗಲೆ, ಕಾರ್ಯದರ್ಶಿ ಮನೀಶಾ ಹೆರೇಕರ್ ಮತ್ತಿತರರು ಉಪಸ್ಥಿತರಿದ್ದರು.