ರೋಟರಿಯಿಂದ ಕಲಿಕಾ ಸಾಮಗ್ರಿ ವಿತರಣೆ

| Published : Jul 02 2025, 11:52 PM IST

ಸಾರಾಂಶ

ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ರೋಟರಿ ಕ್ಲಬ್‌ನ ಕಾರ್ಯದರ್ಶಿ ಡಾ.ಕುಮುದ ಎಸ್.ಎಸ್ ಮಾತನಾಡಿ, ಮಕ್ಕಳು ಚಿಕ್ಕವಯಸ್ಸಿನಲ್ಲಿ ಕಾಲಹರಣ ಮಾಡುವ ಬದಲು ಕಲಿಕೆಯ ಮೇಲೆ ಆಸಕ್ತಿಯನ್ನು ಹೊಂದಿ ಹೆಚ್ಚಿನ ಅಂಕಗಳ ಮತ್ತು ತಿಳಿವಳಿಕೆಯನ್ನು ಗಳಿಸಿಕೊಂಡು ಮುಂದೆ ಉತ್ತಮ ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.

ಚನ್ನರಾಯಪಟ್ಟಣ: ತಾಲೂಕಿನ ಬಾಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಬಿ. ವಿ. ವಿಜಯ ಮಾತನಾಡಿ, ರೋಟರಿ ಕ್ಲಬ್ ಶೈಕ್ಷಣಿಕವಾಗಿ ಪರಿಸರಕ್ಕೆ ಸಂಬಂಧಪಟ್ಟಂತೆ ನೀರಿಗೆ ಸಂಬಂಧಪಟ್ಟಂತೆ ಹಲವಾರು ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.

ರೋಟರಿ ಕ್ಲಬ್‌ನ ಕಾರ್ಯದರ್ಶಿ ಡಾ.ಕುಮುದ ಎಸ್.ಎಸ್ ಮಾತನಾಡಿ, ಮಕ್ಕಳು ಚಿಕ್ಕವಯಸ್ಸಿನಲ್ಲಿ ಕಾಲಹರಣ ಮಾಡುವ ಬದಲು ಕಲಿಕೆಯ ಮೇಲೆ ಆಸಕ್ತಿಯನ್ನು ಹೊಂದಿ ಹೆಚ್ಚಿನ ಅಂಕಗಳ ಮತ್ತು ತಿಳಿವಳಿಕೆಯನ್ನು ಗಳಿಸಿಕೊಂಡು ಮುಂದೆ ಉತ್ತಮ ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಮಂಜುಳಾ, ಕ್ಲಬ್‌ನ ಖಜಾಂಚಿ ನಟರಾಜ್, ಶಿವನಂಜೇಗೌಡ, ಬಿ.ಪಿ. ಹರೀಶ್, ರಾಜಶೇಖರ್, ಭರತ್‌ ಕುಮಾರ್ ಮತ್ತಿತರಿದ್ದರು.